Asianet Suvarna News Asianet Suvarna News

ಯಾದಗಿರಿಯಲ್ಲಿ ಸಾಯಿಬಾಬಾ ಮಂದಿರ ಉದ್ಘಾಟನೆ: ಧ್ರುವ ಸರ್ಜಾಗೆ ಅದ್ದೂರಿ ಸ್ವಾಗತ

ಯಾದಗಿರಿಯಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು, ಅಭಿಮಾನದ ಹೊಳೆಯಲ್ಲಿ ಮಿಂದೆದ್ದಿದ್ದಾರೆ. ಭರ್ಜರಿಯಾಗಿ ಅದ್ದೂರಿ ಹುಡುಗನ ಮೆರವಣಿಗೆ ನಡೆದಿದೆ.
 

ಯಾದಗಿರಿಯ ಶಹಾಪುರ‌ ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ನಟ ಧ್ರುವ ಸರ್ಜಾ, ಸಾಯಿ ಬಾಬಾ ಮಂದಿರವನ್ನು ಉದ್ಘಾಟನೆ ಮಾಡಿದ್ದಾರೆ. ದೇವಸ್ಥಾನದ ಉದ್ಘಾಟನೆಗೆ ಅತಿಥಿಯಾಗಿ ಬಂದಿದ್ದ ಆ್ಯಕ್ಷನ್ ಪ್ರಿನ್ಸ್, ಸುರಪುರದ ಬಿಜೆಪಿ ಶಾಸಕ ರಾಜುಗೌಡ ಜೊತೆ ಸಾಯಿ ಬಾಬಾ ದರ್ಶನ ಪಡೆದು ಹೊರ ಬರುತ್ತಿದ್ದಂತೆ ಅಭಿಮಾನಿಗಳು ಅದ್ದೂರಿ ಮೆರವಣಿಗೆ ಮಾಡಿದ್ರು. ಗ್ರಾಮದ ಪ್ರಮುಖ ರಸ್ತೆಯಲ್ಲಿ ಅದ್ದೂರಿ ಮೆರವಣಿಗೆ ಮಧ್ಯೆ ಡೈ ಹಾರ್ಡ್ ಫ್ಯಾನ್ಸ್ ಜೆಸಿಬಿ ಮೂಲಕ ಧ್ರುವನ ಮೇಲೆ ಹೂಮಳೆ ಸುರಿಸಿದ್ರು. ಇನ್ನು ಸಾಗರೋಪಾದಿಯಲ್ಲಿ ಸೇರಿದ್ದ ಫ್ಯಾನ್ಸ್ ಎದುರು ಧ್ರುವ ಭರ್ಜರಿ ಡೈಲಾಗ್ ಹೊಡೆದು ಭರ್ಜರಿ  ಜೋಶ್ ತುಂಬಿದ್ರು.