ಮ್ಯಾಕ್ಸ್ ಸಿನಿಮಾ ಯಶಸ್ಸು; ಚಾಮುಂಡೇಶ್ವರಿ ದೇವಿಗೆ ಹರಕೆ ತೀರಿಸಿದ ಕಿಚ್ಚ ಸುದೀಪ್!
ಮ್ಯಾಕ್ಸ್ ಚಿತ್ರದ ಯಶಸ್ಸಿನ ನಂತರ ಕಿಚ್ಚ ಸುದೀಪ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಹೊಸ ವರ್ಷದಲ್ಲಿ 'ಗನ್ಸ್ ಅಂಡ್ ರೋಸಸ್' ಚಿತ್ರದ ಮೂಲಕ ಅರ್ಜುನ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡ್ತಾ ಇದೆ. ಮ್ಯಾಕ್ಸ್ ಯಶಸ್ಸಿನಿಂದ ಫುಲ್ ಖುಷ್ ಆಗಿರೊ ಕಿಚ್ಚ ಇವತ್ತು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಹೋಗಿ ನಾಡದೇವತೆಗೆ ಪೂಜೆ ಸಲ್ಲಿಸಿದ್ದಾರೆ. ಭಾನುವಾರ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಬಂದ ಭಕ್ತರು ಕಿಚ್ಚ ಸುದೀಪ್ನ ನೋಡಿ ಸೆಲ್ಫಿ ಪಡೆದು ಸಂಭ್ರಮ ಪಟ್ಟಿದ್ದಾರೆ. ಮ್ಯಾಕ್ಸ್ ಮೂವಿಗೆ ತೆಲುಗು, ತಮಿಳಿನಲ್ಲೂ ಒಳ್ಳೆ ರೆಸ್ಪಾನ್ಸ್ ಬರ್ತಾ ಇದ್ದು, ವರ್ಷಾಂತ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಗೆಲುವಿನ ನಗೆ ಮೂಡಿದೆ.
ಹೊಸವರ್ಷದ ಮೊದಲ ಚಿತ್ರ ‘ಗನ್ಸ್ ಅಂಡ್ ರೋಸಸ್’:
ಕನ್ನಡದ ಹಲವು ಸೂಪರ್ ಹಿಟ್ ಚಿತ್ರಗಳಿಗೆ ಕಥೆ ಬರೆದಿರುವ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್, 'ಗನ್ಸ್ ಅಂಡ್ ರೋಸಸ್' ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡ್ತಾ ಇದ್ದಾನೆ. ಹೆಚ್ ಆರ್ ನಟರಾಜ್ ದ್ರೋಣ ಕ್ರಿಯೇಷನ್ಸ್ ಲಾಂಛನದಲ್ಲಿ ಈ ಚಿತ್ರವನ್ನ ನಿರ್ಮಿಸಿದ್ದು, ಶ್ರೀನಿವಾಸ್ ಕುಮಾರ್ ಗನ್ಸ್ ಅಂಡ್ ರೋಸಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅರ್ಜುನ್ ಗೆ ನಾಯಕಿಯಾಗಿ ಯಶ್ವಿಕ ನಿಷ್ಕಲ ಕಾಣಿಸಿಕೊಂಡಿದ್ದು ಹೊಸ ವರ್ಷದ ಮೊದಲ ಚಿತ್ರವಾಗಿ ಗನ್ಸ್ ಅಂಡ್ ರೋಸಸ್ ತೆರೆಗೆ ಬರಲಿದೆ.