‘ಕರಿಕಾಡ’ ಚಿತ್ರದ ಟೈಟಲ್ ಟೀಸರ್ ಬಿಡುಗಡೆ
‘ಕರಿಕಾಡ’ ಇದೊಂದು ಮ್ಯೂಸಿಕಲ್ ಜರ್ನಿ & ಅಡ್ವೆಂಚರಸ್ ಎಲಿಮೆಂಟ್ಸ್ ಹೊಂದಿರುವ ಸಿನಿಮಾ. ಕಾಡ ನಟರಾಜ್ ಈ ಸಿನಿಮಾದ ನಾಯಕ.
‘ಕರಿಕಾಡ’ ಇದೊಂದು ಮ್ಯೂಸಿಕಲ್ ಜರ್ನಿ & ಅಡ್ವೆಂಚರಸ್ ಎಲಿಮೆಂಟ್ಸ್ ಹೊಂದಿರುವ ಸಿನಿಮಾ. ಕಾಡ ನಟರಾಜ್ ಈ ಸಿನಿಮಾದ ನಾಯಕ. ಐಟಿ ವಲಯದಲ್ಲಿ ಕೆಲಸ ಮಾಡ್ತಾ ಇರೋ ನಟರಾಜ್ ಸಿನಿಮಾ ಕನಸನ್ನ ಹೊತ್ತು ಈ ಕ್ಷೇತ್ರಕ್ಕೆ ಬಂದಿದ್ದಾರೆ. ರಿದ್ಧಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್ನಡಿ ಕಾಡ ನಟರಾಜ್ ಅವರ ಪತ್ನಿ ದೀಪ್ತಿ ದಾಮೋದರ್ ಚಿತ್ರವನ್ನ ನಿರ್ಮಿಸಿದ್ದಾರೆ . ರವಿಕುಮಾರ್ ಎಸ್.ಆರ್ ಸಹ ನಿರ್ಮಾಣದ ಸಾಥ್ ನೀಡಿದ್ದಾರೆ. ಈ ಸಿನಿಮಾದ ನಿರ್ದೇಶಕರು ಕಿರುತೆರೆಯ ಅನೇಕ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ಅನುಭವ ಉಳ್ಳ ಗಿಲ್ಲಿ ವೆಂಕಟೇಶ್. ‘ಕರಿಕಾಡ’ ಚಿತ್ರಕ್ಕೆ ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಾಗಿರಿ ಅವರುಗಳ ರಾಗ ಸಂಯೋಜನೆ ಇದೆ. ಸದ್ಯಕ್ಕೆ ಟೈಟಲ್ ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರ ಗಮನ ಸೇಳೆಯುವ ಪ್ರಯತ್ನದಲ್ಲಿ ಚಿತ್ರ ತಂಡವಿದೆ.