Asianet Suvarna News Asianet Suvarna News

ಸಿಂಹಕ್ಕೆ ಮಾಂಸ ತಿನ್ನಿಸಿದ ರಾಕಿ ಭಾಯ್: ವಿಡಿಯೋ ವೈರಲ್

Oct 14, 2021, 4:44 PM IST

ಸದ್ಯ ಸ್ಯಾಂಡಲ್‌ವುಡ್(Sandalwood) ನಟ ರಾಕಿಂಗ್ ಸ್ಟಾರ್ ಯಶ್ (Yash) ತಮ್ಮ ಪತ್ನಿ ರಾಧಿಕಾ ಪಂಡಿತ್ (Radhika Pandit) ಜೊತೆ ದುಬೈನಲ್ಲಿ (Dubai) ಜಾಲಿ ಮೂಡ್‌ನಲ್ಲಿ ಸುತ್ತಾಟ ನಡೆಸುತ್ತಿದ್ದಾರೆ.  ಈ ನಡುವೆ ಯಶ್ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ವಿಶೇಷವಾದ ವಿಡಿಯೋವೊಂದನ್ನು (Video) ಹಂಚಿಕೊಂಡಿದ್ದು, ಸಿಂಹಕ್ಕೆ (Lion) ಮಾಂಸವನ್ನು ತಿನ್ನಿಸುತ್ತಿದ್ದಾರೆ. ವೀಡಿಯೋ ನೋಡಿದ ಅಭಿಮಾನಿಗಳು (Fans) ಆಶ್ಚರ್ಯಗೊಳ್ಳುವ ಜೊತೆಗೆ ರಾಕಿ ಭಾಯ್ ಧೈರ್ಯಕ್ಕೆ (Courage) ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಫೋರ್ಬ್ಸ್ ಮುಖಪುಟದಲ್ಲಿ ಯಶ್..! ರಾಕಿಂಗ್ ಸ್ಟಾರ್ ಹವಾ

ಹೌದು!  ಯಶ್ ಕೊಂಚವೂ ಭಯವಿಲ್ಲದೇ ಸಿಂಹಕ್ಕೆ ಮಾಂಸ ತಿನ್ನಿಸುತ್ತಿದ್ದರೆ, ಸಿಂಹ ಮಾಂಸವನ್ನು ಕಚ್ಚಿ ತಿನ್ನುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದ್ದು, ಪೋಸ್ಟ್ ವೈರಲ್ (Viral) ಆಗಿದೆ. ಇನ್ನು ಇತ್ತೀಚೆಗಷ್ಟೇ  ಮುಂಬೈ (Mumbai) ವಿಮಾನ ನಿಲ್ದಾಣ ಮತ್ತು ಸಲೂನ್‍ವೊಂದರಲ್ಲಿ (Saloon) ಯಶ್ ಕಾಣಿಸಿಕೊಂಡಿದ್ದರು. ಆಗ  ಅವರ ಹೇರ್ ಸ್ಟೈಲ್ (Hair Style) ಸುದ್ದಿಯಾಗಿತ್ತು. ಯಶ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದ ವೇಳೆ ಅಭಿಮಾನಿಗಳು ಯಶ್ ಜೊತೆಗೆ ಸೆಲ್ಫಿ (Selfie) ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು.