ಬಿಟ್ಹಾಕಿ #MeToo ಫೈಟ್.. ಕಿಚ್ಚನ ಪಾಸಿಟಿವ್ ಥಾಟ್: ಯಾರೇನೇ ಅನ್ನಲಿ.. ನಾವು ಹಿರಿಯರ ಹಾದಿಯಲ್ಲಿ!

ನಮ್ಮದು ಬಹುದೊಡ್ಡ ಇತಿಹಾಸ ಇರೋ ಚಿತ್ರೋದ್ಯಮ, ಯಾರು ಏನೇ ಆರೋಪ ಮಾಡಿದ್ರೂ ನಮ್ಮ ಇಂಡಸ್ಟ್ರಿಯ ಗರಿಮೆ ಕಡಿಮೆ ಆಗೋದಿಲ್ಲ ಅನ್ನೋ ಮಾತು ಹೇಳಿದ್ರು ಸುದೀಪ್. 
 

First Published Sep 23, 2024, 4:40 PM IST | Last Updated Oct 1, 2024, 2:35 PM IST

ಮಲಯಾಳಂ ಸಿನಿರಂಗದಿಂದ ಕನ್ನಡದ ಕಡೆಗೂ ಮೀಟು ಗಾಳಿ ಬೀಸಿರೋದು ನಿಮಗೆ ಗೊತ್ತೇ ಇದೆ. ಕನ್ನಡ ಚಿತ್ರರಂಗದಲ್ಲೂ ಜಸ್ಟೀಸ್ ಹೇಮಾ ಮಾದರಿ ಕಮೀಟಿ ಮಾಡಬೇಕು ಅಂತ ಪರ- ವಿರೋಧ ಚರ್ಚೆಗಳು ನಡೀತಾ ಇವೆ. ದರ್ಶನ್ ಪ್ರಕರಣದಿಂದ ಮೊದಲೇ ಮುಜುಗರಕ್ಕೀಡಾಗಿದ್ದ ಚಿತ್ರರಂಗಕ್ಕೆ ಈ ಮೀಟು ವಿವಾದ ಮತ್ತಷ್ಟು ಇಕ್ಕಟ್ಟು ತಂದಿರಿಸಿದೆ. ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದು ಈ ನೆಗೆಟಿವ್ ವಾತಾವರಣದ ನಡುವೆ ಒಂದಿಷ್ಟು ಪಾಸಿಟಿವಿಟಿ ತಂದಿದ್ದಾರೆ. ಯೆಸ್ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಒಂದು ರೀತಿ ನೆಗೆಟಿವ್ ವಾತಾವರಣವೇ ಆವರಿಸಿಕೊಂಡಿದೆ. ಒಂದು ಕಡೆ ದರ್ಶನ್ ಪ್ರಕರಣ ಸ್ಯಾಂಡಲ್ ವುಡ್ ಕಲಾವಿದರಿಗೆ ಮುಜುಗರ ತಂದಿದೆ. ಮತ್ತೀಗ ಭುಗಿಲೆದ್ದಿರೋ ಮೀಟು ಗಲಾಟೆ ಮತ್ತಷ್ಟು ಇಕ್ಕಟ್ಟು ಸೃಷ್ಟಿಸಿದೆ. 

