ಅಣ್ಣಾವ್ರ ಭಕ್ತ ಪ್ರಹ್ಲಾದ ಚಿತ್ರಕ್ಕೂ ಕೈವ ಸಿನಿಮಾದ ಆ ಘಟನೆಗೂ ಇದೆಯಾ ಕನೆಕ್ಷನ್ ?
ಸ್ಯಾಂಡಲ್‌ವುಡ್‌ನಲ್ಲಿ ಕೈವಾ ಸಿನಿಮಾ ಟೀಸರ್ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.'ಕೈವ' ಚಿತ್ರಕ್ಕೂ ಗಂಗಾರಾಮ್ ಕಟ್ಟಡ ಕುಸಿತದ ಘಟನೆಗೂ ಒಂದು ಲಿಂಕ್ ಇದೆ ಎನ್ನಲಾಗ್ತಿದೆ.
ಅಣ್ಣಾವ್ರ ಭಕ್ತ ಪ್ರಹ್ಲಾದ ಚಿತ್ರಕ್ಕೂ ಕೈವ ಚಿತ್ರದ ಆ ಘಟನೆಗೂ ಇದಿಯಾ ಕನೆಕ್ಷನ್? ಏನು ಆ ಕನೆಕ್ಷನ್ ? 'ಒಲವೇ ಮಂದಾರ', 'ಬೆಲ್ ಬಾಟಂ' ಸೇರಿದಂತೆ ಅನೇಕ ವಿಶಿಷ್ಠ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ ಜಯತೀರ್ಥ(Jayathirtha) ಹೊಸ ಸಿನಿಮಾ ಜೊತೆ ಅಖಾಡಕ್ಕಿಳಿದಿದ್ದಾರೆ. ಅದುವೇ ಧನ್ವೀರ್ ನಟನೆಯ 'ಕೈವ'(Kaiva). ಸಿನಿಮಾ ಟೈಟಲ್ ಕುತೂಹಲ ಕೆರಳಿಸುತ್ತೆ. ಇತ್ತೀಚೆಗೆ ರಿಲೀಸ್ ಆಗಿರೋ ಟೀಸರ್ ನೋಡಿದವರಿಗೆ ಇದೊಂದು ಮಾಮೂಲಿ ರೌಡಿಸಂ ಸಿನಿಮಾ ಅನಿಸಬಹುದು. ಆದರೆ ಟೀಸರ್ (Teaser)ನೋಡಿದವರಿಗಂತೂ ಗಂಗಾರಾಮ್ ಕಟ್ಟಡ ದುರಂತದ ಬಗ್ಗೆಯಾಗಲಿ ಅಣ್ಣಾವ್ರ ಭಕ್ತ ಪ್ರಹ್ಲಾದ ಸಿನಿಮಾ ರಿಲೀಸ್ ನೆರಳಾಗಲಿ ಸಿಗೋಲ್ಲ. ನಿರ್ದೇಶಕ ಜಯತೀರ್ಥ "ಕೈವ ಎಂಬುದು ಓರ್ವ ವ್ಯಕ್ತಿಯ ಹೆಸರಾಗಿದ್ದು, ಬೆಂಗಳೂರು(Bengaluru) ಕರಗದಲ್ಲಿ ಹುಟ್ಟಿದ ಪ್ರೇಮಕಥೆಯೇ 'ಕೈವ' ಸಿನಿಮಾದ ಪ್ರಮುಖ ಕಥಾವಸ್ತು. ಶವಾಗಾರದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರಿಂದ ನನಗೆ ಈ ಕಥೆ ಸಿಕ್ಕಿದ್ದಿ, ಬಳಿಕ ತಿಗಳರಪೇಟೆಗೆ ಹೋಗಿ ಅಲ್ಲಿ, ಆ ಘಟನೆ ಬಗ್ಗೆ ಕೂಲಂಕಷವಾಗಿ ತಿಳಿದುಕೊಂಡೆ. ಈ ಘಟನೆ ಕಂಡಿದ್ದ ಅನೇಕರು ಈಗಲೂ ಅಲ್ಲಿ ವಾಸಿಸುತ್ತಿದ್ದಾರೆ. 1983ರಲ್ಲಿ ನಡೆದ ಗಂಗಾರಾಮ್ ಕಟ್ಟಡ ಕುಸಿತದ ದುರಂತಕ್ಕೂ ಹಾಗೂ ನಮ್ಮ ಚಿತ್ರದ ಕಥೆಗೂ ಸಂಬಂಧವಿದೆ' ಎಂದಿದ್ದಾರೆ. ಟೀಸರ್ ರಿಲೀಸ್ ದಿನ ನಿರ್ದೇಶಕರು ಹೀಗೆ ಹೇಳಿದ್ದೆ ಸಿನಿಮಾ ಕುರಿತು ಹೊಸಾ ಕುತೂಹಲ ಶುರುವಾಗಿದೆ.
ಇದನ್ನೂ ವೀಕ್ಷಿಸಿ: Today Horoscope: ವೃಶ್ಚಿಕ ರಾಶಿ ಪ್ರವೇಶಿಸಿದ ರವಿ..ಯಾವ ರಾಶಿಯವರಿಗೆ ಶುಭ ಫಲವಿದೆ ಗೊತ್ತಾ ?