Asianet Suvarna News Asianet Suvarna News

ಬ್ಲ್ಯಾಕ್ ಮ್ಯಾಜಿಕ್ ಕಥೆ ಹೇಳಲು ಬಂದ 'ಅವತಾರ ಪುರುಷ'

'ಅವತಾರಪುರುಷ' ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗಕ್ಕೆ ಅಷ್ಟದಿಗ್ಬಂಧನ ಮಂಡಲಕ ಹಾಗೂ ಎರಡನೇ ಪಾರ್ಟ್‌ಗೆ  ತ್ರಿಶಂಕು ಎನ್ನುವ ಟ್ಯಾಗ್‌ಲೈನ್ ಇಡಲಾಗಿದೆ.

First Published Oct 23, 2021, 1:56 PM IST | Last Updated Oct 23, 2021, 1:56 PM IST

ಸಿಂಪಲ್ ಸುನಿ (Simple Suni) ನಿರ್ದೇಶನದ ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್ (Sharan) ಅಭಿನಯದ 'ಅವತಾರ ಪುರುಷ' (Avatar Purusha) ಚಿತ್ರ ಈಗಾಗಲೇ ತೆರೆಗೆ ಬರಲು ಸಜ್ಜಾಗಿದೆ. ಸಸ್ಪೆನ್ಸ್ ಥ್ರಿಲ್ಲಿಂಗ್ ಇರುವ ಚಿತ್ರದಲ್ಲಿ ಶರಣ್ ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಮತ್ತು ಹೊಸ ಅವತಾರದಲ್ಲಿ ಕಾಣಬಹುದಾಗಿದೆ. ಮುಖ್ಯವಾಗಿ ಸಿಕ್ಕಾಪಟ್ಟೆ ಶಾಕ್‌ನೊಂದಿಗೆ ಭಯಮೂಡಿಸುವಂತಹ ಬ್ಲ್ಯಾಕ್ ಮ್ಯಾಜಿಕ್ (Black Maagic) ಚಿತ್ರಕಥೆ ಈ ಚಿತ್ರದಲ್ಲಿದೆ. ಶರಣ್‌ ನಟನೆಯ 'ಅವತಾರಪುರುಷ' ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. 'ಅವತಾರ ಪುರುಷ 1' ಮತ್ತು 'ಅವತಾರ ಪುರುಷ 2' ಹೆಸರಿನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಆದರೆ, ಚಿತ್ರದ ಟ್ಯಾಗ್‌ಲೈನ್  ಮಾತ್ರ ಬೇರೆ ಬೇರೆ ಇಡಲಾಗುತ್ತಿದೆ. ಮೊದಲ ಭಾಗಕ್ಕೆ ಅಷ್ಟದಿಗ್ಬಂಧನ ಮಂಡಲಕ ಹಾಗೂ ಎರಡನೇ ಪಾರ್ಟ್‌ಗೆ  ತ್ರಿಶಂಕು ಎನ್ನುವ ಟ್ಯಾಗ್‌ಲೈನ್ ಇಡಲಾಗಿದೆ. 

ಶರಣ್‌ ಅಭಿನಯದ 'ಅವತಾರ ಪುರುಷ' ಟೀಸರ್‌ ಹೇಗಿದೆ ನೋಡಿ!

ಇನ್ನು ಈ ಚಿತ್ರವು ಪುಷ್ಕರ್ ಫಿಲಂಸ್ ಬ್ಯಾನರ್‌ನಡಿ ಪುಷ್ಕರ್ ಮಲ್ಲಿಕಾರ್ಜುನಯ್ಯ (Pushkar Mallikarjunaiah) ನಿರ್ಮಿಸಿದ್ದಾರೆ. ಚಿತ್ರದಲ್ಲಿ ಶರಣ್‌ಗ ಜೋಡಿಯಾಗಿ ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ (Ashika Ranganath) ನಟಿಸಿದ್ದು, 'ರಂಗಿತರಂಗ' ಚಿತ್ರದ ನಂತರ ಮತ್ತೊಂದು ಆಸಕ್ತಿಕರ ಪಾತ್ರದಲ್ಲಿ ಸಾಯಿಕುಮಾರ್‌, ರಾಮಾಜೋಯಿಸರಾಗಿ ಅಭಿನಯಿಸಿದ್ದಾರೆ. ಮಂತ್ರವಾದಿ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಸೇರಿದಂತೆ ಸುಧಾರಾಣಿ, ಸಾಧುಕೋಕಿಲ, ಭವ್ಯ, ಅಯ್ಯಪ್ಪ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೊರ್ ಅವರು ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಲಿಯಮ್ ಡೇವಿಡ್ ಛಾಯಾಗ್ರಹಣದಲ್ಲಿ 'ಅವತಾರ ಪುರುಷ'  ಚಿತ್ರ ಮೂಡಿ ಬಂದಿದ್ದು, ನವೆಂಬರ್ ಕೊನೆಯಲ್ಲಿ ಚಿತ್ರ ತೆರೆಗೆ ಬರಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories