Asianet Suvarna News Asianet Suvarna News

Max Vs Devil: ದರ್ಶನ್, ಧ್ರುವ ಸರ್ಜಾ ಬಿಟ್ಟು ಕಿಚ್ಚ ಸುದೀಪ್‌ಗೆ ಒಲಿದ ಡಿಸೆಂಬರ್ ಲಕ್?

ಡಿಸೆಂಬರ್ ಅಂದ್ರೆ ಸ್ಯಾಂಡಲ್ ವುಡ್ ಪಾಲಿಗೆ ಲಕ್ಕಿ ತಿಂಗಳು. ಡಿಸೆಂಬರ್ ನಲ್ಲಿ ರಿಲೀಸ್ ಆಗಿ ಇಂಡಸ್ಟ್ರಿ ಹಿಟ್ ಆದ ಹಲವು ಸಿನಿಮಾಗಳಿವೆ.  ಸೋ ಬಿಗ್ ಸ್ಟಾರ್ ಗಳೆಲ್ಲಾ ಈ ಲಕ್ಕಿ ಡಿಸೆಂಬರ್ ಮೇಲೆ ಕಣ್ಣೀಟ್ಟಿರ್ತಾರೆ. ಈ ಬಾರಿಯ ಡಿಸೆಂಬರ್ ಗೆ ದರ್ಶನ್ ನಟನೆಯ ಡೆವಿಲ್ ಮತ್ತು ಧ್ರುವ ಸರ್ಜಾ ನಟನೆಯ KD ಸಿನಿಮಾ ಬರೋದು ಫಿಕ್ಸ್ ಆಗಿತ್ತು. 

First Published Sep 29, 2024, 4:31 PM IST | Last Updated Oct 1, 2024, 2:34 PM IST

ಡಿಸೆಂಬರ್ ಅಂದ್ರೆ ಸ್ಯಾಂಡಲ್ ವುಡ್ ಪಾಲಿಗೆ ಲಕ್ಕಿ ತಿಂಗಳು. ಡಿಸೆಂಬರ್ ನಲ್ಲಿ ರಿಲೀಸ್ ಆಗಿ ಇಂಡಸ್ಟ್ರಿ ಹಿಟ್ ಆದ ಹಲವು ಸಿನಿಮಾಗಳಿವೆ.  ಸೋ ಬಿಗ್ ಸ್ಟಾರ್ ಗಳೆಲ್ಲಾ ಈ ಲಕ್ಕಿ ಡಿಸೆಂಬರ್ ಮೇಲೆ ಕಣ್ಣೀಟ್ಟಿರ್ತಾರೆ. ಈ ಬಾರಿಯ ಡಿಸೆಂಬರ್ ಗೆ ದರ್ಶನ್ ನಟನೆಯ ಡೆವಿಲ್ ಮತ್ತು ಧ್ರುವ ಸರ್ಜಾ ನಟನೆಯ KD ಸಿನಿಮಾ ಬರೋದು ಫಿಕ್ಸ್ ಆಗಿತ್ತು. ಆದ್ರೆ ಈಗ ಸೀನ್ ಉಲ್ಟಾ ಪಲ್ಟಾ ಆಗಿದೆ. ಡಿಸೆಂಬರ್​​ಗೆ ಕಿಚ್ಚನ ಮ್ಯಾಕ್ಸ್ ಬರೋದು ಫಿಕ್ಸ್ ಆಗಿದೆ. ದಚ್ಚು ಕಿಚ್ಚ ಧ್ರುವನ ಡಿಸೆಂಬರ್ ಕಹಾನಿ ಇಲ್ಲಿದೆ ನೋಡಿ. ಡೆವಿಲ್​ ದಿ ಹೀರೋ ದರ್ಶನ್​ ಜೈಲು ಸೇರಿದ್ದಾರೆ. ದರ್ಶನ್ ನಟನೆಯ ಡೆವಿಲ್ ಕತೆ ಏನು ಅನ್ನೋದಕ್ಕೆ ಉತ್ತರವೇ ಸಿಕ್ಕಿಲ್ಲ. ಆ ಕಡೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾರ್ಟಿನ್​ ಸಿನಿಮಾವನ್ನ ಅಕ್ಟೋಬರ್​ 11ಕ್ಕೆ ವಿಶ್ವದಾದ್ಯಂತ ತರುತ್ತಿದ್ದಾರೆ. 

