ತೆರೆಮೇಲೆ ಕಡಲ ತೀರದ ಭಾರ್ಗವ; ಹೊಸಬರ ವಿಭಿನ್ನ ಪ್ರಯತ್ನ

ಹೊಸಬರ ಕಡಲ ತೀರದ ಭಾರ್ಗವ ಸಿನಿಮಾ ಇಂದು ರಿಲೀಸ್ ಆಗಿದೆ. 

Share this Video
  • FB
  • Linkdin
  • Whatsapp

ಉತ್ಸಾಹಿ ಯುವಕರ ತಂಡದಿಂದ ಮೂಡಿ ಬಂದಿರುವ ‘ಕಡಲತೀರದ ಭಾರ್ಗವ’ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿವೆ. ಈಗ ಚಿತ್ರ ಇಂದು (ಮಾರ್ಚ್ 03) ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಕಡಲ ತೀರದ ಭಾರ್ಗವ ಅಂದ್ರೆ ನೆನಪಾಗೋದು ಸಾಹಿತಿ ಡಾ. ಶಿವರಾಮ ಕಾರಂತರು. ಯಾಕಂದ್ರೆ ಕಾರಂತರನ್ನ ‘ಕಡಲತೀರದ ಭಾರ್ಗವ’ ಎಂಬ ಬಿರುದಿನಿಂದ ಕರೆಯುತ್ತಾರೆ. ಆದ್ರೆ ಆ ಕಾರಂತರಿಗೂ ಈಗ ಸಿನಿಮಾ ಆಗಿರೋ ಕಡಲ ತೀರದ ಭಾರ್ಗವನಿಗೂ ಯಾವುದೇ ಸಂಬಂಧ ಇಲ್ಲ. ಈ ಭಾರ್ಗವನ ಕಥೆಯೇ ಬೇರೆ. ಪನ್ನಗ ಸೋಮಶೇಖರ್ ನಿರ್ದೇಶನದಲ್ಲಿ ಬಂದಿರುವ ಕಡಲ ತೀರದ ಭಾರ್ಗವ ಸಿನಿಮಾದಲ್ಲಿ ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಇದೆ.

Related Video