ಅಪ್ಪು ಬರುವಿಕೆಗಾಗಿ ಈಗಲೂ ಕಾಯುತ್ತಿರುವ ಪ್ರೀತಿಯ ಸ್ನೇಹಿತರು!

ಬಿಡುವಿನ ಸಮಯದಲ್ಲಿ ಸೈಕ್ಲಿಂಗ್ ಮಾಡುತ್ತಿದ್ದ ಅಪ್ಪು ಲಾಕ್‌ಡೌನ್ ಸಮಯದಲ್ಲಿ ಹೆಚ್ಚು ಸೈಕ್ಲಿಂಗ್ ಮಾಡಿದ್ದರು. ಸೈಕಲ್‌ನಲ್ಲಿ ಇಡೀ ಬೆಂಗಳೂರನ್ನೇ ಸುತ್ತಿದ್ದರು. ನಂದಿಬೆಟ್ಟಕ್ಕೂ ಹೋಗಿ ಬಂದಿದ್ದರು.

Share this Video
  • FB
  • Linkdin
  • Whatsapp

ಕನ್ನಡದ ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ (Puneeth Rajkumar) ಅವರ ಅಕಾಲಿಕ ನಿಧನ ಎಲ್ಲರನ್ನೂ ಆಘಾತಕ್ಕೆ ದೂಡಿದ್ದು, ಅವರ ಕುಟುಂಬಸ್ಥರಿಗೆ ಇದು ಅರಗಿಸಿಕೊಳ್ಳಲಾಗದ ಕಷ್ಟವಾಗಿದೆ. ಅಪ್ಪುಗೆ ಕಾರು ಮತ್ತು ಸೈಕಲ್ ಮೇಲೆ ಬಹಳ ವ್ಯಾಮೋಹವಿತ್ತು. ಅವರ ಬಳಿ ದುಬಾರಿ ಬೆಲೆಯ ಸೈಕಲ್ ಹಾಗೂ ಕಾರಿನ ಕಲೆಕ್ಷನ್ಸ್ ಇತ್ತು. ಬಾಲ್ಯದಲ್ಲಿದ್ದಾಗಲೇ ರೇಸ್ ಕಾರು ಬೇಕೆಂದು ಅಪ್ಪು ಹಠ ಹಿಡಿದಿದ್ದರು. ಅವರ ಬಳಿ ಈಗಲೂ 200 ಟಾಯ್ ಕಾರ್ ಕಲೆಕ್ಷನ್‌ಗಳಿವೆ 

46ರ ಅಂಕಿಯಲ್ಲಿದೆ ಪುನೀತ್ ರಾಜ್‌ಕುಮಾರ್ ಸಾವಿನ ರಹಸ್ಯ

ಬಿಡುವಿನ ಸಮಯದಲ್ಲಿ ಸೈಕ್ಲಿಂಗ್ ಮಾಡುತ್ತಿದ್ದ ಅಪ್ಪು, ಲಾಕ್‌ಡೌನ್ ಸಮಯದಲ್ಲಿ ಹೆಚ್ಚು ಸೈಕ್ಲಿಂಗ್ ಮಾಡಿದ್ದರು. ಸೈಕಲ್‌ನಲ್ಲಿ (Bycycle) ಇಡೀ ಬೆಂಗಳೂರನ್ನೇ ಸುತ್ತಿದ್ದರು. ನಂದಿಬೆಟ್ಟಕ್ಕೂ ಹೋಗಿ ಬಂದಿದ್ದರು. ಸದಾಶಿವ ನಗರದ ಪುನೀತ್ ನಿವಾಸದಲ್ಲಿ 12 ಕಾರು, 10 ಸೈಕಲ್‌ಗಳಿವೆ. ಇನ್ನು ಪುನೀತ್ ಅಗಲಿಕೆಗೆ ಎಲ್ಲ ವರ್ಗದ ಜನರು ಅಂತಿಮ ನಮನ ಸಲ್ಲಿಸಿದ್ದಾರೆ. ಭಾರತೀಯ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಸೇರಿದಂತೆ ಸುಮಾರು 25 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಅಪ್ಪು ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video