27 ವರ್ಷಗಳ ಸಿನಿ ಜರ್ನಿ ಪೂರೈಸಿದ ಸುದೀಪ್: ಕಿಚ್ಚನ ಮೊದಲ ಸಿನಿಮಾ ಬಗ್ಗೆ ನಿಮಗೆ ಗೊತ್ತಾ?

ಕಿಚ್ಚ ಸುದೀಪ್ ಅನ್ನುವ ಆರಡಿ ಕಟೌಟ್ ಇಂದು ಭಾರತೀಯ ಸಿನಿ ರಂಗದಲ್ಲಿ ರಾರಾಜಿಸುತ್ತಿದ್ದು, 27 ವರ್ಷದ ಕಿಚ್ಚನ ಸಿನಿ ಜರ್ನಿ ರೋಚಕವಾಗಿದೆ. 
 

Share this Video
  • FB
  • Linkdin
  • Whatsapp

ಅಭಿನಯ ಚಕ್ರವರ್ತಿ ಸುದೀಪ್ 27 ವರ್ಷಗಳ ಸಿನಿ ಜರ್ನಿ ಪೂರೈಸಿದ್ದು, ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಕಿಚ್ಚನ ಗೋಲ್ಡನ್ ಅಧ್ಯಾಯ ಶುರುವಾಗಿದ್ದು ಹುಚ್ಚ ಸಿನಿಮಾದ ನಂತರ. ಸುದೀಪ್ ಸ್ಪರ್ಷ ಸಿನಿಮಾದಿಂದ ಬೆಳ್ಳಿತೆರೆಗೆ ಸ್ಪರ್ಷಿಸಿದ್ರು. ಆದ್ರೆ ಕನ್ನಡ ಮಾತ್ರವಲ್ಲ ತೆಲುಗು, ಹಿಂದಿ, ಹಾಗೂ ತಮಿಳು ಸೇರಿದಂತೆ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿರೋ ಸುದೀಪ್ ಕರಿಯರ್ ಶುರುವಾಗಿದ್ದು ಬ್ರಹ್ಮ ಅನ್ನೋ ಸಿನಿಮಾ ಮೂಲಕ. ಆ ಸಿನಿಮಾದಲ್ಲಿ ಅಂಬರೀಶ್ ಹೀರೋ ಆದ್ರೆ ಆ ಸಿನಿಮಾ ಅರ್ಧಕ್ಕೆ ನಿಂತು ಹೋಯ್ತು. ಅದಾದ ನಂತರ ಬಂದ ಓ ಕುಸುಮ ಬಾಲೆ ಅನ್ನೋ ಸಿನಿಮಾ ಕೂಡ ಅರ್ಧಕ್ಕೆ ನಿಂತಿತು. ಕೊನೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 1997 ರಲ್ಲಿ ತಾಯವ್ವ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಪರಿಚಯ ಆದ್ರು. ಆ ನಂತರ ಕಿಚ್ಚ ರಮೇಶ್ ಅರವಿಂದ್ ಅಭಿನಯದ ಪ್ರತ್ಯರ್ಥ ಸಿನಿಮಾದಲ್ಲಿ ನಟಿಸಿದ್ರು. ಕೊನೆಗೆ 2000 ರಲ್ಲಿ ತೆರೆಗೆ ಬಂದ ಸ್ಪರ್ಶ ಸಿನಿಮಾ ಕಿಚ್ಚನಿಗೆ ಚಿತ್ರರಂಗದಲ್ಲಿ ನೆಲೆ ನಿಲ್ಲಲು ಪೌಂಡೇಷನ್ ಹಾಕಿ ಕೊಡ್ತು. 

Related Video