ಕೊನೆಗೂ ಆಸ್ಪತ್ರೆ ವಾಸ ಅಂತ್ಯ, ಮನೆಗೆ ಹೋಗಿರುವ ನಟ ದರ್ಶನ್ ಮುಂದಿನ ಕಥೆ ಏನು?

ನಟ ದರ್ಶನ್ ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಬಳ್ಳಾರಿ ಜೈಲಿನಿಂದ ಮಧ್ಯಂತರ ಬೇಲ್ ಮೇಲೆ ಹೊರಬಂದು ಆಸ್ಪತ್ರೆ ಸೇರಿದ್ದ 'ದಾಸ' ಕೊನೆಗೂ ಆಸ್ಪತ್ರೆವಾಸ ಮುಗಿಸಿ ಮನೆಗೆ ತೆರಳಿದ್ದಾರೆ. ಬೆನ್ನು ನೋವಿನ ಸರ್ಜರಿ ಸಲುವಾಗಿ ಜೈಲಿನಿಂದ ..

Share this Video
  • FB
  • Linkdin
  • Whatsapp

ನಟ ದರ್ಶನ್ (Darshan Thoogudeepa) ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಬಳ್ಳಾರಿ ಜೈಲಿನಿಂದ ಮಧ್ಯಂತರ ಬೇಲ್ ಮೇಲೆ ಹೊರಬಂದು ಆಸ್ಪತ್ರೆ ಸೇರಿದ್ದ 'ದಾಸ' ಕೊನೆಗೂ ಆಸ್ಪತ್ರೆವಾಸ ಮುಗಿಸಿ ಮನೆಗೆ ತೆರಳಿದ್ದಾರೆ. ಬೆನ್ನು ನೋವಿನ ಸರ್ಜರಿ ಸಲುವಾಗಿ ಜೈಲಿನಿಂದ ಹೊರಬಂದು, ಬಳಿಕ ಬೇಲ್ ಪಡೆದು ಈಗ ಬಿಡುಗಡೆ ಆಗಿದ್ದಾರೆ ನಟ ದರ್ಶನ್. 

ಶುಕ್ರವಾರ ರೆಗ್ಯೂಲರ್ ಬೇಲ್ ಮಂಜೂರು ಆದ ಮೇಲೆ ಸೋಮವಾರ ಕೋರ್ಟ್​ಗೆ ತೆರಳಿದ್ದ ದರ್ಶನ್, ಬೇಲ್ ಪ್ರಕ್ರಿಯೆಗಳನ್ನ ಮುಗಿಸಿ ಮತ್ತೆ ಆಸ್ಪತ್ರೆಗೆ ಬಂದಿದ್ದರು. ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಅಲ್ಲಿಗೆ ದರ್ಶನ್ 49 ದಿನಗಳ ಆಸ್ಪತ್ರೆ ವಾಸ ಮುಗಿಸಿದ್ದು, ಪತ್ನಿ ವಿಜಯಲಕ್ಷ್ಮೀ ಮತ್ತು ಪುತ್ರ ವಿನೀಶ್ ಬಂದು ದರ್ಶನ್​ನ ಮನೆಗೆ ಕರೆದೊಯ್ದಿದ್ದಾರೆ. ಇದೀಗ, ನಟ ದರ್ಶನ್ ಮುಂದಿನ ಕಥೆ ಏನು? ಸಿನಿಮಾ ಶೂಟಿಂಗ್ ಶುರುವಾಗುತ್ತಾ? ಈ ಎಲ್ಲ ಮಾಹಿತಿಗೆ ವಿಡಿಯೋ ನೋಡಿ.. 

Related Video