ನಿರ್ದೇಶಕ ಗುರುಪ್ರಸಾದ್ ಸಾವಿನ ರಹಸ್ಯ; 4 ಮೊಬೈಲ್‌ಗಳಲ್ಲಿ ಪೊಲೀಸರಿಗೆ ಸಿಕ್ಕಿದ್ದೇನು?

ನಿರ್ದೇಶಕ ಗುರುಪ್ರಸಾದ್ ಅವರ ಸಾವಿನ ಬಗ್ಗೆ ಇನ್ನೂ ನಿಖರ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಗುರುಪ್ರಸಾದ್ ಅವರು ಬಳಸುತ್ತುದ್ದ ನಾಲ್ಕು ಮೊಬೈಲ್‌ಗಳನ್ನು ಪರಿಶೀಲನೆ ಮಾಡಿದ್ದಾರೆ. ಅದರಲ್ಲಿ...

First Published Dec 2, 2024, 5:00 PM IST | Last Updated Dec 2, 2024, 5:00 PM IST

ಬೆಂಗಳೂರು (ಡಿ.02): ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಗುರುಪ್ರಸಾದ್ ಸಾವಿನ ಬಗ್ಗೆ ಇನ್ನೂ ನಿಖರ ಮಾಹಿತಿ ತಿಳಿದುಬಂದಿಲ್ಲ. ಗುರುಪ್ರಸಾದ್ ಅವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೂರು ದಿನಗಳ ಬಳಿಕ ಮೃತದೇಹ ಅರ್ಧಂಬರ್ಧ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದಾದ ನಂತರ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣ ಏನೆಂಬುದು ಇನ್ನೂ ಪತ್ತೆಯಾಗಿಲ್ಲ.

ನಿರ್ದೇಶಕ ಗುರುಪ್ರಸಾದ್ ಅವರ ಹೆಂಡತಿ ಮಾದನಾಯಕನಹಳ್ಳಿ ಠಾಣೆಗೆ ತೆರಳಿ ಸಾಲಗಾರರ ಕಿರುಕುಳದಿಂದಲೇ ನನ್ನ ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲ ಕೊಟ್ಟು ಕಿರುಕುಳ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದುರು ದಾಖಲಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಪೊಲೀಸರು ಗುರುಪ್ರಸಾದ್ ಅವರ 4 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡು ಅವುಗಳಲ್ಲಿ ಆತ್ಮಹತ್ಯೆಗೆ ಕಾರಣವಾಗುವಂತಹ ಏನಾದರೂ ಸಾಕ್ಷಿಗಳು ಸಿಗಬಹುದಾ ಎಂದು ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ಕನ್ನಡ ಖ್ಯಾತ ಕಿರುತೆರೆ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆ

ಕೆಲವು, ಮೊಬೈಲ್‌ಗೆ ಸ್ಟ್ರಾಂಗ್ ಪಾಸ್‌ವರ್ಡ್ ಇದ್ದ ಅವುಗಳನ್ನು ತಜ್ಞರಿಂದ ತೆಗೆಸಿ ನೋಡಿದ್ದರು. ಆದರೂ ಹೆಚ್ಚಿನ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಸ್ವತಃ ಗುರುಪ್ರಸಾದ್ ಅವರೇ ಕೆಲವು ಮಾಹಿತಿಗಳನ್ನು ಡಿಲೀಟ್ ಮಾಡಿರಬಹುದು ಎಂದು ಅವರ ನಾಲ್ಕು ಮೊಬೈಲ್‌ಗಳಲ್ಲಿನ ಎಲ್ಲ ಮಾಹಿತಿಗಳನ್ನು ಕಲೆಹಾಕಲು ಎಫ್‌ಎಸ್‌ಎಲ್‌ಗೆ ಕಳುಹಿಸಿ ರಿಟ್ರೈವ್ ಮಾಡಿಸಲಾಗಿದೆ. ಆದರೆ, ಎಫ್‌ಎಸ್‌ಎಲ್‌ ವರದಿಯಲ್ಲಿಯೂ ಕೂಡ ಯಾವುದೇ ಆತ್ಮಹತ್ಯೆಗೆ ಕಾರಣವಾಗಿವ ಅಂಶಗಳು ಕಂಡುಬಂದಿಲ್ಲ. ಇನ್ನು ಫೋನ್ ಕರೆಗಳ ಲಿಸ್ಟ್‌ನಲ್ಲಿಯೂ ಅನುಮಾನಾಸ್ಪದವಾಗಿ ಮಾತನಾಡಿರುವ ಅಂಶಗಳು ಪತ್ತೆಯಾಗಿಲ್ಲ. ಸಿನಿಮಾಗೆ ಸಂಬಂಧಪಟ್ಟ ವಿಚಾರಗಳು, ಸಂಭಾಷಣೆಗಳು ಹಾಗೂ ಚಾಟಿಂಗ್‌ಗಳು ಮಾತ್ರ ಸಿಕ್ಕಿವೆ ಎಂದು ತಿಳಿದುಬಂದಿದೆ.