ನನ್ನ ಹಾರ್ಟ್ ಬೆಂಗಳೂರಿನಲ್ಲಿದೆ; 'ಕಬ್ಜ' ಕ್ವೀನ್ ಶ್ರೀಯಾ ಶರಣ್

ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾದಲ್ಲಿ ಶ್ರೀಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಧುಮತಿ ಪಾತ್ರದಲ್ಲಿ ನಟಿಸಿರುವ ಶ್ರೀಯಾ ಲುಕ್ ಈಗಾಗಲೇ ವೈರಲ್ ಆಗಿದೆ. 

First Published Sep 19, 2022, 5:34 PM IST | Last Updated Sep 19, 2022, 5:34 PM IST

ಬಹುಭಾಷಾ ನಟಿ ಶ್ರೀಯಾ ಶರಣ್ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ, ಮಗು ಅಂತ ಬ್ಯುಸಿಯಾಗಿದ್ದ ಶ್ರೀಯಾ ಸದ್ಯ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂದಹಾಗೆ ಅನೇಕ ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಮರಳಿರುವ ಶ್ರೀಯಾ ಪ್ಯಾನ್ ಇಂಡಿಯಾ ಸಿನಿಮಾಗದಲ್ಲಿ ನಟಿಸುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾದಲ್ಲಿ ಶ್ರೀಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಧುಮತಿ ಎನ್ನುವ ಪಾತ್ರದಲ್ಲಿ ನಟಿಸಿರುವ ಶ್ರೀಯಾ ಲುಕ್ ಈಗಾಗಲೇ ವೈರಲ್ ಆಗಿದೆ. ಇತ್ತೀಚಿಗಷ್ಟೆ ನಡೆದ ಟೀಸರ್ ರಿಲೀಸ್ ಈವೆಂಟ್ ನಲ್ಲಿ ಶ್ರೀಯಾ ಬೆಂಗಳೂರಿನ ಬಗ್ಗೆ ಮಾತನಾಡಿದ್ದಾರೆ. ತನ್ನ ಹಾರ್ಟ್ ಬೆಂಗಳೂರಿನಲ್ಲಿದೆ, ಮೈಸೂರು ದೋಸೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.