
ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ನಟಿ ರನ್ಯಾರಾವ್ ಸಿಕ್ಕಿಬಿದ್ದಿದ್ದೇ ರೋಚಕ; ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ.!
ಕನ್ನಡದ ನಟಿಯೊಬ್ಬರು ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಮತ್ತೊಂದೆಡೆ, ಮೈಸೂರಿನಲ್ಲಿ ವೃದ್ಧ ದಂಪತಿಗಳು ಕೊಲೆಯಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.
ಅವಳು ಕನ್ನಡ ಚಿತ್ರರಂಗದ ಸುಂದರ ನಟಿ. ಸ್ಟಾರ್ ನಟರ ಜೊತೆಗೆ ಹೆಜ್ಜೆ ಹಾಕಿದವಳು. ಇನ್ನು ಅವರ ಅಪ್ಪ ಐಪಿಎಸ್ ಅಧಿಕಾರಿ. ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಆದರೆ, ಇವತ್ತು ಇದೇ ನಟಿ ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದಾಳೆ.. ಅದೂ ಕೂಡ ಸ್ಮಗ್ಲಿಂಗ್ ಕೇಸ್‌ನಲ್ಲಿ.. ಪ್ರವಾಸಕ್ಕೆಂದು ದುಬೈಗೆ ಹೋದ ನಟಿ ವಾಪಸ್ ಬರ್ತಾ ಕೆ.ಜಿ ಗಟ್ಟಲೆ ವಿಥೌಟ್ ಏನೀ ರೆಸಿಪ್ಟ್ ಚಿನ್ನವನ್ನ ತಂದಿದ್ದಾಳೆ. ಆದರೆ ಬೆಂಗಳೂರಿನಲ್ಲಿ ಇಳಿಯುತ್ತಿದ್ದಂತೆ ಲಾಕ್ ಆಗಿದ್ದಾಳೆ. ಅಷ್ಟಕ್ಕೂ ಸ್ಮಗ್ಲಿಂಗ್ ಕೇಸ್‌ನಲ್ಲಿ ತಗ್ಲಾಕಿಕೊಂಡ ಆ ನಟಿಯ ವಿವರ ಇಲ್ಲಿದೆ ನೋಡಿ.
ಒಬ್ಬ ಐಪಿಎಸ್ ಅಧಿಕಾರಿಯ ಮಗಳು ಇಂಥಹ ಕೇಸ್‌ನಲ್ಲಿ ತಗ್ಲಾಕಿಕೊಳ್ತಾಳೆ ಅಂದ್ರೆ ಏನ್ ಹೆಳೋದು.. ಸದ್ಯ ಅಧಿಕಅರಿಗಳು ಈಕೆಯನ್ನ ವಷಕ್ಕೆ ಪಡೆದಿದ್ದಾರೆ.. ವಿಚಾರಣೆಯಲ್ಲಿ ಏನೇನು ಹೇಳ್ತಾಳೆ ಕಾದು ನೋಡೋಣ.
ಮತ್ತೊಂದೆಡೆ, ವೃದ್ಧ ದಂಪತಿ ಸಂಧ್ಯಾಕಾಲದಲ್ಲಿದ್ದರು. ತಮ್ಮ ಇಳಿ ವಯಸ್ಸಿನಲ್ಲಿ ತೋಟದ ಮನೆಯಲ್ಲಿ ಆರಾಮಾಗಿ ಜೀವನ ಸಾಗಿಸುತ್ತಿದ್ದರು. ತಾವಾಯ್ತು, ತಮ್ಮ ಕೆಲಸವಾಯ್ತು ಅಂತಾ ಇದ್ದೋರು. ಆದರೆ ಆವತ್ತು ತಮ್ಮದೇ ಮನೆಯಲ್ಲಿ ಇಬ್ಬರೂ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾರೆ. ಕೊಟ್ಟಿಗೆ ಮನೆಯಲ್ಲಿ ಹಂತಕ ಅವರನ್ನ ಭೀಕರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದನು. ಇನ್ನು ಇದೇ ಕೇಸ್‌ನ ತನಿಖೆಗೆ ಇಳಿದಿರುವ ಪೊಲೀಸರಿಗೆ ಒಂದೇ ಒಂದು ಕ್ಲೂ ಸಿಕ್ಕಿಲ್ಲ. ಆದರೆ ಈ ಡಬಲ್ ಮರ್ಡರ್ ಕೇಸ್ ಇಡೀ ಮೈಸೂರನ್ನ ಬೆಚ್ಚಿ ಬೀಳಿಸಿದೆ. ಮಗ ತೋಟದಲ್ಲಿದ್ದರೆ ಮನೆಯಲ್ಲಿ ಹೆತ್ತವರು ಹೆಣವಾಗಿದ್ದಾರೆ. ಇವತ್ತಲ್ಲ ನಾಳೆ ಆ ಹಂತಕ ತಗ್ಲಾಕಿಕೊಳ್ಳುತ್ತಾನೆ. ಆದರೆ ಇಬ್ಬರ ಹೆಣವನ್ನ ಉರುಳಿಸುವ ಉದ್ದೇಶ ಏನಿತ್ತು ಅನ್ನೋದು ಮಾತ್ರ ಎಲ್ಲರಿಗೂ ಗೊತ್ತಾಗಲೇಬೇಕು.