Asianet Suvarna News Asianet Suvarna News

ಹಬ್ಬಕ್ಕೂ ಮೊದಲೇ ಶುಭಾಶಯ ಕೋರಿದ್ದ ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡಿದ್ದ ಅಪ್ಪು

Nov 4, 2021, 3:48 PM IST
  • facebook-logo
  • twitter-logo
  • whatsapp-logo

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿಕೆಯ ಮುನ್ನ ದೀಪಾವಳಿ (Diwali) ಹಬ್ಬಕ್ಕೆ ವಿಡಿಯೋ ಮೂಲಕ ಹಾಡನ್ನು ಹಾಡಿ ಶುಭ ಕೋರಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ (Viral) ಆಗುತ್ತಿದೆ. ಅಪ್ಪು ಧ್ವನಿ ಕೇಳಿ ಎಲ್ಲರೂ ಸಂತಸ ಪಟ್ಟಿದ್ದಾರೆ. ಹೌದು! ಅಪ್ಪು ನಿಧನದಿಂದ ದೊಡ್ಮನೆಯಲ್ಲಿ ಈ ಬಾರಿ ಕತ್ತಲು ಆವರಿಸಿದೆ. 

ಅಪ್ಪು ಬರುವಿಕೆಗಾಗಿ ಈಗಲೂ ಕಾಯುತ್ತಿರುವ ಪ್ರೀತಿಯ ಸ್ನೇಹಿತರು!

ಆದರೂ ಕೂಡಾ ಪುನೀತ್ ದೀಪವಾಳಿ ಹಬ್ಬಕ್ಕೆ ಶುಭಾಶಯ ಕೋರಿರುವ ವಿಡಿಯೋ ಸೇರಿದಂತೆ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಒಳ್ಳೆಯದಾಗಲಿ ಎಂಬ ವಿಡಿಯೋವನ್ನು ಮೊದಲೇ ರೆಕಾರ್ಡ್ ಮಾಡಿದ್ದರು. 'ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು. ಬೆಳಕು ಅಂದರೆ ಜ್ಞಾನ ಹಾಗೂ ಸಮೃದ್ಧಿಯ ಸಂಕೇತ. ಈ ಹಬ್ಬದ ಸಂದರ್ಭದಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರು ತಯಾರಿಸಿದ ದೀಪ ಸಂಜೀವಿನಿ ಹಣತೆಗಳನ್ನು ಖರೀದಿಸೋಣ ಈ ಮೂಲಕ ಅವರ ಸ್ವಾಭಿಮಾನಕ್ಕೆ ಹಾಗೂ ಶ್ರಮಕ್ಕೆ ನಾವೆಲ್ಲರೂ ಸೇರಿ ಗೌರವ ಸಲ್ಲಿಸೋಣ. ಪ್ರಕೃತಿ ಸ್ನೇಹಿ ದೀಪಾವಳಿ ಆಚರಿಸೋಣ ಎಂಬ ಸಂದೇಶ ಅಪ್ಪು ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment