ನಟ ದರ್ಶನ್ ಕಣ್ಣಲ್ಲಿ ಹೊಳಪಿಲ್ಲ, ಈ ಸವಲತ್ತು-ಸುಖ ಇನ್ನೆಷ್ಟು ದಿನದ ಸಂತೆ?

ದರ್ಶನ್‌ಗಿದ್ದ ಅಹಂಕಾರವನ್ನು ಅದೊಂದು ಬೆನ್ನು ನೋವು ದಿಕ್ಕೆಡಿಸಿತು. ಅಕಸ್ಮಾತ್ ಆ ಬೇನೆ ಕಾಣಿಸದಿದ್ದರೆ ಇಂದು ಜೈಲಿಂದ ಹೊರಗೆ ಇರುತ್ತಿರಲಿಲ್ಲ ದಾಸ. ಹಾಗಿದ್ದರೆ ದರ್ಶನ್ ಹಾಸ್ಪಿಟಲ್ ಅಪಡೇಟ್ ಏನು ? ಅದರ ವಿವರ ಇಲ್ಲಿದೆ...

Share this Video
  • FB
  • Linkdin
  • Whatsapp

ಮನೆ ಮುಂದೆ ದೀಪ ಹಚ್ಚಿದ್ದಾರೆ ವಿಜಯಲಕ್ಷಿ. ಸುರಸುರ ಬತ್ತಿಗೆ ಕಡ್ಡಿ ಗೀರಿದ್ದಾನೆ ಮಗ. ಸಾಂಬ್ರಾಣಿ ಹೊಗೆ...ಪೂಜೆ...ಸಿಹಿ. ಎಲ್ಲವೂ ಇವೆ. ಆದರೆ ದರ್ಶನ್ (Darshan) ಕಣ್ಣಲ್ಲಿ ಮಾತ್ರ ಹೊಳಪು ಹೊಯ್ದಾಡುತ್ತಿಲ್ಲ. ಇದುವರೆಗಿನ ದೀಪಾವಳಿ ಒಂದು ಲೆಕ್ಕ. ಮುಂದಿನದ್ದು ದೇವರ ಲೆಕ್ಕ. ಯಜಮಾನ ಎಡವಿದ್ದೆಲ್ಲಿ ? ಅಪ್ಪ ಅಮ್ಮನ ಆ ದಿವ್ಯ ದೀವಳಿಗೆಯ ಸಂಕಟ ಹಾಗೂ ಸಂಭ್ರಮ ನೆನಪಾಗಲಿಲ್ಲವಾ ಆ ಪಾತಕಕ್ಕೆ ಇಳಿವಾಗ ? ಏನಿದು ದರ್ಶನ್ ಬದುಕಿನ ಬೆಳಕಿಲ್ಲದ ದೀಪಾವಳಿ ಕಥನ ? ವಾಚ್ ದಿಸ್ ಸ್ಟೋರಿ...

ಇಷ್ಟು ವರ್ಷಗಳಲ್ಲಿ ದೀಪಾವಳಿಯನ್ನು ಇಡೀ ಕುಟುಂಬ ಒಟ್ಟಿಗೇ ಆಚರಿಸುತ್ತಿತ್ತು. ಈ ಬಾರಿ ಅದು ಸುಳ್ಳಾಗುತ್ತದಾ ? ಪತ್ನಿ ವಿಜಯಲಕ್ಷಿ ಹಾಗೂ ಪುತ್ರ ವಿನೀಶ್‌ಗೆ ಅನುಮಾನ ಇತ್ತು. ಆದರೆ ಅದಾಗಲಿಲ್ಲ. ಏನಾಯಿತು ಈ ಬಾರಿಯ ದರ್ಶನ್ ದೀಪಾವಳಿ ? ನೀವೇ ನೋಡಿ...

Related Video