Asianet Suvarna News Asianet Suvarna News

ಐ‍ಷಾರಾಮಿ ಕಾರಿಗೆ ಗುಡ್‌ಬೈ ಹೇಳಿದ ಡಿ-ಬಾಸ್‌; 'ಕರಿಯಾ' ಚಿತ್ರದ ಲೂನಾ ನೋಡಿ!

Jan 20, 2020, 1:36 PM IST

ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ ಸುಲ್ತಾನ ಜೀವನದಲ್ಲಿ ನಡೆದು ಬಂದ ಹಾದಿ ಹೇಳಿದರೆ ನೀವೇ ಶಾಕ್‌ ಆಗ್ತೀರಾ...! ಸರ್ಕಾರಿ ಬಸ್‌, ಲೂನಾದಲ್ಲಿ ಓಡಾಡುತ್ತಿದ್ದ ಲೈಟ್‌ ಮ್ಯಾನ್‌ ಈಗಾ ಕರ್ನಾಟದಲ್ಲೇ ಅತಿ ಹೆಚ್ಚು ದುಬಾರಿ ಕಾರುಗಳನ್ನು ಹೊಂದಿರುವ 'ಒಡೆಯ'.

ಡಿ-ಬಾಸ್ ಡಿಫರೆಂಟ್‌ ಸಂಕ್ರಾಂತಿ ಸೆಲೆಬ್ರೇಷನ್; ಕಿಚ್ಚು ಹಾಯಿಸಿದ್ದು ಹೀಗೆ!

ವೀಕೆಂಡ್‌ ಬಂದ್ರೆ ಸಾಕು ತಮ್ಮ ಫಾರ್ಮ್‌ ಹೌಸ್‌ನಲ್ಲಿ ಪ್ರಾಣಿ-ಪಕ್ಷಿಗಳೊಂದಿಗೆ ಕಾಲ ಕಳೆಯುತ್ತಾರೆ. ಪುತ್ರನೊಂದಿಗೆ ಕುದುರೆ ಸವಾರಿ ಮಾಡುತ್ತಾರೆ ಇಲ್ಲವಾದರೆ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಆದರೆ ಈ ವೀಕೆಂಡ್‌ ಮಾತ್ರ ಫುಲ್‌ ಡಿಫರೆಂಟ್‌. 

ಚಿತ್ರರಂಗದಲ್ಲಿ ಲೈಟ್‌ ಮ್ಯಾನ್‌ ಆಗಿ ನಟನಾಗಲು ಕಷ್ಟ ಪಡುತ್ತಿದ್ದ ಸಮಯದಲ್ಲಿ ದರ್ಶನ್‌ಗೆ ತಂದೆ ತೂಗುದೀಪ್‌ ಶ್ರೀನಿವಾಸ್‌ ಲೂನಾವೊಂದನ್ನು ಕೊಡಿಸಿದ್ದರು. ಈಗಲೂ ಈ ಲೂನಾ ಗಾಡಿಯನ್ನು ಜೋಪಾನ ಮಾಡಿದ್ದಾರೆ. ಭಾನುವಾರ ತಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯುತ್ತಾ ಲೂನಾ ಸಾವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.