Asianet Suvarna News Asianet Suvarna News

ಮಕ್ಕಳಿಗೆ ದುಬಾರಿ ಕಾರ್ ಗಿಫ್ಟ್ ಕೊಟ್ಟ ದುನಿಯಾ ವಿಜಯ್

ದುನಿಯಾ ವಿಜಯ್, ಇದೀಗ ವಿಜಯ್ ತನ್ನ ಮಕ್ಕಳಿಗೆ ಓಡಾಡಾಲು ದುಬಾರಿ ಬೆಲೆಯ ಕಾರ್ ಒಂದನ್ನ ಗಿಫ್ಟ್ ಮಾಡಿದ್ದಾರೆ. ವಿಜಯ್ ಪುತ್ರಿ ಮೋನಿಕಾ ಈ ಕಾರನ್ನ ಡ್ರೈವ್ ಮಾಡಿ ಅಪ್ಪನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು 'ಲವ್ ಯು ಅಪ್ಪ' ಅಂತ ಕಾರ್ ಮುಂದೆ ತೆಗೆಸಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 

Aug 17, 2022, 4:34 PM IST

ಸ್ಯಾಂಡಲ್ ವುಡ್ ನ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಗೆ ಮೂರು ಜನ ಮಕ್ಕಳು. ವಿಜಯ್ ಮೊದಲ ಸಂಸಾರ ಸರಿ ಇಲ್ಲದಿದ್ರೂ ತನ್ನ ಮಕ್ಕಳನ್ನ ಮಾತ್ರ ವಿಜಯ್ ಮುದ್ದಾಗಿ ನೋಡಿಕೊಳ್ತಾರೆ. ಅವರ ಬೇಕು ಬೇಡಗಳನ್ನು ನೋಡಿಕೊಳ್ತಾರೆ. ವಿಜಯ್ ಗೆ ಮೋನಿಕಾ ಮತ್ತು ಮೋನಿಶಾ ಹಾಗು ಸಾಮ್ರಾಟ್ ಎನ್ನುವ ಮೂವರು ಮಕ್ಕಳಿದ್ದಾರೆ. ತನ್ನ ಸುಪುತ್ರ ಸಾಮ್ರಾಟ್ ಅನ್ನು ಸಿನಿಮಾ ನಟನಾಗೋಕೆ ಟ್ರೈನಿಂಗ್ ಕೊಡುತ್ತಿದ್ದಾರೆ ವಿಜಯ್, ಇದೀಗ ವಿಜಯ್ ತನ್ನ ಮಕ್ಕಳಿಗೆ ಓಡಾಡಾಲು ದುಬಾರಿ ಬೆಲೆಯ ಕಾರ್ ಒಂದನ್ನ ಗಿಫ್ಟ್ ಮಾಡಿದ್ದಾರೆ. ವಿಜಯ್ ಪುತ್ರಿ ಮೋನಿಕಾ ಈ ಕಾರನ್ನ ಡ್ರೈವ್ ಮಾಡಿ ಅಪ್ಪನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು 'ಲವ್ ಯು ಅಪ್ಪ' ಅಂತ ಕಾರ್ ಮುಂದೆ ತೆಗೆಸಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ವಿಜಯ್ ಮಕ್ಕಳಿಗಾಗಿ ಖರೀದಿಸಿರೋ ಈ  ತಾರ್ ಕಾರಿನ ಬೆಲೆ ಬರೋಬ್ಬರಿ 21 ಲಕ್ಷ ಬೆಲೆ ಬಾಳುತ್ತೆ. ವಿಜಯ್ ಪುತ್ರಿ ಮೋನಿಕಾ ಅಪ್ಪ ಕೊಡಿಸಿದ ಹೊಸ ಕಾರನ್ನು ಡ್ರೈವ್ ಮಾಡಿಕೊಂಡು ಹೋಗುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ವಿಜಯ್ ಸಧ್ಯ ಭೀಮ ಸಿನಿಮಾ ನಿರ್ದೇಶನದ ಜವಾಬ್ಧಾರಿ ಹೊತ್ತು ಶೂಟಿಂಗ್ ಮಾಡುತ್ತಿದ್ದು, ಟಾಲಿವುಡ್ ಸ್ಟಾರ್ ಬಾಲಯ್ಯನ ಸಿನಿಮಾದಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ.