ಕೆಜಿಎಫ್ ಬಳಿಕ ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ ಆಧೀರ ಸಂಜಯ್ ದತ್; ಇಂಟ್ರಸ್ಟಿಂಗ್ ವಿಚಾರ ಬಹಿರಂಗ


ಕೆಜಿಎಫ್ ಸಿನಿಮಾ ಮೂಲಕ ಅಧೀರನಾಗಿ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಟ್ಟಿದ್ದ ಸಂಜಯ್ ದತ್ ಮತ್ತೆ ಕನ್ನಡಕ್ಕೆ ಬರ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

First Published Sep 9, 2022, 4:13 PM IST | Last Updated Sep 9, 2022, 4:13 PM IST

ಸ್ಯಾಂಡಲ್ ವುಡ್ ನ ಮಾಸ್ ಅಂಗಳದಲ್ಲಿ ಈಗ ಟ್ರೆಂಡ್ನಲ್ಲಿರೋದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜ. ಖಡಕ್ ಖದರ್,  ಭರ್ಜರಿ ಆಕ್ಷನ್, ಜಬರ್ದಸ್ತ್ ಡೈಲಾಗ್ ಹೊಡೆದು ಅಭಿಮಾನಿಗಳ ಹೃದಯ ಸಿಂಹಾಸದಲ್ಲಿ ಮನೆ ಮಾಡಿರೋ ಧ್ರುವ ಸರ್ಜಾ ಹಾಗು ದಿ ಶೋ ಮ್ಯಾಜ್ ಜೋಗಿ ಪ್ರೇಮ್ ಕಾಂಬಿನೇಷನ್ನಲ್ಲಿ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಸಿದ್ಧವಾಗ್ತಿದೆ. ಧ್ರುವ-ಪ್ರೇಮ್ ಬಳಗದಿಂದ ಬಿಗ್ ನ್ಯೂಸ್ ಒಂದು ಹೊರ ಬಂದಿದೆ. ನಿರ್ದೇಶಕ ಜೋಗಿ ಪ್ರೇಮ್ ತಮ್ಮ ಸಿನಿಮಾಗಾಗಿ ಬಾಲಿವುಡ್ನ ಬಿಗ್ ಸ್ಟಾರ್ಸ್ ಇಬ್ಬರಿಗೆ ಗಾಳ ಹಾಕಿದ್ದಾರೆ. ಶೋ ಮ್ಯಾನ್ ಜೋಗಿ ಪ್ರೇಮ್ ಸಿನಿಮಾ ಅಂದ್ರೆನೇ ಹಾಗೆ ಸ್ಪೆಷಲ್ ಟ್ರೀಟ್ಮೆಂಟ್ ಒಂದನ್ನ ಇಟ್ಟಿರ್ತಾರೆ. ಲವ್, ಎಮೋಷನ್ ಸೂಪರ್ ಹಾಡುಗಳು ಮಾತ್ರ ಅಲ್ಲ, ಬಿಗ್ ಸ್ಟಾರ್ ಕಾಸ್ಟ್ಅನ್ನ ತಮ್ಮ ಸಿನಿಮಾದಲ್ಲಿ ತೋರಿಸೋ ಪಂಟರ್ ಪ್ರೇಮ್.. ಈಗ ಬಹದ್ಧೂರ್ ಗಂಡು ಧ್ರುವನ ಸಿನಿಮಾಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿರೋ ಪ್ರೇಮ್, ಆ ಚಿತ್ರಕ್ಕಾಗಿ ಬಾಲಿವುಡ್ನಿಂದ ಒಬ್ಬ ಬಿಗ್ ಸ್ಟಾರ್ಅನ್ನ ಕರೆ ತರೋ ಪ್ಲಾನ್ ಮಾಡಿದ್ದಾರೆ. ಆ ಲೀಸ್ಟ್ನಲ್ಲಿ ಅಜಯ್ ದೇವಗನ್ ಹಾಗು ಕೆಜಿಎಫ್ ಅಧಿರ ಸಂಜಯ್ ದತ್ ಇದ್ದಾರೆ. ಈಗ ಸಂಜಯ್ ದತ್ ಧ್ರುವನ ಸಿನಿಮಾದಲ್ಲಿ ನಟಿಸೋ ಸಾಧ್ಯತೆ ಇದ್ದು, ಕೆಜಿಎಫ್ ಬಳಿಕ ಮತ್ತೊಮ್ಮೆ ಕನ್ನಡ ಸಿನಿಮಾ ಮಾಡೋ ಸಾಧ್ಯತೆ ಇದೆ. ಧ್ರುವ ಪ್ರೇಮ್ ಕಾಂಬಿನೇಷನ್ನ ಚಿತ್ರಕ್ಕೆ ಸಧ್ಯ ಕೆಡಿ ಅನ್ನೋ ಟೈಟಲ್ ಇಡೋ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡಲಿದೆ.