50ರ ಹರೆಯಕ್ಕೆ ಕಾಲಿಟ್ಟ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿಗೆ KD ಟೀಮ್ನಿಂದ ಗಿಫ್ಟ್!
ಶಿಲ್ಪಾ ಶೆಟ್ಟಿ ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕೆಡಿ ಚಿತ್ರತಂಡ ಶುಭಾಶಯ ಕೋರಿದೆ. ಶಿಲ್ಪಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಶಿಲ್ಪಾ ಶೆಟ್ಟಿ ತಮ್ಮ 50ನೇ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಸದ್ಯ ಶಿಲ್ಪಾ ಕನ್ನಡದ ಕೆಡಿ ಸಿನಿಮಾದಲ್ಲಿ ನಟನೆ ಮಾಡ್ತಾ ಇದ್ದು, ಸತ್ಯವತಿ ಅನ್ನೋ ಪವರ್ ಫುಲ್ ಕ್ಯಾರೆಕ್ಟರ್ ಮಾಡಿದ್ದಾರೆ. ಧ್ರುವ ಸರ್ಜಾ ನಟನೆಯ ಈ ಮೂವಿಯಲ್ಲಿ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ಧತ್ ರಂಥಾ ಬಿಗ್ ಸ್ಟಾರ್ ಗಳು ನಟಿಸಿದ್ದು ಶಿಲ್ಪಾ ಕೂಡ ಆ ತಾರೆಯರ ಬಳಗದಲ್ಲಿದ್ದಾರೆ. ಸದ್ಯ ಶಿಲ್ಪಾ ಶೆಟ್ಟಿ ಬರ್ತ್ಡೇಗೆ ಕೆಡಿ ಟೀಂ ಶುಭಾಷಯ ಕೋರಿದೆ.
ಮಂಗಳೂರು ಮೂಲದವರಾದ ಶಿಲ್ಪಾಗೆ ಮೊದಲ ಚಿತ್ರದಲ್ಲೇ ಬಾಲಿವುಡ್ ಬಾದ್ಶಾ ಶಾರೂಖ್ ಖಾನ್ ಜೊತೆ ನಟಿಸುವ ಅವಕಾಶ ಸಿಕ್ತು. 1993ರಲ್ಲಿ ಬಂದ ಬಾಝಿಗರ್ ಶಿಲ್ಪಾ ನಟಿಸಿದ ಚೊಚ್ಚಲ ಸಿನಿಮಾ. ಮೊದಲ ಚಿತ್ರವೇ ಸೂಪರ್ ಹಿಟ್ ಆಯ್ತು. ಮತ್ತೆ ಶಿಲ್ಪಾ ತಿರುಗಿ ನೋಡಲೇ ಇಲ್ಲ. ಬಾಲಿವುಡ್ನಲ್ಲಿ ಟಾಪ್ ನಟಿಮಣಿಯಾಗಿದ್ರೂ ಕನ್ನಡದಿಂದ ಕರೆ ಬಂದಾಗ ಬೇರೆ ನಟಿಯರಂತೆ ಶಿಲ್ಪಾ ನಖರಾ ಮಾಡಲಿಲ್ಲ. ಕನ್ನಡದಲ್ಲಿ ಬಂದ ಅವಕಾಶಗಳೆಲ್ಲವನ್ನೂ ಒಪ್ಪಿಕೊಂಡು ಅಪ್ಪಿಕೊಂಡು ನಟಿಸಿದ್ರು. ಪ್ರೀತ್ಸೋದ್ ತಪ್ಪಾ, ಒಂದಾಗೋಣ ಬಾ, ಆಟೋ ಶಂಕರ್ ಶಿಲ್ಪಾ ನಟಿಸಿದ ಕನ್ನಡ ಸಿನಿಮಾಗಳು ಸದ್ಯ ಕೆಡಿ ಮೂಲಕ ಈ ಕರಾವಳಿ ಬ್ಯೂಟಿ ಮತ್ತೊಮ್ಮೆ ಕನ್ನಡಕ್ಕೆ ಬಂದಿದ್ದಾರೆ.