ಇದಾದ ಬಳಿಕ ಕೆಡಿ ಸಿನಿಮಾವನ್ನ ಡಿಸೆಂಬರ್​ನಲ್ಲಿ ರಿಲೀಸ್ ಮಾಡೋ ಐಡಿಯಾ ಹಾಕಿದ್ರು. ಆದ್ರೆ ಅವರನ್ನೆಲ್ಲಾ ಸೈಡ್​​ಗೆ ಹಾಕಿರೋ ಬಾದ್​​ಷಾ ತನ್ನ ಫ್ಯಾನ್ಸ್​ಗೆ ಹೊಸ ಸುದ್ದಿಯೊಂದನ್ನ ಕೊಡುತ್ತಿದ್ದಾರೆ. ಅದು ಮ್ಯಾಕ್ಸ್ ರಿಲೀಸ್ ಡೇಟ್​ ಅಪ್ಟೇಡ್​. ಡಿಸೆಂಬರ್ ಅಂದ್ರೆ ಕನ್ನಡ ಚಿತ್ರರಂಗದ ಪಾಲಿಗೆ ಅಕ್ಷರಶಃ ಲಕ್ಕಿ ಮಂತ್. ಮುಂಗಾರು ಮಳೆ, ಮಿಸ್ಟರ್ ಌಂಡ್ ಮಿಸೆಸ್ ರಾಮಾಚಾರಿಯಿಂದ ಕೆಜಿಎಫ್ ವರೆಗೂ ಹಲವು ಇಂಡಸ್ಟ್ರಿ ಹಿಟ್ ಅನ್ನಿಸಿಕೊಂಡ ಸಿನಿಮಾಗಳು ರಿಲೀಸ್ ಆಗಿದ್ದು ಇದೇ ತಿಂಗಳಲ್ಲಿ. ಅಷ್ಟೆಲ್ಲಾ ಯಾಕೆ ಕಳೆದ ವರ್ಷ ಡಿಸೆಂಬರ್ ಕೊನೆ ವಾರ ತೆರೆಗೆ ಬಂದ ಕಾಟೇರ ಕೂಡ ಸಕ್ಸಸ್ ಆಗಿದ್ದು ಇದೇ ಡಿಸೆಂಬರ್​ನಲ್ಲಿ. ಕಾಟೇರ ಸಿನಿಮಾ ಬರೀ ಕರ್ನಾಟಕದಲ್ಲೇ 200 ಪ್ಲಸ್ ಕೋಟಿ ಗಳಿಕೆ ಮಾಡಿ, ದರ್ಶನ್ ಕರೀಯರ್ ನಲ್ಲೇ ಬಿಗ್ಗೆಸ್ಟ್ ಹಿಟ್ ಅನ್ನಿಸಿಕೊಂಡಿತ್ತು. ಸೋ ದರ್ಶನ್ ಈ ಬಾರಿಗೂ ಡಿಸೆಂಬರ್ ಮೇಲೆ ಕಣ್ಣಿಟ್ಟಿದ್ರು. 

ಅದು ಡೆವಿಲ್ ಸಿನಿಮಾವನ್ನ ಹಿಡಿದುಕೊಂಡು. ಡೆವಿಲ್​​ಅನ್ನ ಈ ವರ್ಷದ ಕ್ರಿಸ್ ಮಸ್ ಗೆ ರಿಲೀಸ್ ಅಂತ ಡೇಟ್​ ಲಾಕ್​ ಮಾಡಿದ್ರು. ಆದ್ರೆ ಈ ಡೆವಿಲ್ ಈಗ​ ಜೈಲಲ್ಲಿ ಲಾಕ್ ಆಗಿದ್ದಾರೆ. ಇದರಿಂದ ಡೆವಿಲ್ ಡಬ್ಬದಲ್ಲಿ ಕುಳಿತಿದೆ. ದರ್ಶನ್ ರಿಲೀಸ್ ಯಾವಾಗ ಅನ್ನೋದ್ರ ಮೇಲೆ ಡೆವಿಲ್ ರಿಲೀಸ್ ಭವಿಷ್ಯ ನಿರ್ಧಾರವಾಗಲಿದೆ. ಡಿಸೆಂಬರ್ ರೇಸ್ ನಿಂದ ಡೆವಿಲ್ ಕಿಕ್ ಔಟ್ ಆಗಿದೆ. ಇನ್ನೂ ಡಿಸೆಂಬರ್ ನಲ್ಲಿ ಧ್ರುವ ಸರ್ಜಾ ನಟನೆಯ KD ಸಿನಿಮಾ ಕೂಡ ತೆರೆಗೆ ಬರೋದಾಗಿ ಅನೌನ್ಸ್ ಮೆಂಟ್ ಆಗಿದೆ. ಜೋಗಿ ಪ್ರೇಮ್ ನಿರ್ದೇಶನದ, KVN ಪ್ರೊಡಕ್ಷನ್ಸ್ ನಿರ್ಮಾಣದ KD ಕೂಡ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಮೂವಿ. KD ಟೀಮ್ ರಿಲೀಸ್ ಡೇಟ್ ಅನ್ನ ಡಿಸೆಂಬರ್​ ಅಂತ ಅನೌನ್ಸ್ ಮಾಡಿದಾಗ ದರ್ಶನ್ v/s ಧ್ರುವ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಸ್ಟಾರ್ಟ್ ಆಗಿತ್ತು. 

