ಆರೋಪಿ ಬಳಿ ಗನ್, ಸಾಕ್ಷಿಗಳಿಗೆ ಪ್ರಾಣಭೀತಿ; ದರ್ಶನ್ಗೆ ನೊಟೀಸ್ ನೀಡಿದ ಆಡಳಿತ ವಿಭಾಗದ ಡಿಸಿಪಿ
ದರ್ಶನ್ಗೆ ಜಾಮೀನು ಸಿಕ್ಕಿದ್ದರೂ, ಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿದೆ. ಈಗ ಪೊಲೀಸ್ ಇಲಾಖೆ ಅವರ ಗನ್ ಲೈಸೆನ್ಸ್ ರದ್ದುಗೊಳಿಸುವ ಸಾಧ್ಯತೆಯಿದೆ.
ದರ್ಶನ್ಗೆ ಬೇಲ್ ಏನೋ ಸಿಕ್ಕಿದೆ. ಆದ್ರೆ ಕಾನೂನು ಕಂಟಕ ಇನ್ನೂ ಮುಗಿದಿಲ್ಲ. ಜಾಮೀನು ಕೊಟ್ಟರೂ ಕೋರ್ಟ್ ಹಲವು ಷರತ್ತುಗಳನ್ನ ಹಾಕಿದೆ. ಏನೇ ಮಾಡಬೇಕಂದ್ರೂ ದರ್ಶನ್ ಕೋರ್ಟ್ ಅನುಮತಿ ಪಡೆದೇ ಮಾಡಬೇಕಿದೆ. ಸದ್ಯ ದರ್ಶನ್ ಗೆ ಮತ್ತೊಂದು ಕಂಟಕ ಎದುರಾಗಿದ್ದು, ಗನ್ ಲೈಸೆನ್ಸ್ ರದ್ದು ಮಾಡೋದಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.ದರ್ಶನ್ ಗನ್ ಲೈಸೆನ್ಸ್ ಹೊಂದಿದ್ದು ತನ್ನ ಸ್ವರಕ್ಷಣೆಗೆ ಅಂತ ಎರಡು ಗನ್ಗಳನ್ನ ಇಟ್ಟುಕೊಂಡಿದ್ದಾರೆ. ಆದ್ರೆ ಈಗ ದರ್ಶನ್ ಕೊಲೆ ಕೇಸ್ನಲ್ಲಿ ಆರೋಪಿಯಾಗಿದ್ದಾರೆ. ಹೀಗೆ ಕೊಲೆ ಆರೋಪಿ ಬಳಿ ಗನ್ ಇದ್ರೆ ಸಾಕ್ಷಿಗಳಿಗೆ ಬೆದರಿಸೋ ಸಾಧ್ಯತೆ ಇರುತ್ತೆ. ಅಂತೆಯೇ ಆಡಳಿತ ವಿಭಾಗದ ಡಿಸಿಪಿ ಪದ್ಮಿನಿ ಸಾಹು ದರ್ಶನ್ಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ನೊಟೀಸ್ಗೆ ದರ್ಶನ್ ನೀಡುವ ಉತ್ತರವನ್ನ ನೋಡಿಕೊಂಡು ಪೊಲೀಸ್ ಇಲಾಖೆ ಮುಂದಿನ ತೀರ್ಮಾನಕ್ಕೆ ಬರಲಿದೆ. ಅಲ್ಲಿಗೆ ಬಹುತೇಕ ದರ್ಶನ್ ಗನ್ ಲೈಲೆನ್ಸ್ ರದ್ದು ಆಗಲಿದೆ.
ಜಾರಿ ಬಿದ್ದ ಜಾಣೆ, ಡೈರೆಕ್ಟರ್ಸ್ ಕ್ಷಮೆ ಕೇಳಿದ್ದೇಕೆ ರಶ್ಮಿಕಾ; ಕಾಲಿಗೆ ಪೆಟ್ಟು ಮಾಡ್ಕೊಂಡ ಕೊಡವತಿ