ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!

ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ದುನಿಯಾ ವಿಜಯ್-ಶ್ರೇಯಸ್ ಕೆ ಮಂಜು ಅಭಿನಯದ 'ಮಾರುತ' ಮತ್ತು ಕೃಷ್ಣ ಅಜಯ್ ರಾವ್ ನಟನೆಯ 'ರಾಧೆಯಾ' ಎಂಬ ಎರಡು ಚಿತ್ರಗಳು ಬಿಡುಗಡೆಯಾಗಿವೆ. 'ಮಾರುತ' ಒಂದು ಫ್ಯಾಮಿಲಿ ಮೆಚ್ಚುಗೆ ಗಳಿಸಿದ್ದರೆ, 'ರಾಧೆಯಾ' ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ಅಜಯ್ ಪಾತ್ರ ಗಮನ ಸೆಳೆಯುತ್ತಿದೆ.

Share this Video
  • FB
  • Linkdin
  • Whatsapp

ಒಂದ್ ಕಡೆ ದುನಿಯಾ ವಿಜಯ್ ಶ್ರೇಯಸ್ ಕೆ ಮಂಜು.. ಮತ್ತೊಂದು ಕಡೆ ಕೃಷ್ಣ ಅಜಯ್ ರಾವ್.. ಈ ಮೂರು ಜನ ಸ್ಟಾರ್ಸ್ ಸೇರಿ ಸ್ಯಾಂಡಆಲ್ ವುಡ್ ಬೆಳ್ಳಿ ತೆರೆಯನ್ನ ಬ್ಲಾಸ್ಟ್ ಮಾಡಿದ್ದಾರೆ. ಅದಕ್ಕೆ ಕಾರಣ ಮಾರುತ ಸಿನಿಮಾ ಹಾಗೂ ರಾಧೆಯಾ ಚಿತ್ರ. ಈ ವಾರ ಕನ್ನಡ ಸಿನಿ ಪ್ರೇಕ್ಷಕರಿಗೆ ಎರಡು ಸಿನಿಮಾಗಳ ನೋಡೋ ಭಾಗ್ಯ ಸಿಕ್ಕಿದೆ. ಆ ಸಿನಿಮಾಗಳಳೊಂದು ಶ್ರೇಯಸ್ ಕೆ ಮಂಜು ಹಾಗೂ ದುನಿಯಾ ವಿಜಯ್ ಜೋಡಿಯ ಮಾರುತ. ಎಸ್ ನಾರಾಯಣ್ ನಿರ್ದೇಶನದ ಈ ಚಿತ್ರದ ಮೇಲೆ ಕನ್ನಡದ ಸಿನಿ ಪ್ರೇಕ್ಷಕರಲಿ ಬೆಟ್ಟ್ದಷ್ಟು ಭರವಸೆ ಇತ್ತು. ಅದಕ್ಕೇ ಈಗ ಉತರ ಸಿಕ್ಕಿದೆ. ಮಾರುತ ಸಿನಿಮಾ ನೋಡಿದ ಪ್ರೇಕ್ಷಕ ಪ್ರಭು ಗಳು ಮೆಚ್ಚುಗೆ ಮಾತನಾಡಿದ್ದಾರೆ.ಲವ್ ಸ್ಟೋರಿಗಳನ್ನೇ ಹೊತ್ತು ಬಂದು ಕಮಾಲ್ ಮಾಡುತಿದ್ದ ಅಜಯ್ ಈ ಬಾರಿ ಡಿಫ್ರೆಂಟ್ ಗೆ ಡಿಫ್ರೆಂಟ್ ರೋಲ್ ಮಾಡಿದ್ದಾರೆ. ಸೈಕ್ ಪಾತ್ರದಲ್ಲಿ ನಟ ಅಜಯ್ ರಾವ್ ರನ್ನ ನೋಡಿ ಸಿನಿ ಭಕ್ತಿ ಗಣ ಕಣ್ಣರಾಳಿಸಿದ್ದಾರೆ.

ಸಮಾಜದಲ್ಲಿನ ಅನ್ಯಾಯದ ವಿರುದ್ಧ ತಿರುಗಿಬೀಳುವ ʻರಾಧೇಯನಿಗೆ ಆಕ್ಷನ್ ಕಟ್ ಹೇಳಿರೋದು ವೇದಗುರು. ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿಯಲ್ಲಿ ಅಜಯ್​ ರಾವ್ ಅಮೋಘ ಅಭಿನಯ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಆ ಕಡೆ ಮಾರುತ ಕೂಡ ಮಸ್ತ್ ಮನೊರಂಜನೆ ಜೊತೆ ಕಮಾಲ್ ಮಾಡುತ್ತಿದ್ದಾರೆ. ಫ್ಯಾಮಿಲಿ ಪ್ಯಾಕ್ ಸಿನಿಮಾ ಮಾರುತಾ ಆಗಿರೋದ್ರಿಂದ ಶ್ರೇಯಶ್​, ದುನಿಯಾ ವಿಜಯ್ ಜುಲಗಲ್ಬಂಧಿ ಸಿನಿ ಜಗತ್ತನ್ನ ಮೆಚ್ಚಿಸಿದೆ.

Related Video