Asianet Suvarna News Asianet Suvarna News

'ನೀವ್ ಹಂಗ್ ಮಾಡ್ಬೇಡಿ ಅಣ್ಣಾ, ಜನ ನಮ್ಗೆ ಹಿಡ್ಕೋತಾರೆ, ಪ್ಲೀಸ್ ಹಾಗ್‌ ಮಾಡ್ಬೇಡಿ'

ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ ಚಿತ್ರದ ಟ್ರೇಲರ್‌ ಇಂದು (ಜೂ.23) ಸಂಜೆ 5.02ಕ್ಕೆ ಏಳು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಟ್ರೇಲರ್‌ ರಿಲೀಸ್‌ ಆಗುವ ಒಂದು ದಿನ ಮೊದಲೇ ಚಿತ್ರದ 3ಡಿ ಟ್ರೇಲರ್‌ನ ಪ್ರೀಮಿಯರ್‌ ಶೋ ಜೂ.22ರಂದು ನಡೆಯಿತು.

Jun 23, 2022, 1:06 PM IST

'ಶಿವಣ್ಣ ವೇದಿಕೆಯಲ್ಲಿದ್ದಾರೆ, ಕಾರ್ಯಕ್ರಮದಲ್ಲಿದ್ದಾರೆ ಅಂದ್ರೆ ಅಲ್ಲೊಂದು ಎನರ್ಜಿ, ಜೋಶ್, ಖುಷಿ, ಡ್ಯಾನ್ಸ್ ಇರುತ್ತೆ.  ಬನ್ನಿ ಮಾತಾಡಿ ಅಂದ್ರೆ ಶಿವಣ್ಣ ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತಾರೆ. ಅವರೊಬ್ಬರೇ ಮಾಡಲ್ಲ ಜೊತೆಗಿದ್ದವರೂ ಮಾಡುವಂತೆ ಮಾಡುತ್ತಾರೆ. ಅಂಥಾ ಎನರ್ಜಿಟಿಕ್ ಮನುಷ್ಯ ಅವರು. ನೀವ್ ಹೀಗೆ ಮಾಡಿದ್ರೆ ಜನ ನಮ್ಮಿಂದಾನೂ ಇದನ್ನೇ ನಿರೀಕ್ಷೆ ಮಾಡ್ತಾರೆ. ನಮ್ಮನ್ನು ಹಿಡ್ಕೋತಾರೆ, ಪ್ಲೀಸ್ ಹಾಗೆ ಮಾಡ್ಬೇಡಿ' ಎಂದು ಸುದೀಪ್, ಶಿವಣ್ಣರಿಗೆ ರಿಕ್ವೆಸ್ಟ್ ಮಾಡಿದರು.

Vikrant Rona: ನಾನು ಸುದೀಪ್ ಸರ್ ಫ್ಯಾನ್ ಅಸೋಸಿಯೇಷನ್ ಕಡೆಯಿಂದ ಬಂದಿದ್ದೇನೆ: ರಿಷಬ್ ಶೆಟ್ಟಿ

ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ ಚಿತ್ರದ ಟ್ರೇಲರ್‌ ಇಂದು (ಜೂ.23) ಸಂಜೆ 5.02ಕ್ಕೆ ಏಳು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಟ್ರೇಲರ್‌ ರಿಲೀಸ್‌ ಆಗುವ ಒಂದು ದಿನ ಮೊದಲೇ ಚಿತ್ರದ 3ಡಿ ಟ್ರೇಲರ್‌ನ ಪ್ರೀಮಿಯರ್‌ ಶೋ ಜೂ.22ರಂದು ನಡೆಯಿತು. ಈ ಟ್ರೇಲರ್‌ ಬಿಡುಗಡೆ ಮಾಡಿದ ರವಿಚಂದ್ರನ್‌, ಶಿವರಾಜ್‌ ಕುಮಾರ್‌, ರಮೇಶ್‌ ಅರವಿಂದ್‌, ರಕ್ಷಿತ್‌ ಶೆಟ್ಟಿ, ಸೃಜನ್‌ ಲೋಕೇಶ್‌, ರಿಷಬ್‌ ಶೆಟ್ಟಿ, ಧನಂಜಯ, ರಾಜ್‌ ಬಿ ಶೆಟ್ಟಿಅವರು ಸುದೀಪ್‌ರನ್ನು ಕೊಂಡಾಡಿದರು. ಚಿತ್ರರಂಗದ ಬಹುತೇಕ ಸ್ಟಾರ್‌ಗಳನ್ನು ಸುದೀಪ್‌ ಒಂದು ವೇದಿಕೆಯಲ್ಲಿ ಒಗ್ಗೂಡಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು. 

Video Top Stories