ಹುಟ್ಟುಹಬ್ಬಕ್ಕೆ ಊರಲ್ಲಿ ಇರಲ್ಲ: ಹುಟ್ಟು ಹಬ್ಬಕ್ಕೆ ಬೆಂಗಳೂರಿನಲ್ಲಿ ಮನೆಯಲ್ಲಿ ನಾನು ಇರಲ್ಲ. ಬೇರೆ ಬೇರೆ ದೇವಸ್ಥಾನಗಳಿಗೆ ತಿರುಗಾಡುತ್ತಿರುತ್ತೇನೆ. ಕಳೆದ ವರ್ಷ ತಿರುಪತಿಗೆ ಹೋಗಿದ್ದೆ. ಈ ಬಾರಿ ದಕ್ಷಿಣ ಕನ್ನಡ ಭಾಗದಲ್ಲಿರುವ ದೇವಸ್ಥಾನಗಳನ್ನು ತಿರುಗಾಡುತ್ತಿದ್ದೇನೆ. ಚಿತ್ರರಂಗಕ್ಕೆ ಬರುವುದಕ್ಕೂ ಮೊದಲೇ ಪ್ರತಿ ವರ್ಷ ಹುಟ್ಟು ಹಬ್ಬವನ್ನು ಇದೇ ರೀತಿ ಮಾಡುತ್ತೇನೆ. ಇದೇ ನನ್ನ ಹುಟ್ಟು ಹಬ್ಬ ವಿಶೇಷ.

ಆರು ಅವತಾರಗಳಲ್ಲಿ ಶರಣ್; ಪಾತ್ರದ ಸೀಕ್ರೆಟ್ ರಿವೀಲ್‌!

ಹೆತ್ತವರ ಹಾರೈಕೆ: ನನ್ನ ಹುಟ್ಟು ಹಬ್ಬಕ್ಕೆ ಮೊದಲು ಶುಭ ಕೋರುವುದು ನನ್ನ ಅಪ್ಪ ಮತ್ತು ಅಮ್ಮ. ಹೆತ್ತವರ ಶುಭ ಹಾರೈಕೆಗಳೇ ನನ್ನ ಜನ್ಮದಿನಾಚರಣೆಯ ಅತ್ಯುತ್ತಮ ಉಡುಗೋರೆ. ಆ ನಂತರ ಮಕ್ಕಳು, ಮಡದಿ, ಅಭಿಮಾನಿಗಳು, ಚಿತ್ರರಂಗದಲ್ಲಿರುವ ಗಣ್ಯರು ನನಗೆ ವಿಷ್‌ ಮಾಡುತ್ತಾರೆ.

ಅಭಿಮಾನಿಗಳ ಜತೆ ಮಾಡಿಕೊಳ್ಳೋ ಆಸೆ: ನನಗೂ ಪ್ರತಿ ವರ್ಷ ನನ್ನ ಹುಟ್ಟು ಹಬ್ಬವನ್ನು ಅಭಿಮಾನಿಗಳ ಜತೆ ಆಚರಿಸಿಕೊಳ್ಳಬೇಕೆಂಬ ಆಸೆ ಇದೆ. ಮನೆ ಮುಂದೆ ಕೇಕ್‌ ಕಟ್‌ ಮಾಡಿ ದೊಡ್ಡ ಸಂಭ್ರಮ ಮಾಡುವ ಆಸೆ ಇದೆ. ಯಾಕೆಂದರೆ ಅಭಿಮಾನಿಗಳೇ ನಮ್ಮ ದೊಡ್ಡ ಆಸ್ತಿ. ಅವರಿಂದಲೇ ನಾವು ಅಲ್ಲವೇ. ಆದರೆ, ಏನು ಮಾಡೋದು ಮೊದಲಿಂದಲೂ ನನ್ನ ಜನ್ಮದಿನವನ್ನು ಕುಟುಂಬ ಸಮೇತರಾಗಿ ದೇವರ ಸನ್ನಧಿಯಲ್ಲಿ ಆಚರಿಸುತ್ತೇನೆ. ಮುಂದೆ ಅಭಿಮಾನಿಗಳ ಜತೆ ಸೇರಿ ಆಚರಿಸಿಕೊಳ್ಳುವುದಕ್ಕೆ ಪ್ಲಾನ್‌ ಮಾಡಿಕೊಳ್ಳುತ್ತೇನೆ.

'ಮಧುರ ಮಧುರವೀ ಮಂಜುಳ ಗಾನ' ಭಾಗ-2 ಕೃತಿ ಬಿಡುಗಡೆ!

ಅವತಾರ ಪುರುಷನ ಟೀಸರ್‌: ನನ್ನ ಹುಟ್ಟು ಹಬ್ಬಕ್ಕೆಂದೇ ‘ಅವತಾರ ಪುರುಷ’ ಚಿತ್ರದ ಟೀಸರ್‌ ಬಿಡುಗಡೆ ಮಾಡುಗಡೆಯಾಗಿದೆ. ಅಷ್ಟದಿಗ್ಬಂಧನ ಮಂಡಲಕ ಹೆಸರಿನಲ್ಲಿ ಟೀಸರ್‌ ಬಿಡುಗಡೆ ಮಾಡುತ್ತಿದ್ದಾರೆ. ನಿರ್ದೇಶಕ ಸಿಂಪಲ್‌ ಸುನಿ, ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಅವರಿಗೆ ಕೃತಜ್ಞತೆಗಳು ಹೇಳಬೇಕು. ಯಾಕೆಂದರೆ ನನ್ನ ಹುಟ್ಟು ಹಬ್ಬವನ್ನು ಚಿತ್ರತಂಡದವರು ಮಾಡಿದರೆ ನಮ್ಮ ಕುಟುಂಬದ ಸದಸ್ಯರು ಆಚರಣೆ ಮಾಡುತ್ತಾರೆ ಎಂದರೆ ನಮ್ಮ ಕುಟುಂಬದವರೇ ಎನ್ನುವ ಭಾವನೆ ಬರುತ್ತದೆ. ಚಿತ್ರದ ಟೀಸರ್‌ ಬಗ್ಗೆ ನನಗೂ ಕುತೂಹಲ ಇದೆ. ಯಾಕೆಂದರೆ ಸುನಿ ಹಾಗೂ ನನಗೂ ಹೊಸ ಜಾನರ್‌ ಸಿನಿಮಾ ಇದು. ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಕಾಮಿಡಿ ಜತೆಗೆ ಬ್ಲಾಕ್‌ ಮ್ಯಾಜಿಕ್‌ ಕತೆ ಇದೆ. ತುಂಬಾ ಚೆನ್ನಾಗಿ ಬಂದಿದೆ. ಮೇಕಿಂಗ್‌ ಅದ್ಭುತವಾಗಿದೆ.