ನಟ ಭಯಂಕರ: ಸಿನಿಮಾರಂಗದಲ್ಲಿ 73 ವರ್ಷಗಳಿಂದ ನಟಿಸುತ್ತಿದ್ದೀನಿ; ಹಿರಿಯ ನಟ ಉಮೇಶ್

ಹಿರಿಯ ನಟ ಉಮೇಶ್ ಪ್ರಥಮ್ ನಟನೆಯ ನಟ ಭಯಂಕರ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಉಮೇಶ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. 

Share this Video
  • FB
  • Linkdin
  • Whatsapp

ಪ್ರಥಮ್ ನಟನೆಯ ನಟಭಯಂಕರ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಬಿಗ್ ಬಾಸ್ ಖ್ಯಾತಿಯ ಪ್ರಥಮ್ ನಟಿಸಿ, ನಿರ್ದೇಶನ ಮಾಡಿರುವ ನಟ ಭಯಾನಕ ಸಿನಿಮಾದ ಟ್ರೈಲರ್ ಅನ್ನು ಧ್ರುವ ಸರ್ಜಾ ರಿಲೀಸ್ ಮಾಡಿದರು. ಅದ್ದೂರಿಯಾಗಿ ನಡೆದ ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ನಟಭಯಂಕರ ಟ್ರೈಲರ್ ಬಿಡಗುಡೆ ಮಾಡಲಾಯಿತು. ನಟ ಭಯಾನಂಕ ಸಿನಿಮಾದಲ್ಲಿ ಪ್ರಥಮ್ ನಾಯಕನಾಗಿ ನಟಿಸಿದ್ರೆ ಉಳಿದಂತೆ ಸಾಯಿ ಕುಮಾರ್, ಶೋಬರಾಜ್, ಹಿರಿಯ ನಟ ಉಮೇಶ್, ಕುರಿ ಪ್ರಥಾಪ್, ಓಂ ಪ್ರಕಾಶ್, ಮಜಾ ಟಾಕೀಸ್ ಪವನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಪ್ರಥಮ್‌ಗೆ ನಾಯಕಿಯಾಗಿ ನಿಹಾರಿಕಾ ಮತ್ತು ಚಂದನಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಹಿರಿಯ ನಟ ಉಮೇಶ್ ಪ್ರಥಮ್ ಅವರನ್ನ ಹೊಗಳಿದರು. ಸುಮಾರು 73-74 ವರ್ಷಗಳಿಂದ ಸಿನಿಮಾರಂಗದಲ್ಲಿ ನಟಿಸುತ್ತಿದ್ದೇನೆ. ಪ್ರಥಮ್ ಹೇಳಿದ ಬಳಿಕ ಒಪ್ಪಿಕೊಂಡೆ. ಚಿಕ್ಕ ಪಾತ್ರವಾಗಿದ್ದರೂ ಚೊಕ್ಕದಾಗಿದೆ. ಅನೇಕ ಕಲಾವಿದರನ್ನು ಗುರುತಿಸಿ ಅವರಿಗೆ ತಕ್ಕದಾದ ಪಾತ್ರ ಕೊಟ್ಟಿದ್ದಾರೆ ಎಂದು ಉಮೇಶ್ ಹೇಳಿದರು.


Related Video