ಗಮನ ಸೆಳೆಯುತ್ತಿರುವ ಕಾಂತಾರದ ತದ್ರೂಪಿ ನಟ: ಭಾರೀ ಡಿಮ್ಯಾಂಡ್

ಕಾಂತಾರ ಸಿನಿಮಾ ಭರ್ಜರಿ ಯಶಸ್ವಿ ಪ್ರದರ್ಶನ ಕಂಡಿದ್ದು, ಇದೀಗ ಚಿತ್ರದ ಪಾತ್ರಧಾರಿಗಳನ್ನು ಹೊಲುವ ವ್ಯಕ್ತಿಗಳಿಗೂ ಸಖತ್ ಡಿಮ್ಯಾಂಡ್ ಶುರುವಾಗಿದೆ. 
 

Share this Video
  • FB
  • Linkdin
  • Whatsapp

ಕಾಂತಾರ ಚಿತ್ರದ ಯಶಸ್ಸು ಪ್ರತಿಯೊಬ್ಬ ಪಾತ್ರಧಾರಿಗೂ ಸ್ಟಾರ್ ವ್ಯಾಲ್ಯೂ ತಂದು ಕೊಟ್ಟಿದೆ. ಚಿತ್ರದ ನಾಯಕ ಮತ್ತು ನಿರ್ದೇಶಕರಾಗಿರುವ ರಿಷಬ್ ಶೆಟ್ಟಿ ಅವರ ತದ್ರೂಪಿಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಕನ್ನಡಿಗರಿಗೆ ಪರಿಚಯಿಸಿತ್ತು. ಇದೀಗ ಚಿತ್ರದಲ್ಲಿ ಬರುವ ಅತ್ಯಂತ ಸಣ್ಣ ಪಾತ್ರಕ್ಕೂ ಡಿಮ್ಯಾಂಡ್ ಬಂದಿದ್ದು, ತದ್ರೂಪಿಯೊಬ್ಬರು ಗಮನ ಸೆಳೆಯುತ್ತಿದ್ದಾರೆ. ಕಾಂತಾರ ಯಶಸ್ವಿಯ ಹಿಂದೆಯೆ ತದ್ರೂಪಿ ಎನಿಸಿದ ದೈವ ನರ್ತಕ ಈಗ ಸಖತ್ ಸದ್ದು ಮಾಡುತ್ತಿದ್ದಾರೆ. ಪರ್ಕಳ, ಹೆರ್ಗಗ್ರಾಮದ ಶೆಟ್ಟಿ ಬೆಟ್ಟು ವಾರ್ಡಿನ ಐತು ಪಾನರ ಕಳೆದ 20 ವರ್ಷದ ದೈವಾರಾಧನೆಯ ಮೂಲಕ ದೈವ ನರ್ಥಕರಾಗಿ ತೊಡಗಿಸಿಕೊಂಡಿದ್ದಾರೆ. ಇವರ ಜೊತೆ ಸೆಲ್ಫಿ ತೆಗೆಯುವವರ ಸಂಖ್ಯೆ ಹೆಚ್ಚಾಗಿದೆಯಂತೆ. ಕಾಂತಾರ ಚಿತ್ರದಲ್ಲಿ ಪ್ರಾರಂಭದಲ್ಲಿ ಮೊದಲಿನ ರಾಜನೊಬ್ಬ ಕಾಡಿನ ಬಳಿ ಬಂದಾಗ ಅಲ್ಲಿ ಚಿತ್ರದ ಸನ್ನಿವೇಶದಲ್ಲಿ ದೈವ ನರ್ತಕ ರಾಜನ ಮುಂದೆ ದೈವನರ್ಥನದಾರಿ ಕೇಳುವ ದೃಶ್ಯ ಬರುತ್ತೆ. ಪುರಾತನ ಕಾಲವನ್ನು ನೆನಪಿಸುವಂತ, ಈ ನಟನೆಯನ್ನು ಮಂಗಳೂರಿನ ಕಲಾವಿದ ಒಬ್ಬರು ನಟಿಸಿದ್ದರು. ಆದರೆ ಅವರಂತೆಯೇ ಕಾಣುವ ಉಡುಪಿ ಶೆಟ್ಟಿ ಬೆಟ್ಟುವಿನ ದೈವ ನರ್ತಕ ಐತ ಪಾನರನ್ನು ಈಗ ಎಲ್ಲರೂ ಗಮನಿಸಲು ಆರಂಭಿಸಿದ್ದಾರೆ. 

Related Video