Ashwini Puneeth ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಪವರ್ ಕಪಲ್ ಫೋಟೋಗಳು!
ಅಶ್ವಿನಿ ಪುನೀತ್ ಮತ್ತು ಪಿಆರ್‌ಕೆ ಸಂಸ್ಥೆಗೆ ಸಾಥ್ ಕೊಟ್ಟ ಅಭಿಮಾನಿಗಳು. ಅಣ್ಣಾವ್ರು ಕುಟುಂಬದ ಹೆಣ್ಣು ಮಕ್ಕಳು ಸಿಕ್ಕಾಪಟ್ಟೆ ಸ್ಟ್ರಾಂಗ್ ....
ಕರ್ನಾಟಕ ರತ್ನ ಪವರ್ ಸ್ಟಾರ್ ಡಾ ಪುನೀತ್ ರಾಜ್‌ಕುಮಾರ್ ಮತ್ತು ಪತ್ನಿ ಅಶ್ವಿನಿ ಪಿಆರ್‌ಕೆ ಆಡಿಯೋ ಮತ್ತು ನಿರ್ಮಾಣ ಸಂಸ್ಥೆ ಮೂಲಕ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ.
ಹೊಸ ತಂಡಕ್ಕೆ ಅವಕಾಶ ನೀಡುವ ಮೂಲಕ ಚಿತ್ರರಂಗಕ್ಕೆ ವಿಭಿನ್ನ ಕಥೆಯನ್ನು ಪರಿಚಯಿಸಿ ಕೊಡುತ್ತಿದ್ದಾರೆ. ಗಂಧದ ಗುಡಿ ಸಿನಿಮಾ ಜವಾಬ್ದಾರಿ ಕೂಡ ಅಶ್ವಿನಿ ವಹಿಸಿಕೊಂಡಿದ್ದರು.
ಇದೀಗ ಅಪ್ಪುಗೆ ಅಭಿಮಾನಿಗಳು ಕೊಡುತ್ತಿದ್ದ ಬೆಂಬಲವನ್ನು ಅಶ್ವಿನಿ ಅವರಿಗೆ ಕೊಡುತ್ತಿದ್ದಾರೆ. ಪ್ರತಿಯೊಂದು ಕೆಲಸ ಕಾರ್ಯಕ್ಕೂ ಅಭಿಮಾನಿಗಳು ಸಾಥ್ ಕೊಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ ಪೇಜ್‌ಗಳು ಹೆಚ್ಚಾಗುತ್ತಿದೆ.
ಅಪ್ಪು ಮತ್ತು ಅಶ್ವಿನಿ ಅವರ ಹಳೆ ಫೋಟೋಗಳು ಮತ್ತು ವಿಡಿಯೋಗಳು ಸಖತ್ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರಿಗೂ ಪವರ್ ಕಪಲ್ ಎಂದು ಬಿರುದು ಕೊಟ್ಟಿದ್ದಾರೆ.
ಗಂಧದ ಗುಡಿ ಸಂದರ್ಶನದಲ್ಲಿ ಅಪ್ಪು ಲಾಸ್ಟ್ ಇವೆಂಟ್ ಸಕ್ಸಸ್ ಆಗಿದ್ದು ನನಗೆ ತೃಪ್ತಿ ಕೊಟ್ಟಿದೆ. ಬೇರೆ ಇಂಡಸ್ಟ್ರಿಗಳಿಂದಲೂ ತುಂಬಾ ಜನ ಬಂದಿದ್ರು. ನಮ್ಮ ಇಡೀ ಕುಟುಂಬ ಅಭಿಮಾನಿಗಳಿಗೆ ಚಿರಋಣಿಯಾಗಿರುತ್ತೆ. ಮಾತ್ರವಲ್ಲದೇ ಕಳೆದ ಒಂದು ವರ್ಷದಿಂದಲೂ ಸರ್ಕಾರ ನಮ್ಮ ಬೆಂಬಲಕ್ಕೆ ನಿಂತಿದೆ ಹಾಗೂ ಪೊಲೀಸರಿಗೂ ಧನ್ಯವಾದಗಳು ಎಂದು ಅಶ್ವಿನಿ ಅವರು ಹೇಳಿದರು.
ಗಂಧದಗುಡಿ ಅಪ್ಪಾಜಿ ಮತ್ತು ಶಿವಣ್ಣ ಮಾಡಿದ್ರು ಅದರಲ್ಲಿ ಒಂದು ಕತೆ ಇತ್ತು. ಈ ಗಂಧದಗುಡಿ ಅಪ್ಪು ನೋಡಿದ ಜಗತ್ತು ಹಾಗೂ ಜರ್ನಿಯಾಗಿದೆ. ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ನನ್ನ ಮೂಲಕ ಈ ಸಿನಿಮಾವನ್ನು ಕನ್ನಡ ಜನತೆಗೆ ತೋರಿಸ್ಬೇಕು ಎಂದು ಅಪ್ಪು ಅವರೇ ನಿರ್ಧರಿಸಿದ್ದರು. ಚಿತ್ರದಲ್ಲಿ ಅವರಿಗೆ ಮೇಕಪ್ ಇಲ್ಲ, ಹೆಚ್ಚು ಜನ ಇಲ್ಲ. ಇದರಲ್ಲಿ ಪುನೀತ್ ಅವರನ್ನು ಅವರನ್ನಾಗಿಯೇ ನೋಡಬಹುದಾಗಿದೆ, ಪ್ರತಿ ಶೆಡ್ಯೂಲ್‌ಗೆ ಹೋಗುವಾಗಲೂ ಖುಷಿಯಾಗಿ ಹೋಗುತ್ತಿದ್ದೆ ಎಂದು ಅಶ್ವಿನಿ ಹೇಳಿದ್ದಾರೆ.
ಅಪ್ಪು ಕಾಳಿ ರಿವರ್ ಬಳಿ ಚಿತ್ರೀಕರಣ ಮಾಡುವಾಗ ಒಂದು ಬೆಟ್ಟ ಹತ್ತಿ ಅಶ್ವಿನಿ ಅವರನ್ನು ಸಂಪರ್ಕಿಸಿ ಶೂಟಿಂಗ್ ಸ್ಥಳಕ್ಕೆ ಕರೆದುಕೊಂಡಿದ್ದರಂತೆ.
ಎರಡು ದಿನಗಳ ನಂತರ ಕಾಳಿ ರಿವರ್ ಶೂಟಿಂಗ್ ಸ್ಪಾಟ್‌ಗೆ ಭೇಟಿ ಕೊಟ್ಟು ಇಬ್ಬರೂ ಟ್ರಕ್ಕಿಂಗ್ ಮಾಡಿ ಅಲ್ಲಿನ ಸ್ಥಳೀಯರ ನಿವಾಸದಲ್ಲಿ ಊಟ ಮಾಡಿದ ಅನುಭವವನ್ನು ಹಂಚಿಕೊಂಡಿದ್ದರು.