ಮತ್ತೆ 'ಭೈರತಿ ರಣಗಲ್' ಆಗಿ ಬಂದ ಶಿವಣ್ಣ: ಶಿವರಾತ್ರಿಗೆ ಸಿನಿಮಾ ಅನೌನ್ಸ್

ವೇದ ಸಿನಿಮಾದ ವಿಜಯ ಯಾತ್ರೆ ಮುಗಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಇದೀಗ ಭೈರತಿ ರಣಗಲ್ ಆಗಿ  ಅವತಾರ ಎತ್ತಿದ್ದಾರೆ. 

Share this Video
  • FB
  • Linkdin
  • Whatsapp

'ಮಫ್ತಿ' ಸಿನಿಮಾದಲ್ಲಿ ಶಿವಣ್ಣನ ಭೈರತಿ ರಣಗಲ್ ಪಾತ್ರಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದರು. ಮಫ್ತಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್'ನಲ್ಲಿ ಹೊಸ ಸಂಚಲನ ಮೂಡಿಸಿದ್ದ ನಿರ್ದೇಶಕ ನರ್ತನ್, ಭೈರತಿ ರಣಗಲ್ ಸಿನಿಮಾ ನಿರ್ದೇಶನ ಮಾಡೋಕೆ ಉತ್ಸುಕರಾಗಿದ್ದಾರೆ. ರಣಗಲ್ ಟೈಟಲ್'ನಲ್ಲಿ ಸೆಟ್ಟೇರಿರೋ ಈ ಸಿನಿಮಾ ಮಫ್ತಿ ಪಾರ್ಟ್ 2 ಅಲ್ಲವೇ ಅಲ್ಲ, ಶ್ರೀ ಮುರಳಿ ಈ ಸಿನಿಮಾದಲ್ಲಿ ಇರೋದಿಲ್ಲ. ಆದ್ರೆ ಭೈರತಿ ರಣಗಲ್ ಕ್ಯಾರೆಕ್ಟರ್ ಮಾತ್ರ ಇಲ್ಲಿ ಕ್ಯಾರಿ ಆಗುತ್ತಂತೆ. ಆದ್ದರಿಂದ ಭೈರತಿ ರಣಗಲ್ ಹೊಸ ಕತೆ ಹೊಸರೀತಿಯ ಸಿನಿಮಾವನ್ನೇ ನೀವು ನಿರೀಕ್ಷಿಸಬಹುದು ಎನ್ನಲಾಗಿದೆ. ಭೈರತಿ ರಣಗಲ್ ಸಿನಿಮಾದಲ್ಲಿ ಶಿವಣ್ಣ ಅದೇ ಮಫ್ತಿ ಲುಕ್ ಮುಂದುವರಿಯಲಿದೆ. ಶಿವರಾತ್ರಿಯಂದೇ ಸಿನಿಮಾ ಅನೌನ್ಸ್ ಮಾಡಿದ್ದು ಇಡೀ ಚಿತ್ರತಂಡಕ್ಕೆ ಶುಭಕೋರುತ್ತಿದ್ದಾರೆ ದೊಡ್ಮನೆ ಅಭಿಮಾನಿ ಬಳಗ.

Related Video