ನಿರ್ಮಾಪಕಿಯಾಗಿ ರಮ್ಯಾ ಎಂಟ್ರಿ; ಪ್ರೊಡಕ್ಷನ್ ಹೌಸ್‌ಗೆ 'ಆಪಲ್ ಬಾಕ್ಸ್' ಎಂದು ಹೆಸರಿಟ್ಟ ಮೋಹಕತಾರೆ

8 ವರ್ಷದ ನಂತ್ರ ಮತ್ತೆ ಚಿತ್ರರಂಗಕ್ಕೆ ಮೋಹಕತಾರೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ, ರಾಜಕೀಯ ಅಂತೆಲ್ಲಾ ಒಂದು ರೌಂಡ್ ಹಾಕಿ ಮತ್ತೆ ಚಿತ್ರರಂಗದಲ್ಲಿಯೇ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ ಮೋಹಕತಾರೆ ಅದು ನಿರ್ಮಾಪಕಿಯಾಗಿ ಅನ್ನೋದು ಸ್ಪೆಷಲ್. 
 

First Published Sep 1, 2022, 1:15 PM IST | Last Updated Sep 1, 2022, 1:15 PM IST

8 ವರ್ಷದ ನಂತ್ರ ಮತ್ತೆ ಚಿತ್ರರಂಗಕ್ಕೆ ಮೋಹಕತಾರೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.  ಸಿಹಿ ಸುದ್ದಿ, ಗುಡ್ ನ್ಯೂಸ್ ಅಂತ ಹೇಳಿ ಅಭಿಮಾನಿಗಳ ತೆಲೆಗೆ ಹುಳಬಿಟ್ಟಿದ್ದ ರಮ್ಯಾ ಕೊನೆಗೂ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.  ಸ್ಯಾಂಡಲ್ ವುಡ್ ನ ಮೋಹಕತಾರೆ ಕಮ್ ಬ್ಯಾಕ್ ಮಾಡಿದ್ದಾರೆ. ರಮ್ಯಾ ಅಭಿಮಾನಿಗಳ ಬಹುದಿನದ ಕನಸು ಈಗ ನನಸಾಗುತ್ತಿದೆ. ಇನ್ನೊಂದು ವರ್ಷವಾದ್ರೆ ಬರೋಬ್ಬರಿ 20ವರ್ಷಗಳಾಗುತ್ತೆ ರಮ್ಯಾ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟು. ಸಿನಿಮಾ, ರಾಜಕೀಯ ಅಂತೆಲ್ಲಾ ಒಂದು ರೌಂಡ್ ಹಾಕಿ ಮತ್ತೆ ಚಿತ್ರರಂಗದಲ್ಲಿಯೇ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ ಮೋಹಕತಾರೆ ಅದು ನಿರ್ಮಾಪಕಿಯಾಗಿ ಅನ್ನೋದು ಸ್ಪೆಷಲ್. ಸಾಮಾನ್ಯವಾಗಿ ಸಿನಿಮಾರಂಗದವ್ರು ತಮ್ಮದೇ ಹೆಸರಿನಲ್ಲಿ ಅಥವಾ ದೇವರ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಆರಂಭ ಮಾಡ್ತಾರೆ. ಆದ್ರೆ ರಮ್ಯಾ ತಮ್ಮ ಇಡೀ ಸಿನಿಮಾರಂಗದ ಜರ್ನಿಯಲ್ಲಿ ಸಾಥ್ ಕೊಟ್ಟ  ಒಂದು ವಸ್ತುವಿನ ಹೆಸರನ್ನೇ ನಿರ್ಮಾಣ ಸಂಸ್ಥೆಗೆ ಇಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.