ಎಲ್ಲಿ ಹೋದ್ರೂ ಈ ಕುರಿತು ಎದುರಾಗೋ ಪ್ರಶ್ನೆಗಳಿಗೆ ಹೇಗಪ್ಪಾ ಉತ್ತರಿಸೋದು ಅನ್ನೋ ಪ್ರಶ್ನೆ ನಮ್ಮ ತಾರೆಯರನ್ನ ಕಾಡ್ತಾ ಇದೆ. ಕನ್ನಡ ಸಿನಿರಂಗದ ಕಲಾವಿದರು, ತಂತ್ರಜ್ಞರು ಮತ್ತು ಮಾಧ್ಯಮದವರು ಒಟ್ಟಾಗಿ   ಸ್ಯಾಂಡಲ್ ವುಡ್ ಕಪ್ ಬ್ಯಾಡ್ಮಿಂಟನ್ ಲೀಗ್ ಪಂದ್ಯಾವಳಿಯನ್ನ ಆಡಲಿದ್ದಾರೆ. ಈ ಟೂರ್ನಾಮೆಂಟ್ ನ ಜೆರ್ಸಿ ಲಾಂಚ್ ಇವೆಂಟ್  ವೇದಿಕೆಯಲ್ಲೂ ಕನ್ನಡ ಚಿತ್ರರಂಗದ ಸದ್ಯದ ಸ್ಥಿತಿ ಬಗ್ಗೆ ಮಾತುಗಳು ಕೇಳಿಬಂದ್ವು. ಹಿರಿಯ ನಿರ್ಮಾಪಕ ಸಾ ರಾ ಗೋವಿಂದು ನಮ್ಮ ಚಿತ್ರರಂಗದಲ್ಲಿ ಕೆಲವರು ಮೀಟು ನಂತಹ ಆರೋಪ ಮಾಡಿ ಉದ್ಯಮಕ್ಕೆ ಕಳಂಕ ತರ್ತಾ ಇದ್ದಾರೆ ಅಂತ ಬೇಸರ ವ್ಯಕ್ತಪಡಿಸಿದ್ರು. ಇನ್ನೂ ಈ ಜೆರ್ಸಿ ಲಾಂಚ್ ಇವೆಂಟ್ ಗೆ ಮುಖ್ಯ ಅತಿಥಿಯಾಗಿ ಬಂದಿದ್ದ ಕಿಚ್ಚ ಸುದೀಪ್ ಮಾತ್ರ ಹಾಸ್ಯ ಚಟಾಕಿ ಹಾರಿಸ್ತಾ ಈ ಬೇಸರದ ವಾತಾವರಣ ತಿಳಿಗೊಳಿಸಿದ್ರು. 

ನಮ್ಮದು ಬಹುದೊಡ್ಡ ಇತಿಹಾಸ ಇರೋ ಚಿತ್ರೋದ್ಯಮ, ಯಾರು ಏನೇ ಆರೋಪ ಮಾಡಿದ್ರೂ ನಮ್ಮ ಇಂಡಸ್ಟ್ರಿಯ ಗರಿಮೆ ಕಡಿಮೆ ಆಗೋದಿಲ್ಲ ಅನ್ನೋ ಮಾತು ಹೇಳಿದ್ರು ಸುದೀಪ್. ಚಿತ್ರರಂಗದಲ್ಲಿ ಬರೀ ನೆಗೆಟಿವಿಟಿನೇ ಹೆಚ್ಚಾಗಿದೆ, ಅದನ್ನೆಲ್ಲಾ ಮರೆತು ನಗ್ ನಗ್ತಾ ಇರೋಣ ಅಂತ ಹೇಳ್ತಾನೇ ಒಂದಿಷ್ಟು ತರ್ಲೆ, ತಮಾಷೆ ಮಾಡಿ ಎಲ್ಲರನ್ನೂ ನಗಿಸಿದ್ರು ಕಿಚ್ಚ ಸುದೀಪ್. ಇದೇ ತಿಂಗಳ 27, 28 ಮತ್ತು 29ಕ್ಕೆ ಸ್ಯಾಂಡಲ್ ವುಡ್ ಕಪ್ ಬ್ಯಾಡ್ಮಿಂಟನ್ ಲೀಗ್ ಪಂದ್ಯಾವಳಿ ನಡೆಯಲಿವೆ. ಸ್ಯಾಂಡಲ್ ವುಡ್ ಕಲಾವಿದರು, ತಂತ್ರಜ್ಞರು, ಕಿರುತೆರೆ ಕಲಾವಿದರು ಮತ್ತು ಮಾಧ್ಯಮದವರು ಕೂಡ ಇದ್ರಲ್ಲಿ ಭಾಗಿಯಾಗಲಿದ್ದಾರೆ. ಕಿಚ್ಚನ ಮಾತಿನಂತೆ ಇಂಡಸ್ಟ್ರಿಯ ಕೆಟ್ಟ ಸಮಯದಲ್ಲಿ ಈ ಪಂದ್ಯಾವಳಿ ಎಲ್ಲರ ಮೊಗದಲ್ಲಿ ಖುಷಿ, ಸಂತಸವನ್ನ ಮರಳಿ ತರುವ ಉತ್ಸಾಹದಲ್ಲಿದೆ.