ಅಖಾಡಕ್ಕಿಳಿದ ಬಿಲ್ಲ ರಂಗ ಭಾಷ, ಏನಿದು ಫಸ್ಟ್ ಬ್ಲಡ್ ರಹಸ್ಯ?

ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ 'ಬಿಲ್ಲ ರಂಗ ಭಾಷ' ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಹಿಮದ ನಡುವೆ ಕನ್ನಡಕ ಧರಿಸಿರುವ ಸುದೀಪ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Share this Video
  • FB
  • Linkdin
  • Whatsapp

ಏಪ್ರಿಲ್​ 16ಕ್ಕೆ ಸರ್​ಪ್ರೈಸ್​ವೊಂದನ್ನ ಕೊಡ್ತಿನಿ ಅಂದಿದ್ರು ಕಿಚ್ಚ ಸುದೀಪ್. ಇದೀಗ ಆ ಸರ್ಪ್ರೈಸ್ ಏನು ಅನ್ನೋದು ರಿವೀಲ್ ಆಗಿದೆ. ಕಿಚ್ಚನ ಬಹುನಿರೀಕ್ಷೆಯ ಬಿಲ್ಲ ರಂಗ ಭಾಷ ಸಿನಿಮಾದ ಶೂಟಿಂಗ್ ಶುರುವಾಗಿದೆ. ಸಿನಿಮಾ ಶುರುವಾಗೋ ವಿಷ್ಯ ಹಂಚಿಕೊಳ್ಳೋದ್ರ ಜೊತೆಗೆ ಚಿತ್ರದ ಫಸ್ಟ್ ಲುಕ್​ನ ತೋರಿಸಿದ್ದಾರೆ ಸುದೀಪ್. 

ಕಿಚ್ಚನ ಫಸ್ಟ್ ಲುಕ್ ಸೂಪರ್‌ ಆಗಿದ್ದು, ಹಿಮದ ನಡುವೆ ಕನ್ನಡಕ ಧರಿಸಿ ಸುದೀಪ್‌ ಪೋಸ್ ಕೊಟ್ಟಿದ್ದಾರೆ. ಇದರಲ್ಲಿ ಹಿಮದ ನಡುವೆ ದೊಡ್ಡ ಅರಮನೆ ಇದ್ದು, ಕಿಚ್ಚನ ಕನ್ನಡಕದಲ್ಲಿ ಹೊತ್ತಿ ಉರಿಯುತ್ತಿರುವ ಹಡಗಿನ ಚಿತ್ರವೊಂದು ಕಾಣಿಸಿಕೊಂಡಿದೆ. ಹಿಮ ತುಂಬಿರುವ ಬೆಟ್ಟಗಳ ಊರಿನಲ್ಲಿ ಸುದೀಪ್‌ ಯಾತ್ರೆಗೆ ಹೊರಟ ಸಾಹಸಿಗನಂತೆ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸ್ತಾ ಇದೆ.

ಬಿಲ್ಲ ರಂಗ ಬಾಷಾ ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿನಲ್ಲೂ ಮೂಡಿಬರಲಿದ್ದು ಇದೊಂದು ಬಿಗ್ ಪ್ಯಾನ್ ಇಂಡಿಯಾ ಮೂವಿಯಾಗಲಿದೆ. ವಿಕ್ರಾಂತ್ ರೋಣಗೆ ಆಕ್ಷನ್ ಕಟ್ ಹೇಳಿದ್ದ ಅನೂಪ್ ಭಂಡಾರಿ ಈ ಸಿನಿಮಾದ ಸಾರಥಿಯಾಗಿದ್ದು, ಮತ್ತೊಂದು ಫ್ಯಾಂಟಸಿ ಕಹಾನಿ ಹೇಳುವ ಉತ್ಸಾಹದಲ್ಲಿದ್ದಾರೆ. 

Related Video