ಕಿಚ್ಚನ ಮಾಸ್ ಅವತಾರ, ಮಧ್ಯರಾತ್ರಿ ಮ್ಯಾಕ್ಸ್ ಸಮರ! ಸುದೀಪ್ ಜೊತೆಗೆ ಹೆಜ್ಜೆ ಹಾಕಿದ ಡಾಲಿ ಧನಂಜಯ್

ಕಿಚ್ಚ ಸುದೀಪ್ ಅಭಿನಯದ 'ಮ್ಯಾಕ್ಸ್' ಸಿನಿಮಾ ಬಿಡುಗಡೆಯಾಗಿದೆ. ಚಿತ್ರದುರ್ಗದಲ್ಲಿ ಅದ್ದೂರಿ ಪ್ರೀ-ರಿಲೀಸ್ ಇವೆಂಟ್ ನಡೆದಿದ್ದು, ಚಿತ್ರದಲ್ಲಿ ಸುದೀಪ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಸ್ಪೆನ್ಷನ್ ನಂತರ ಮರಳುವ ಪೊಲೀಸ್ ಅಧಿಕಾರಿಯನ್ನು ಎದುರಿಸುವ ಸವಾಲುಗಳೇ ಕಥಾವಸ್ತು.

First Published Dec 25, 2024, 3:38 PM IST | Last Updated Dec 25, 2024, 3:38 PM IST

ಕಿಚ್ಚ ಸುದೀಪ್ ಮೋಸ್ಟ್ ಅವೇಟೆಡ್ ಮೂವಿ ಮ್ಯಾಕ್ಸ್ ರಿಲೀಸ್​ ಆಗಿದೆ. ಚಿತ್ರದುರ್ಗದಲ್ಲಿ ಫ್ಯಾನ್ಸ್ ಸಾಗರದ ನಡುವೆ ಮ್ಯಾಕ್ಸ್ ಪ್ರೀ ರಿಲೀಸ್ ಇವೆಂಟ್ ಕೂಡ ನಡೆಯಿತ್ತು. ಮ್ಯಾಕ್ಸ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅರ್ಜುನ್ ಮಹಾಕ್ಷಯ್ ಅನ್ನೋ ಖಡಕ್ ಪೊಲೀಸ್. ಎರಡು ತಿಂಗಳ ಸಸ್ಪೆನ್ಸನ್ ನಂತರ ಠಾಣೆಗೆ ಹಾಜರಾಗೋ ಮಹಾಕ್ಷಯ್​ಗೆ ಆ ರಾತ್ರಿಯೇ ಒಂದು ದೊಡ್ಡ ಸವಾಲು ಎದುರಾಗುತ್ತೆ. ಆ ಸವಾಲನ್ನ ಮ್ಯಾಕ್ಸ್ ಹೇಗೆ ಎದುರಿಸ್ತಾನೆ ಅನ್ನೋದೇ ಸಿನಿಮಾ ಕಹಾನಿ. ಮ್ಯಾಕ್ಸ್ ಟ್ರೈಲರ್ ನೋಡ್ತಾ ಇದ್ರೆ ಇದು ಪಕ್ಕಾ ಹೈವೋಲ್ಟೇಜ್ ಆಕ್ಷನ್ ಕಹಾನಿ ಅನ್ನೋದು ಗೊತ್ತಾಗುತ್ತೆ. ಕಿಚ್ಚ ಇಲ್ಲಿ ಮ್ಯಾಕ್ಸಿಮಮ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಜೊತೆ ವರಲಕ್ಷ್ಮೀ, ಸುನೀಲ್, ಉಗ್ರಂ ಮಂಜು, ಸಂಯುಕ್ತಾ ಹೊರನಾಡು ಸಿನಿಮಾದಲ್ಲಿ ಮಿಂಚಿದ್ದಾರೆ.

ಸಿಂಪಲ್ ಸೀರೆ, ಹಣೆಯಲ್ಲಿ ಕುಂಕುಮ; ಚೈತ್ರಾ ಕುಂದಾಪುರ ನಿಜಕ್ಕೂ ಮೇಕಪ್ ಹಾಕಲ್ವಾ?