ಕಿತ್ತಾಡುತ್ತಲೇ 4 ಹಿಟ್ ಕೊಟ್ಟಿದ್ಹೇಗೆ ಸುದೀಪ್-ರಮ್ಯಾ? ಕಿಚ್ಚ ಹೇಳಿದ ಆ ಕಿಚ್ಚಿನ ಕಥೆ
ಕಿಚ್ಚ ಸುದೀಪ್ ಮತ್ತು ರಮ್ಯಾ ಜೋಡಿ ಸ್ಯಾಂಡಲ್ವುಡ್ನ ಸೂಪರ್ ಹಿಟ್ ಜೋಡಿ. ಆದರೆ ಒಂದು ಕಾಲದಲ್ಲಿ ಇವರಿಬ್ಬರ ನಡುವೆ ದೊಡ್ಡ ಜಗಳ ನಡೆದಿತ್ತು. ಏನದು ಆ ಜಗಳದ ಕಥೆ?
ಕಿಚ್ಚ ಸುದೀಪ್ ಮತ್ತು ರಮ್ಯಾ ಜೋಡಿ ಸ್ಯಾಂಡಲ್ವುಡ್ನ ಸೂಪರ್ ಡೂಪರ್ ಹಿಟ್ ಜೋಡಿಗಳಲ್ಲಿ ಒಂದು. ರಂಗ SSLCನಿಂದ ಕಿಚ್ಚ ಹುಚ್ಚ ವರೆಗೂ 4 ಹಿಟ್ ಸಿನಿಮಾಗಳನ್ನ ಕೊಟ್ಟಿದೆ ಈ ಜೋಡಿ. ಇವತ್ತಿಗೂ ಸುದೀಪ್ ಮತ್ತು ರಮ್ಯಾ ನಡುವೆ ಒಳ್ಳೆ ದೋಸ್ತಿ ಇದೆ. ಆದ್ರೆ ದಶಕಗಳ ಹಿಂದೆ ಇವರ ನಡುವೆ ಅದೆಂಥಾ ಕುಸ್ತಿ ನಡೆದಿತ್ತು ಗೊತ್ತಾ? ಖುದ್ದು ಕಿಚ್ಚ ಹೇಳಿದ ಆ ಕೋಳಿ ಜಗಳದ ಕಥೆ ಇಲ್ಲಿದೆ ನೋಡಿ.
ಕಿಚ್ಚ ಸುದೀಪ್ ಮತ್ತು ರಮ್ಯಾ ಇಬ್ಬರ ಸ್ವಭಾವ ಉತ್ತರ - ದಕ್ಷಿಣ ಧ್ರುವ ಇದ್ದಂತೆ. ಮೊದಲನೇ ಸಾರಿ ಒಟ್ಟಾಗಿ ಸಿನಿಮಾ ಮಾಡಿದಾಗ ಇಬ್ಬರು ತಾರಾಮಾರಾ ಕಿತ್ತಾಡಿದ್ರು. ಇನ್ನೊಮ್ಮೆ ಒಬ್ಬರ ಮುಖ ಮತ್ತೊಬ್ರು ನೋಡಲ್ಲ ಅಂತ ಶಪಥ ಮಾಡಿದ್ರು. ಆದ್ರೆ ಮುಂದೇ ನಾಲ್ಕೇ ವರ್ಷದಲ್ಲಿ ಇಬ್ಬರು ಆಪ್ತಮಿತ್ರರಾಗಿಬಿಟ್ರು.
ಆವತ್ತಿಗೆ ದರ್ಶನ್ ಮತ್ತು ರಕ್ಷಿತಾ ಜೋಡಿ ಕನ್ನಡದ ಬೆಸ್ಟ್ ಜೋಡಿ ಅನ್ನಿಸಿಕೊಂಡಿತ್ತು. ರಕ್ಷಿತಾ-ರಮ್ಯಾ ನಡುವಿನ ಕೋಳಿ ಜಗಳ ಗೊತ್ತೇ ಇದೆ. ದರ್ಶನ್-ಸುದೀಪ್ ನಡುವೆಯೂ ಪೈಪೋಟಿ ಇದ್ದ ಕಾಲ ಅದು. ಸೋ ಆ ಟೈಂನಲ್ಲಿ ದರ್ಶನ್-ರಕ್ಷಿತಾಗೆ ಟಾಂಗ್ ಕೊಡ್ಲಿಕ್ಕೆ ಕಿಚ್ಚ-ರಮ್ಯಾ ಒಂದಾದ್ರಾ? ಆ ಸ್ಟೋರಿ ಇಲ್ಲಿದೆ ನೋಡಿ.