'ಬಿಲ್ಲಾ ರಂಗ ಬಾಷಾ' ಆಗಿ ಬರ್ತಿದ್ದಾರೆ ಕಿಚ್ಚ; ಯಾವಾಗ ಚಿತ್ರೀಕರಣ?

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವಾಗ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಕಿಚ್ಚ ಬಿಲ್ಲಾ ರಂಗ ಬಾಷಾ ಆಗಿ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎನ್ನಲಾಗಿದೆ. 

First Published Mar 3, 2023, 4:49 PM IST | Last Updated Mar 3, 2023, 4:49 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ರ ಕ್ರಿಕೆಟ್ ಹಬ್ಬ ಮುಗಿಯುತ್ತಾ ಬಂತು. ಮಾರ್ಚ್ 17ಕ್ಕೆ ಸಿಸಿಎಲ್ ಫೈನಲ್ ಆದ್ರೆ ನಮ್ ಹೆಬ್ಬುಲಿ ಮೈಂಡ್ ಸಿನಿಮಾ ಕಡೆ ತಿರುಗುತ್ತೆ. ಇದನ್ನ ಸ್ವತಹ ಕಿಚ್ಚನೇ ಹೇಳಿಕೊಂಡಿದ್ದಾರೆ. ಕ್ರಿಕೆಟ್ ಆಗ್ತಿದ್ದಂತೆ ಸಿನಿಮಾ ವರ್ಕ್ ಶುರು ಮಾಡುತ್ತೇನೆ ಎಂದಿದ್ದಾರೆ. ಇದೀಗ ಸುದೀಪ್ ಸಿನಿಮಾಗೆ ಕಾಯುತ್ತಿರೋರಿಗೆ ಭರ್ಜರಿ ಸುದ್ದಿಯೊಂದು ಸಿಗ್ತಿದೆ. ಸುದೀಪ್ ಭರ್ಜರ್ ಆಕ್ಷನ್ ದೃಶ್ಯ ಇರುವ ಬಿಲ್ಲಾ ರಂಗಾ ಬಾಷ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಬಿಲ್ಲ ರಂಗ ಭಾಷಾ ಸಿನಿಮಾಗೆ ಕಥೆ ಚಿತ್ರಕಥೆ ಬರೆಯುತ್ತಿರೋದು ನಿರ್ದೇಶಕ ಅನೂಪ್ ಭಂಡಾರಿ. ವಿಕ್ರಾಂತ್ ರೋಣದಲ್ಲಿ ಫ್ಯಾಂಟಸಿ ಲೋಕ ಸೃಷ್ಟಿಸಿ ಆಕ್ಷನ್ ಥ್ರಿಲ್ಲರ್ ಸ್ಟೋರಿ ಹೇಳಿದ್ದ ಅನೂಪ್ ಭಂಡಾರಿ ಅವರೇ ಬಿಲ್ಲ ರಂಗಾ ಭಾಷಾ ಸಿನಿಮಾಗೂ ಆಕ್ಷನ್ ಕಟ್ ಹೇಳ್ತಾರೆ.