
ಶಿವಾಜಿ v/s ಪುಲಕೇಶಿ.. ರಿಷಬ್ಗೆ ನಾಡದ್ರೋಹಿ ಅಂದಿದ್ಯಾರು? ಮರಾಠಿ ದೊರೆಯ ಪಾತ್ರ ಮಾಡ್ಬಾರ್ದಾ?
ಶಿವಾಜಿ ಮಹಾರಾಜರ ಬಯೋಪಿಕ್ನಲ್ಲಿ ರಿಷಬ್ ಶೆಟ್ಟಿ ನಟನೆ. ಛತ್ರಪತಿ ಅಂದ್ರೆ ಉರಿ .. ರಿಷಬ್ ವಿರುದ್ದ ಪ್ರತಿಭಟನೆಯ ಕಿಡಿ.ಮರಾಠಿ ದೊರೆ ಬದಲು ಪುಲಕೇಶಿ ಪಾತ್ರ ಎಂಬ ಮಾಡಿ ಒತ್ತಾಯ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇತ್ತೀಚಿಗಷ್ಟೇ ಛತ್ರಪತಿ ಶಿವಾಜಿ ಮಹಾರಾಜರ ಬಯೋಪಿಕ್ನಲ್ಲಿ ನಟಿಸ್ತಾ ಇರೋ ಸಂಗತಿ ಸದ್ದು ಮಾಡಿತ್ತು. ಈ ವಿಷ್ಯ ರಿಷಬ್ ಅಭಿಮಾನಿಗಳಿಗೆ ಖುಷಿ ತಂದ್ರೆ ಒಂದಷ್ಟು ಜನರು ಇದರ ವಿರುದ್ದ ಗರಂ ಆಗಿದ್ದಾರೆ. ಕನ್ನಡಿಗ ರಿಷಬ್, ಮರಾಠಿ ದೊರೆಯ ಪಾತ್ರವನ್ಯಾಕೆ ಮಾಡಬೇಕು ಅಂತ ಕ್ಯಾತೆ ತೆಗೆದಿದ್ದಾರೆ. ರಿಷಬ್ನ ನಾಡದ್ರೋಹಿ ಅಂತ ನಿಂದಿಸ್ತಾ ಇದ್ದಾರೆ. ಹಾಗಾದ್ರೆ ಏನಿದು ಶಿವಾಜಿ ವಿವಾದ? ಛತ್ರಪತಿ ಶಿವಾಜಿ ಮಹಾರಾಜರ ಕಥೆಯುಳ್ಳ ಹಿಸ್ಟಾರಿಕಲ್ ಸಿನಿಮಾವನ್ನು ರಿಷಬ್ ಮಾಡೋ ವಿಷ್ಯ ರಿವೀಲ್ ಆಗಿತ್ತು. ಸಹಜವಾಗೇ ಇದು ರಿಷಬ್ ಶೆಟ್ಟರ ಅಭಿಮಾನಿಗಳು ಖುಷ್ ಆಗುವಂತೆ ಮಾಡಿತ್ತು. ಕಾಂತಾರ-1, ಜೈ ಹನುಮಾನ್ ನಂತರ ರಿಷಬ್ ಮಾಡಲಿರೋ ಈ ಸಿನಿಮಾ ಅವ್ರನ್ನ ಮತ್ತೊಂದು ಲೆವೆಲ್ ಗೆ ಕರೆದೊಯ್ಯುತ್ತೆ ಅಂತ ಎಲ್ಲರೂ ಭವಿಷ್ಯ ನುಡಿದಿದ್ದರು.