ಚಾನ್ಸ್ ಕೊಡುವ ನೆಪದಲ್ಲಿ ಹಾಸಿಗೆಗೆ ಕರೆದಿದ್ರು: ಸ್ಫೋಟಕ ಸತ್ಯ ಬಿಚ್ಚಿಟ್ಟ ನಯನತಾರ
ಲೇಡಿ ಸೂಪರ್ ಸ್ಟಾರ್ ನಯನತಾರಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತಂತೆ. ಈ ಕುರಿತು ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.
ನಯನತಾರ ಬಿಗ್ ಹೀರೋಯಿನ್. ಅವರು ಈಗಿರೋ ಇಮೇಜ್ ನೋಡಿದ್ರೆ ಕಾಸ್ಟಿಂಗ್ ಕೌಚ್ ಇದೆಲ್ಲಾ ಹತ್ತಿರಕ್ಕೂ ಸುಳಿಯಲ್ಲ. ಆದ್ರೆ ನಯನತಾರಗೆ ಇಮೇಜ್ ಬರೋ ಮೊದಲು ಆದ ಡ್ಯಾಮೇಜ್ ಕತೆಯನ್ನು ಅವರು ಈಗ ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ಅವಕಾಶ ಕೊಡೋ ನೆಪದಲ್ಲಿ ನನ್ನನ್ನು ಹಾಸಿಗೆಗೆ ಕರೆದಿದ್ರು ಅಂತ ಲೇಡಿ ಸೂಪರ್ ಸ್ಟಾರ್ ನಯನತಾರ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ನಯನತಾರ ಬೆಂಗಳೂರಿನ ಹುಡುಗಿ. ಸಿನಿಮಾಗೆ ಬರೋ ಮೊದಲು ರೂಪದರ್ಶಿಯಾಗಿ ಪಾರ್ಟ್ ಟೈಂ ಜಾಬ್ ಮಾಡುತ್ತಿದ್ರು. ನಯನತಾರ ಮಲೆಯಾಳಂ ಚಿತ್ರರಂಗದಿಂದ ಸಿನಿಮಾ ರಂಗಕ್ಕೆ ಬಂದ್ರು. ಆಗಲೇ ಈ ಅನುಭವ ಆಗಿದ್ದು ಅಂತ ಹೇಳಿಕೊಂಡಿದ್ದಾರೆ.
'ದಸರಾ' ಸಿನಿಮಾದ ಟೀಸರ್ ರಿಲೀಸ್: ರಕ್ಷಿತ್ ಶೆಟ್ಟಿ & ರಾಜಮೌಳಿ ಸ್ನೇಹಕ್ಕೆ ಅಡಿಪಾಯ?