ಅಮ್ಮನ 'ಏಮೋಷನಲ್' ಸಪೋರ್ಟ್ ತುಂಬಾ ಇದೆ: ನಟಿ ಸಪ್ತಮಿ ಗೌಡ
ಅಮ್ಮನಿಗೆ ತಾಳ್ಮೆ ತುಂಬಾ ಇದೆ, ಮನೆಯಲ್ಲಿ ಅಮ್ಮ ಎಲ್ಲನೂ ಹ್ಯಾಂಡಲ್ ಮಾಡುತ್ತಾಳೆ ಎಂದು ನಟಿ ಸಪ್ತಮಿ ಗೌಡ ಹೇಳಿದರು.
ಅಮ್ಮ ಮಲ್ಟಿ ಟಾಸ್ಕ್ ಮಾಡುತ್ತಿದ್ದರು, ಮನೆಯ ಎಲ್ಲಾ ಕೆಲಸವನ್ನು ಅವರು ನೋಡಿಕೊಳ್ಳುತ್ತಿದ್ದರು ಎಂದು ಸಪ್ತಮಿ ಗೌಡ ಹೇಳಿದರು. ಅಮ್ಮ ಪ್ರತಿಯೊಂದು ಶೂಟಿಂಗ್'ಗೂ ಬರುತ್ತಾರೆ, ಫ್ರೆಂಡ್ಸ್'ಗಿಂತ ಜಾಸ್ತಿ ಅಮ್ಮನ ಜೊತೆ ಮಾತಾಡುತ್ತೇನೆ. ಆ ದಿನದ ಎಲ್ಲಾ ದಿನಚರಿಯನ್ನು ಅಮ್ಮನಿಗೆ ಹೇಳಬೇಕು. ಆಗಲೇ ಸಮಾಧಾನ ಸಿಗುವುದು ಎಂದು ಹೇಳಿದರು. ಅಮ್ಮನ ಸಪೋರ್ಟ್ ಇಲ್ಲದೇ ಈ ಸ್ಥಾನಕ್ಕೆ ಬರುವುದು ತುಂಬಾ ಕಷ್ಟವಾಗುತ್ತಿತ್ತು. ಅಪ್ಪ ಹಾಗೂ ಅಮ್ಮ ನೀನು ಏನು ಬೇಕಾದ್ರೂ ಮಾಡು, ನಾವು ಜೊತೆಗೆ ಇದ್ದೀವಿ ಎಂದು ಹೇಳುತ್ತಿದ್ದರು ಎಂದರು. ಅಪ್ಪ ಆರ್ಥಿಕವಾಗಿ ಸಪೋರ್ಟ್ ನೀಡಿದರೆ ಅಮ್ಮ ಏಮೋಷನಲ್ ಸಪೋರ್ಟ್ ಆಗಿದ್ದರು ಎಂದು ತಿಳಿಸಿದರು.
ಕಾಂತಾರ ಸಕ್ಸಸ್ ನಂತರ 'ಪೊಲೀಸ್ ಮಂದಿ' ಏನಂದ್ರು?: ಸಪ್ತಮಿ ಗೌಡ ತಂದೆ ಹೇಳಿದ್ರು ಸೀಕ್ರೆಟ್