ಈ ಎರಡೂ ಮೆಗಾ ಸಿನಿಮಾಗಳ ಮಧ್ಯೆ ಬಾಕ್ಸ್ ಆಫೀಸ್ ಕಾಳಗ ನಡೆಯುತ್ತೆ ಅಂತ ಟಾಕ್ ಆಗಿತ್ತು. ಈಗ ಡೆವಿಲ್ ಅಷ್ಟೇ ಅಲ್ಲ KD ಕೂಡ ಡಿಸೆಂಬರ್ ನಲ್ಲಿ ರಿಲೀಸ್ ಆಗಲ್ಲ. ಯಾಕಂದ್ರೆ ಕೆಡಿ ಸಿನಿಮಾದ ಶೂಟಿಂಗ್ ಇನ್ನೂ ಮುಗಿದೇ ಇಲ್ಲ. KD, ಡೆವಿಲ್ ಎರಡೂ ಡಿಸೆಂಬರ್ ರೇಸ್ ನಿಂದ ಔಟ್ ಆದ ಬೆನ್ನಲ್ಲೇ ಈ ರೇಸ್ ಗೆ ಅಚ್ಚರಿಯ ಎಂಟ್ರಿ ಕೊಟ್ಟಿದ್ದಾರೆ ಬಾದ್​ಷಾ ಕಿಚ್ಚ ಸುದೀಪ್. ಹೌದು ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಡಿಸೆಂಬರ್ 20ಕ್ಕೆ ರಿಲೀಸ್ ಆಗೋದು ಬಹುತೇಕ ಫಿಕ್ಸ್ ಆಗಿದೆ. ಇಷ್ಟು ದಿನ ಸುದೀಪ್​ ನಟನೆಯ ಮ್ಯಾಕ್ಸ್ ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ ಅಂತ ಅಂದುಕೊಂಡಿದ್ದವರೆಲ್ಲಾ ಈಗ ಡಿಸೆಂಬರ 20ಕ್ಕೆ ಮ್ಯಾಕ್ಸ್ ಬರೋದು ಫಿಕ್ಸ್ ಅಂತ ಆ ಡೇಟ್​​ನ ತಲೆಯಲ್ಲಿ ಸೇವ್ ಮಾಡಿಕೊಳ್ಳಬಹುದು. 

ವಿಜಯ್ ಕಾರ್ತಿಕೇಯನ್ ನಿರ್ದೇಶನದ , ವಿ ಕ್ರಿಯೇಷನ್ಸ್ ನಿರ್ಮಾಣದ ಮ್ಯಾಕ್ಸ್ ಪ್ಯಾನ್ ಇಂಡಿಯಾದಲ್ಲಿ ದೊಡ್ಡ ನಿರೀಕ್ಷೆ ಸೃಷ್ಟಿಸಿರೋ ಸಿನಿಮಾ. ಚಿತ್ರದ ಬಹುತೇಕ ಕೆಲಸಗಳನ್ನ ಕಂಪ್ಲೀಟ್ ಮಾಡಿ ರಿಲೀಸ್ ಡೇಟ್ ಲಾಕ್ ಮಾಡೋಕೆ ಕಾಯ್ತಾ ಇದ್ದ ಮ್ಯಾಕ್ಸ್ ಟೀಮ್ ಗೆ ಈಗ ಲಕ್ಕಿ ಡಿಸೆಂಬರ್ ಸಿಕ್ಕಿದೆ. ಡೆವಿಲ್ ಲಾಕ್ ಮಾಡಿಕೊಂಡಿದ್ದ ಡೇಟ್ ನ ಈಗ  ಸುದೀಪ್ ಬ್ಲಾಕ್ ಮಾಡಿದ್ದಾರಂತೆ. ಈ ಭಾರಿ ಇಯರ್ ಎಂಡ್ ಗೆ ಮ್ಯಾಕ್ಸಿಮಮ್ ಎಂಟರ್ ಟೈನ್ ಮೆಂಟ್ ಕೊಡ್ತಿನಿ ಅಂತ ಪ್ರಾಮೀಸ್ ಮಾಡ್ತಾ ಇದ್ದಾರೆ ಸುದೀಪ್.