Asianet Suvarna News Asianet Suvarna News

ಡಿ-ಬಾಸ್‌ ಮೇಲೆ ಈ ಹೀರೋಗೆ ಲವ್ವಾಯ್ತು, 'ಮತ್ತೆ ಉಧ್ಭವ' ಟ್ರೈಲರ್‌ ಹೀಗಿದೆ ನೋಡಿ!

Jan 21, 2020, 4:27 PM IST

ಸ್ಯಾಂಡಲ್‌ವುಡ್‌ ಬಹು ನಿರೀಕ್ಷಿತ ಚಿತ್ರ 'ಮತ್ತೆ ಉದ್ಭವ' ಟ್ರೈಲರ್‌ ಬಡುಗಡೆಯಾಗಿದೆ. 30 ವರ್ಷಗಳ ನಂತರ ಚಿತ್ರರಂಗಕ್ಕೆ ಕೋಡ್ಲು ರಾಮಕರಷ್ಣ ರೀ ಎಂಟ್ರಿ ಕೋಡುತ್ತಿದ್ದಾರೆ. ಹಿಂದೆ ತೆರೆ ಕಂಡ 'ಉದ್ಭವ' ಚಿತ್ರದಲ್ಲಿ ಅನಂತ್ ನಾಗ್ ಅಭಿನಯಿಸಿದ್ದರು. ಈಗ ಅದರ ಮುಂದಿನ ಭಾಗವಾಗಿ ಪ್ರೀಮಿಯರ್‌ ಪದ್ಮಿನಿ ಚಿತ್ರದ ನಟ ಪ್ರಮೋದ್‌ ಅನಂತ್ ನಾಗ್‌ ಪುತ್ರನ ಪಾತ್ರದಲ್ಲಿ ಮಿಂಚಲಿದ್ದಾರೆ.

ಇನ್ನು ಪ್ರಮೋದ್‌ಗೆ ಜೋಡಿಯಾಗಿ ಮಿಲನಾ ನಾಗರಾಜ್‌ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ನಟ ಮೋಹನ್‌ ಡೈಲಾಗ್‌ ಬರೆದಿದ್ದಾರೆ ಹಾಗೂ ವಿ.ಮನೋಹರ್‌ ಸಂಗೀತ ನೀಡಿದ್ದಾರೆ. ಫೆಬ್ರವರಿ-7ರಂದು ತೆರೆ ಕಾಣುತ್ತಿರುವ ಚಿತ್ರದ ಟೈಲರ್‌ ರಿಲೀಸ್‌ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ನಟ ಪ್ರಮೋದ್‌ ಡಿ-ಬಾಸ್‌ ಬಗ್ಗೆ ಮಾತನಾಡಿದ್ದು, ಹೀಗೆ ಹೇಳಿದ್ದಾರೆ.