‘ವಿಕ್ರಾಂತ್ ರೋಣ’ ವೇದಿಕೆಯಲ್ಲಿ ರಕ್ಕಮ್ಮ ಜಾಕ್ವೆಲಿನ್ ಜೊತೆ ಮಸ್ತ್ ಸ್ಟೆಪ್ಸ್ ಹಾಕಿದ ಕಿಚ್ಚ-ಸಲ್ಲು!

ವಿಕ್ರಾಂತ್ ರೋಣನ ಫ್ಯಾಂಟಸಿ ಪ್ರಪಂಚ ನೋಡೋಕೆ ಸಿನಿ ಪ್ರೇಕ್ಷಕರು ಸಿದ್ಧರಾಗಿ ನಿಂತಿದ್ದಾರೆ.  ಭರ್ಜರಿಯಾಗಿ ಟಿಕೆಟ್ ಬುಕ್ಕಿಂಗ್ ಆಗ್ತಿದೆ. ಪಾಕಿಸ್ತಾನ ಸೇರಿದಂತೆ 50ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಬರೋಬ್ಬರಿ ಏಳು ಸಾವಿರ ಸ್ಕ್ರೀನ್ಸ್ನಲ್ಲಿ ರೋಣನ ಪ್ರಪಂಚ ತೆರೆದುಕೊಳ್ಳಲಿದೆ. 

First Published Jul 27, 2022, 3:51 PM IST | Last Updated Jul 27, 2022, 3:51 PM IST

ವಿಕ್ರಾಂತ್ ರೋಣನ ಫ್ಯಾಂಟಸಿ ಪ್ರಪಂಚ ನೋಡೋಕೆ ಸಿನಿ ಪ್ರೇಕ್ಷಕರು ಸಿದ್ಧರಾಗಿ ನಿಂತಿದ್ದಾರೆ.  ಭರ್ಜರಿಯಾಗಿ ಟಿಕೆಟ್ ಬುಕ್ಕಿಂಗ್ ಆಗ್ತಿದೆ. ಪಾಕಿಸ್ತಾನ ಸೇರಿದಂತೆ 50ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಬರೋಬ್ಬರಿ ಏಳು ಸಾವಿರ ಸ್ಕ್ರೀನ್ಸ್ನಲ್ಲಿ ರೋಣನ ಪ್ರಪಂಚ ತೆರೆದುಕೊಳ್ಳಲಿದೆ. 

ವಿಕ್ರಾಂತ್ ರೋಣನಿಗೆ ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಯಾಗಿದೆ. ಸಲ್ಮಾನ್ ಖಾನ್ ಈ ಸಿನಿಮಾವನ್ನ ಪ್ರೇಕ್ಷಕರಿಗೆ ತಲುಪಿಸೋ ಜವಾಬ್ಧಾರಿ ಹೊತ್ತುಕೊಂಡಿದ್ದಾರೆ. ಈ ಸಿನಿಮಾ ಪ್ರಚಾರಕ್ಕೆ ಮುಂಬೈಗೆ ಹೋಗಿದ್ದ ಕಿಚ್ಚ ಆ್ಯಂಡ್ ಟೀಂ, ಸಲ್ಮಾನ್ರನ್ನ, ಹಾಗು ನಟಿ ಜನಿಲಿಯಾ ರಿತೇಶ್ ದೇಶ್ಮುಕ್ರನ್ನ ಚೀಫ್ ಗೆಸ್ಟ್ ಆಗಿ ಕರೆಸಿದ್ರು. ಸಲ್ಲು ಕಿಚ್ಚ ಸೇರಿ ರಾ ರಾ ರಕ್ಕಮ್ಮ ಜಾಕ್ವೆಲಿನ್ ಜೊತೆ ಭರ್ಜರಿ ಸ್ಟೆಪ್ಸ್ ಹಾಕಿದ್ದು ಸೂಪರ್ ಆಗಿತ್ತು. ವಿಕ್ರಾಂತ್ ರೋಣ ಸಿನಿಮಾ ಟೀಂ ಹೈದರಾಬಾದ್ನಲ್ಲಿ ಪ್ರೀ ರಿಲೀಸ್ ಇವೆಂಟ್ ಮಾಡಿದೆ. ಕಾರ್ಯಕ್ರಮಕ್ಕೆ ಬಂದಿದ್ದ ಅಕ್ಕಿನೇನಿ ನಾಗಾರ್ಜುನ ಕಿಚ್ಚನ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ.