Duniya Vijay Wife Workout: ಪತಿಯ ಹಾಗೆ ಪತ್ನಿ ಕೀರ್ತಿ ವಿಜಯ್ ಫುಲ್ ಫಿಟ್!

ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ 'ಸಲಗ'  ಚಿತ್ರ ಹೌಸ್‌ಫುಲ್ ಪ್ರದರ್ಶನ ಕಂಡು ಧೂಳೆಬ್ಬಿಸಿದೆ. ಈಗ ದುನಿಯಾ ವಿಜಯ್ ಅವರ ಮುಂದಿನ ನಡೆ ಏನು ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಈ ನಡುವೆ ದುನಿಯಾ ವಿಜಯ್ ಪತ್ನಿ ಕೀರ್ತಿಯವರ ವರ್ಕೌಟ್ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Share this Video
  • FB
  • Linkdin
  • Whatsapp

ದುನಿಯಾ ವಿಜಯ್ (Duniya Vijay) ನಟಿಸಿ ನಿರ್ದೇಶಿಸಿರುವ 'ಸಲಗ' (Salaga) ಚಿತ್ರ ಹೌಸ್‌ಫುಲ್ ಪ್ರದರ್ಶನ ಕಂಡು ಧೂಳೆಬ್ಬಿಸಿದೆ. ಈಗ ದುನಿಯಾ ವಿಜಯ್ ಅವರ ಮುಂದಿನ ನಡೆ ಏನು ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಇಷ್ಟೆಲ್ಲ ಆದ ಬಳಿಕ ದುನಿಯಾ ವಿಜಯ್ ಮತ್ತೆ ವಿಲನ್ ಆಗುತ್ತಾರೆ ಎಂಬ ಮಾಹಿತಿ ಕೇಳಿಬಂದಿದೆ. ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಹೊಸ ಚಿತ್ರದಲ್ಲಿ ವಿಜಯ್ ಖಳನಟನ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ದುನಿಯಾ ವಿಜಯ್ ಪತ್ನಿ ಕೀರ್ತಿಯವರ (Keerthi) ವರ್ಕೌಟ್ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral) ಆಗಿದೆ.

Duniya Vijay Telugu Film: ಟಾಲಿವುಡ್‌ನಲ್ಲಿ ವಿಲನ್ ಆಗಿ ದುನಿಯಾ ವಿಜಯ್ ಎಂಟ್ರಿ

ಕೀರ್ತಿ ದುನಿಯಾ ವಿಜಯ್ ಅವರ ಎರಡನೇ ಪತ್ನಿಯಾಗಿದ್ದು, ವಿವಾಹವಾಗುವ ಮೊದಲು ನಟಿಯಾಗಿದ್ದವರು. ದುನಿಯಾ ವಿಜಯ್ ಸಿನಿಮಾಗೆ ನಾಯಕಿಯಾಗಲು ಹೋದವರು ಅವರ ಜೀವನಕ್ಕೆ ನಾಯಕಿಯಾದರು. ಕೀರ್ತಿ ಕೂಡಾ ವಿಜಯ್‌ರಂತೆ ಫಿಟ್ನೆಸ್ ಪ್ರಿಯೆ ಅನ್ನೋದು ಇತ್ತೀಚೆಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ವೀಡಿಯೋನೆ ಸಾಕ್ಷಿ. ಆದರೆ ಮತ್ತೆ ಸಿನಿಮಾ ಮಾಡ್ತಾರಾ? ಅದಕ್ಕಾಗಿ ಹೀಗೆ ವರ್ಕೌಟ್ ವೀಡಿಯೋ ಹಂಚಿಕೊಂಡಿದ್ದಾರಾ, ಸದ್ಯದಲ್ಲೇ ಗೊತ್ತಾಗಲಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video