ದುಬೈನಲ್ಲಿ ಗೋಲ್ಡನ್ ವೀಸಾ ಪಡೆದ ಕನ್ನಡದ ಮೊದಲ ನಟ ಸುದೀಪ್; ಇದರ ಲಾಭವೇನು?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಈಗಾಗಲೇ ಸಾಕಷ್ಟು ಮೊದಲುಗಳಿಗೆ ಹೆಸರಾಗಿದ್ದಾರೆ. ಕನ್ನಡದ ಸ್ಟಾರ್ ನಟನಾಗಿದ್ದುಕೊಂಡು ಅಕ್ಕ ಪಕ್ಕ ಇಂಡಸ್ಟ್ರಿಯಲ್ಲಿ ಭಾರಿ ಡಿಮ್ಯಾಂಡ್ ಕ್ರಿಯೆಟ್ ಮಾಡಿಕೊಂಡಿರೋ ಏಕೈಕ ನಟ.

First Published Sep 11, 2022, 2:49 PM IST | Last Updated Sep 11, 2022, 2:49 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಈಗಾಗಲೇ ಸಾಕಷ್ಟು ಮೊದಲುಗಳಿಗೆ ಹೆಸರಾಗಿದ್ದಾರೆ. ಕನ್ನಡದ ಸ್ಟಾರ್ ನಟನಾಗಿದ್ದುಕೊಂಡು ಅಕ್ಕ ಪಕ್ಕ ಇಂಡಸ್ಟ್ರಿಯಲ್ಲಿ ಭಾರಿ ಡಿಮ್ಯಾಂಡ್ ಕ್ರಿಯೆಟ್ ಮಾಡಿಕೊಂಡಿರೋ ಏಕೈಕ ನಟ. ಈಗ ಮತ್ತೊಂದು ವಿಚಾರದಲ್ಲಿ ಕಿಚ್ಚನ ಮೊದಲ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ. ಕಿಚ್ಚ ಸುದೀಪ್ ಸಾಕಷ್ಟು ಬಾರಿ ದುಬೈಗೆ ಹೋಗಿ ಬರ್ತಾರೆ..ಅದಷ್ಟೇ ಅಲ್ಲ ಅವ್ರ ವಿಕ್ರಾಂತ್ ರೋಣ ಸಿನಿಮಾದ ಮೊದಲ ಪ್ರಚಾರವನ್ನ ದುಬೈನಲ್ಲಿಯೇ ಮಾಡಿದ್ರು..ಆ ಸಮಯದಲ್ಲಿ ಕಿಚ್ಚನಿಗೆ ದುಬೈನಲ್ಲಿ ಅದ್ದೂರಿಯಾಗಿ ಸ್ವಾಗತ ಸಿಕ್ಕಿತ್ತು. ಈಗ ಅಲ್ಲೇ ಗೋಲ್ಡನ್ ವಿಸಾ ಕೂಡ ಸಿಕ್ಕಿದೆ. ಸುದೀಪ್ ದುಬೈನಲ್ಲಿ ತನ್ನ ಹೊಸ ಬ್ಯುಸಿನೆಸ್ ಆರಂಭ ಮಾಡಿದ್ದಾರೆ. ಪತ್ನಿ ಹೆಸರಿನಲ್ಲಿ ಉದ್ಯಮ ಶುರುವಾಗಿದ್ದು ಈಗ ಅದಕ್ಕೆ ಉಪಯೋಗವಾಗುವಂತೆ ಗೋಲ್ಡನ್ ವಿಸಾ ಲಭ್ಯವಾಗಿದೆ.