Asianet Suvarna News Asianet Suvarna News

ಕೋಡಿ ಬಿತ್ತು ಯಶ್‌ ಅಭಿವೃದ್ಧಿ ಪಡಿಸಿದ್ದ ತಲ್ಲೂರು ಕೆರೆ: ರೈತರ ಮುಖದಲ್ಲಿ ಮಂದಹಾಸ

ಕೆಜಿಎಫ್ ಕಿಂಗ್ ರಾಕಿಂಗ್ ಸ್ಟಾರ್ ಯಶ್‌ರದ್ದು ಸೂಪರ್ ಹ್ಯಾಂಡ್. ತನ್ನ ಯಶೋ ಮಾರ್ಗದ ಮೂಲಕ ಕೊಪ್ಪಳದ ತಲ್ಲೂರಿನಲ್ಲಿ ಕೆರೆ ನಿರ್ಮಾಣ ಮಾಡಿದ್ರು. ಕೆರೆಯ ಹೂಳೆತ್ತಿಸಿ ಆ ಕೆರೆಯ ಜೀರ್ಣೋದ್ಧಾರ ಮಾಡಿದ್ರು. ಆ ಕೆರೆಯಿಂದ ತಲ್ಲೂರಿನ ಅಕ್ಕಪಕ್ಕದ ಹತ್ತಾರು ಹಳ್ಳಿಗಳಿಗೆ ನೀರು ಸಿಗುತ್ತಿದೆ.

Oct 4, 2022, 12:15 AM IST

ಕೆಜಿಎಫ್ ಕಿಂಗ್ ರಾಕಿಂಗ್ ಸ್ಟಾರ್ ಯಶ್‌ರದ್ದು ಸೂಪರ್ ಹ್ಯಾಂಡ್. ತನ್ನ ಯಶೋ ಮಾರ್ಗದ ಮೂಲಕ ಕೊಪ್ಪಳದ ತಲ್ಲೂರಿನಲ್ಲಿ ಕೆರೆ ನಿರ್ಮಾಣ ಮಾಡಿದ್ರು. ಕೆರೆಯ ಹೂಳೆತ್ತಿಸಿ ಆ ಕೆರೆಯ ಜೀರ್ಣೋದ್ಧಾರ ಮಾಡಿದ್ರು. ಆ ಕೆರೆಯಿಂದ ತಲ್ಲೂರಿನ ಅಕ್ಕಪಕ್ಕದ ಹತ್ತಾರು ಹಳ್ಳಿಗಳಿಗೆ ನೀರು ಸಿಗುತ್ತಿದೆ. ಇದೀಗ ಆ ಕೆರೆ ಮತ್ತೆ ಕೋಡಿ ಬಿದ್ದಿದೆ. ಈ ಹಿಂದೆ 2008ರಲ್ಲಿ ಈ ಕೆರೆ ಕೋಡಿ ಬಿದ್ದಿತ್ತು. ಆದರೆ ಅನಂತರ ಕೆರೆ ಹೂಳು ತುಂಬಿಕೊಂಡು ನೀರು ನಿಲ್ಲುತ್ತಿರಲಿಲ್ಲ. ಕೊನೆಗೆ 2017ರಲ್ಲಿ ರಾಕಿಂಗ್ ಸ್ಟಾರ್ ಯಶ್ ಈ ಕೆರೆಯನ್ನ ಅಭಿವೃದ್ಧಿ ಪಡಿಸಿದ್ರು. ಕಳೆದ ಭಾರಿಯ ಮಳೆಗೆ ಈ ಕೆರೆ ತುಂಬಿದ್ರಿಂದ ಯಶ್ ದಂಪತಿ ಭಾಗೀನ ಅರ್ಪಿಸಿದ್ರು. ಈಗ 14 ವರ್ಷದ ನಂತರ ಈ ಕೆರೆ ಮತ್ತೆ ಕೋಡಿ ಬಿದ್ದಿದೆ. ಈ ಕೆರೆಯ ಫೋಟೋಗಳನ್ನ ನಟ ಯಶ್ ತಮ್ಮ ಯಶೋಮಾರ್ಗ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment