
ಬಾಕ್ಸ್ ಆಫೀಸ್ ಧೂಳು ಮಾಡಿದ ಕಾಂತಾರ: 300 ಕೋಟಿ ಗಳಿಸಿ ಹೊಸ ದಾಖಲೆ ಸೃಷ್ಟಿ
ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ಉಡೀಸ್ ಮಾಡಿದ್ದು, ಪಂಜುರ್ಲಿ, ಗುಳಿಗ ದೈವಗಳು ಚಿತ್ರ ತಂಡದ ಕೈ ಹಿಡಿದಿವೆ. ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.
ಕಾಂತಾರ ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದ್ದು, ಕಂಡು ಕೇಳರಿಯದ ದಾಖಲೆ ಮಾಡುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಕಾಂತಾರ ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಕಾಂತಾರ ರಿಲೀಸ್ ಆಗಿ 32 ದಿನಕ್ಕೆ 300 ಕೋಟಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ. ಕೆಜಿಎಫ್-1 ಸಿನಿಮಾ 250 ಕೋಟಿ ಗಳಿಸಿತ್ತು. ಈಗ ಆ ದಾಖಲೆಯನ್ನೂ ಕಾಂತಾರ ಬ್ರೇಕ್ ಮಾಡಿದೆ.
Ashwini Puneeth ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಪವರ್ ಕಪಲ್ ಫೋಟೋಗಳು!