Asianet Suvarna News Asianet Suvarna News

ಚಿತ್ರರಂಗದ ಬಹುತೇಕ ತಾರೆಯರು 'ವಿಕ್ರಾಂತ್ ರೋಣ' ವೇದಿಕೆಯಲ್ಲಿ, ಸುದೀಪ್‌ಗೆ ಸಾಥ್

ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ಟ್ರೇಲರ್‌ ರಿಲೀಸ್‌ ಆಗುವ ಒಂದು ದಿನ ಮೊದಲೇ ಚಿತ್ರದ 3ಡಿ ಟ್ರೇಲರ್‌ನ ಪ್ರೀಮಿಯರ್‌ ಶೋ  ನಡೆಯಿತು. 

Jun 23, 2022, 4:27 PM IST

ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ಟ್ರೇಲರ್‌ ರಿಲೀಸ್‌ ಆಗುವ ಒಂದು ದಿನ ಮೊದಲೇ ಚಿತ್ರದ 3ಡಿ ಟ್ರೇಲರ್‌ನ ಪ್ರೀಮಿಯರ್‌ ಶೋ  ನಡೆಯಿತು. ಈ ಟ್ರೇಲರ್‌ ಬಿಡುಗಡೆ ಮಾಡಿದ ರವಿಚಂದ್ರನ್‌, ಶಿವರಾಜ್‌ ಕುಮಾರ್‌, ರಮೇಶ್‌ ಅರವಿಂದ್‌, ರಕ್ಷಿತ್‌ ಶೆಟ್ಟಿ, ಸೃಜನ್‌ ಲೋಕೇಶ್‌, ರಿಷಬ್‌ ಶೆಟ್ಟಿ, ಧನಂಜಯ, ರಾಜ್‌ ಬಿ ಶೆಟ್ಟಿಅವರು ಸುದೀಪ್‌ರನ್ನು ಕೊಂಡಾಡಿದರು.

'ನೀವ್ ಹಂಗ್ ಮಾಡ್ಬೇಡಿ ಅಣ್ಣಾ, ಜನ ನಮ್ಗೆ ಹಿಡ್ಕೋತಾರೆ, ಪ್ಲೀಸ್ ಹಾಗ್ ಮಾಡ್ಬೇಡಿ'

ಚಿತ್ರರಂಗದ ಬಹುತೇಕ ಸ್ಟಾರ್‌ಗಳನ್ನು ಸುದೀಪ್‌ ಒಂದು ವೇದಿಕೆಯಲ್ಲಿ ಒಗ್ಗೂಡಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಬುಜ್‌ರ್‍ ಖಲೀಫಾದಲ್ಲಿ ಚಿತ್ರದ ತುಣುಕು ಪ್ರದರ್ಶನದಿಂದ ಆರಂಭವಾದ ಚಿತ್ರದ ಪಯಣವನ್ನು ನೆನೆಸಿಕೊಂಡ ಚಿತ್ರತಂಡ ಗಡಂಗ್‌ ರಕ್ಕಮ್ಮ ಮತ್ತು ಟ್ರೇಲರ್‌ನ 3ಡಿ ಪ್ರದರ್ಶನ ಆಯೋಜಿಸಿತ್ತು. ಟ್ರೇಲರ್‌ ನೋಡಿದ ಪ್ರತಿಯೊಬ್ಬರು ಟ್ರೇಲರ್‌ ಮೆಚ್ಚಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್‌, ‘ನನ್ನನ್ನು ಒಬ್ಬರು ಜಡ್ಜ್‌ ಮಾಡುತ್ತಾರೆ. ನನ್ನ ಸಿನಿಮಾ ನೋಡಿದರೂ ಪ್ರತಿಕ್ರಿಯಿಸಲ್ಲ. ಒಮ್ಮೆ ಅವರಿಗೆ ನನ್ನ ಸಿನಿಮಾದ ಕತೆ ಹೇಳೋಣ ಅಂತ ಹೋಗಿದ್ದೆ. ಆದರೆ ಅವರೇ ನನ್ನನ್ನು ಒಂದು ಕತೆ ಕೇಳುವಂತೆ ಮಾಡಿದರು. ಅವರಿಲ್ಲದೆ ಈ ಸಿನಿಮಾದ ಕತೆ ನಾನು ಕೇಳುತ್ತಿದ್ದೆನೋ ಇಲ್ಲವೋ. ಕತೆ ಕೇಳುವಂತೆ ಮಾಡಿ ಈ ಸಿನಿಮಾಗೆ ಕಾರಣಕರ್ತಳಾದ ನನ್ನ ಪತ್ನಿ ಪ್ರಿಯಾಗೆ ಧನ್ಯವಾದ. ನನ್ನ ಸ್ನೇಹಿತ, ಸಹೋದರ ಜಾಕ್‌ ಮಂಜುನಾಥ್‌ ಇಲ್ಲದಿದ್ದರೆ ಈ ಸಿನಿಮಾ ಆಗುತ್ತಲೇ ಇರಲಿಲ್ಲ. ಅವರು ಈ ಚಿತ್ರಕ್ಕೆ ಎಲ್ಲವನ್ನೂ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಪ್ರೀತಿ ತೋರಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ’ ಎಂದರು.

Video Top Stories