Asianet Suvarna News Asianet Suvarna News

ನೀವು ತುಂಬಾ ಸಾತ್ವಿಕರಾಗಬೇಡಿ, ನಿಮ್ಮ ತಂಟೆಗೆ ಬಂದವರನ್ನ ಸುಮ್ಮನೆ ಬಿಡಬೇಡಿ: ಜಗ್ಗೇಶ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (kiccha Sudeep) ಬರೀ ಕನ್ನಡ ಚಿತ್ರರಂಗದ ನಟ ಮಾತ್ರ ಅಲ್ಲ. ಕನ್ನಡದ ಕಂಪನ್ನ ದೇಶಾದ್ಯಂತ ಪಸರಿಸಿರೋ ಇಂಡಿಯನ್ ಸಿನಿ ಜಗತ್ತಿನ ಸ್ಟಾರ್ ಕಿಚ್ಚ. ಭಾರತೀಯ ಚಿತ್ರರಂಗ ಆರಡಿ ಕಟೌಟ್ ಅಂತಲೇ ಫೇಮಸ್ ಆಗಿರೋ ಸುದೀಪ್ ರನ್ನ ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್ ಮಂದಿ ಕೊಂಡಾಡ್ತಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (kiccha Sudeep) ಬರೀ ಕನ್ನಡ ಚಿತ್ರರಂಗದ ನಟ ಮಾತ್ರ ಅಲ್ಲ. ಕನ್ನಡದ ಕಂಪನ್ನ ದೇಶಾದ್ಯಂತ ಪಸರಿಸಿರೋ ಇಂಡಿಯನ್ ಸಿನಿ ಜಗತ್ತಿನ ಸ್ಟಾರ್ ಕಿಚ್ಚ. ಭಾರತೀಯ ಚಿತ್ರರಂಗ ಆರಡಿ ಕಟೌಟ್ ಅಂತಲೇ ಫೇಮಸ್ ಆಗಿರೋ ಸುದೀಪ್ ರನ್ನ ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್ ಮಂದಿ ಕೊಂಡಾಡ್ತಾರೆ. ಬಿಗ್ ಬಿ ಅಮಿತಾಬ್ ಬಚ್ಚನ್‌ರಿಂದ (Amitabh Bacchan) ಹಿಡಿದು ಭಾರತೀಯ ಚಿತ್ರರಂಗದ ಟಾಪ್ ಒನ್ ಡೈರೆಕ್ಟರ್ ಎಸ್.ಎಸ್ ರಾಜಮೌಳಿ, ಸಲ್ಮಾನ್ ಖಾನ್, ಮೆಗಾಸ್ಟಾರ್ ಚಿರಂಜೀವಿ ಸಿನಿಮಾಗಳಲ್ಲೂ ನಟಿಸಿದ್ದಾರೆ ಸುದೀಪ್. ಹೀಗಾಗಿ ನವರಸ ನಾಯಕ ಜಗ್ಗೇಶ್ (Jaggesh) ಕಿಚ್ಚನನ್ನ ತಮ್ಮದೇ ಸ್ಟೈಲ್ನಲ್ಲಿ ಮನದುಂಬಿ ಕೊಂಡಾಡಿದ್ದಾರೆ. ಕನ್ನಡ ಚಿತ್ರರಂಗವನ್ನ ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಮೊದಲಿಗ ಕಿಚ್ಚ ಸುದೀಪ್ ಎಂದಿರೋ ಜಗ್ಗೇಶ್, ತಮ್ಮ ಕಲ್ಲನ್ನ ತಾವೇ ಕೆತ್ತಿಕೊಂಡು ಮೂರ್ತಿಯಾದ ಹುಡುಗ ಎಂದಿದ್ದಾರೆ. 

ಮತ್ತೆ ಗಾಳಿಪಟ ಹಾರಿಸಲು ಸಜ್ಜು ಭಟ್ರ ಹುಡುಗ್ರು! ಈ ಬಾರಿ ಹೇಗಿರುತ್ತೆ ಗಾಳಿಪಟ-2?

ಸುದೀಪ್ ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ಅನ್ನೋ ಪಾಲಿಸಿಯವರು. ಕಿಚ್ಚ ಎಂದೂ ಯಾರಿಗು ತೊಂದರೆ ಕೊಟ್ಟವರಲ್ಲ. ಗೆದ್ದವರನ್ನ ಬೆನ್ನು ತಟ್ಟಿ, ಸೋತವರನ್ನ ಕೈ ಹಿಡಿದು ಮೇಲೆತ್ತೋ ಸ್ವಭಾವ ಕಿಚ್ಚನಿಗೆ ಹುಟ್ಟಿನಿಂದಲೇ ಬಂದಿದೆ. ಆದ್ರೆ ಅದ್ಯಾಕೋ ಗೊತ್ತಿಲ್ಲ ಕಿಚ್ಚನನ್ನ ಕೆಲ ಕಿಡಿಗೇಡಿಗಳು ಹೆಜ್ಜೆ ಹೆಜ್ಜೆಗೂ ಕಾಡುತ್ತಿದ್ದಾರೆ. ಹೀಗಾಗಿ ಕಿಚ್ಚನಿಗೆ ಜಗ್ಗಣ್ಣ ಸಲಹೆ ಕೊಟ್ಟಿದ್ದು, ನೀವು ತುಂಬಾ ಸಾತ್ವಿಕರಾಗಬೇಡಿ, ನಿಮ್ಮ ತಂಟೆಗೆ ಬಂದವರನ್ನ ಸುಮ್ಮನೆ ಬಿಡಬೇಡಿ ಎಂದಿದ್ದಾರೆ ಜಗ್ಗೇಶ್.

ಜಗ್ಗೇಶ್ರ ತೋತಾಪುರಿ (Totapuri) ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ಚೀಫ್ ಗೆಸ್ಟ್ ಆಗಿ ಬಂದಿದ್ರು. ತನ್ನ ಬಗ್ಗೆ ನವರಸ ನಾಯಕ ಆಡಿದ ಮಾತುಗಳನ್ನ ಆಲಿಸಿಕೊಂಡ ಹೆಬ್ಬುಲಿ ಕಿಚ್ಚ, ಜಗ್ಗೇಶ್ ಸಲಹೆಗಳಿಗೆ ಉತ್ತರ ಕೊಟ್ಟಿದ್ದಾರೆ. ನಾನು ಏನೇ ಮಾಡಿದ್ರು ಸುದ್ದಿಯಲ್ಲಿರುತ್ತೇನೆ, ಕನ್ನಡ ಸಿನಿಮಾಗಳಿಗೆ ಸಪೋರ್ಟ್ ಮಾಡಿದ್ರು ಸುದ್ದಿಯಾಗ್ತೇನೆ ಮಾಡದೇ ಇದ್ರೂನು ಸುದ್ದಿಯಾಗುತ್ತೇನೆ. ನಾನು ಅಡುಗೆ ಇದ್ದಂತೆ. ನಿಮ್ಮ ನಾಲಿಗೆಗೆ ಯಾವ ತರದ ರುಚಿ ಸಿಗುತ್ತೋ ಅದನ್ನ ಆನಂದಿಸಿ' ಎಂದಿದ್ದಾರೆ. 
 

Video Top Stories