Kaatera: ‘ಕಾಟೇರ’ ಸೆಲೆಬ್ರಿಟಿ ಶೋ ಹೌಸ್‌ಫುಲ್‌: ಮೆಟ್ಟಿಲ ಮೇಲೆ ಕುಳಿತು ಸಿನಿಮಾ ವೀಕ್ಷಿಸಿದ ದರ್ಶನ್,ರಾಕ್‌ಲೈನ್‌ !

ಕಾಟೇರ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ರಾಬರ್ಟ್ ಬಳಿಕ ನಿರ್ದೇಶಕ ತರುಣ್ ಕಿಶೋರ್ ಸುದೀರ್ ಮತ್ತೊಂದು ದೊಡ್ಡ ಗೆಲುವನ್ನೇ ನಟ ದರ್ಶನ್‌ಗೆ ಕೊಟ್ಟಿದ್ದಾರೆ. ಕಾಟೇರ ಶತ ಕೋಟಿಯ ಸನಿಹಕೆ ಬಂದು ನಿಂತಿದೆ. ಈ ಖುಷಿಯನ್ನು ಇಡೀ ಚಿತ್ರತಂಡ ಸಂಭ್ರಮಿಸಿತ್ತು. 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿಗಳಿಗೆ ಸಿನಿಮಾ ಪ್ರದರ್ಶನಕ್ಕೆ ಕಾಟೇರ(Kaatera Movie) ಚಿತ್ರತಂಡ ಆಹ್ವಾನಿಸಿತ್ತು. ಅದರಂತೆ ಸ್ಯಾಂಡಲ್‌ವುಡ್‌ನ(Sandalwood) ಹಲವು ಕಲಾವಿದರೂ ಕಾಟೇರ ಸೆಲೆಬ್ರಿಟಿ ಶೋಗೆ(Celebrity Show) ಆಗಮಿಸಿದ್ದರು. ಸ್ವತಃ ದರ್ಶನ್‌ಗೂ ಮತ್ತು ನಿರ್ಮಾಪಕ ರಾಕ್‌ಲೈನ್‌ (Rockline Venkatesh)ಕುಳಿತುಕೊಳ್ಳಲು ಸೀಟ್ ಸಿಕ್ಕಿರಲಿಲ್ಲ. ಮೆಟ್ಟಿಲ ಮೇಲೆ ಕುಳಿತುಕೊಂಡೇ ಸಿನಿಮಾ ವೀಕ್ಷಿಸಿದ್ದಾರೆ. ಬೆಂಗಳೂರಿನ(Bengaluru) ಒರಿಯಾನ್ ಮಾಲ್‌ನಲ್ಲಿ ಕಾಟೇರ ಸಿನಿಮಾದ ಸೆಲೆಬ್ರಿಟಿ ಶೋಗೆ ಸೆಲೆಬ್ರೆಟಿಗಳು ಹಾಗೆ ಬಂದಿದ್ದರು. ಹಿರಿಯ ನಟಿ ಬಿ ಸರೋಜಾ ದೇವಿ, ರಮೇಶ್ ಅರವಿಂದ್, ಯೋಗರಾಜ್ ಭಟ್, ಅಮೂಲ್ಯ ಸೇರಿ ಹತ್ತು ಹಲವು ಕಲಾವಿದರು ಆಗಮಿಸಿ ಸಿನಿಮಾ ವೀಕ್ಷಿಸಿ ಸಂಭ್ರಮಿಸಿದರು. ಕಾಟೇರನನ್ನು ನೋಡಲು ರಮೇಶ್ ಅರವಿಂದ್, ಬಿ ಸರೋಜಾದೇವಿ, ನಟಿ ಶ್ರುತಿ, ಮಾಲಾಶ್ರೀ, ಧನಂಜಯ್, ವಿನೋದ್ ಪ್ರಭಾಕರ್, ಸತೀಶ್ ನೀನಾಸಂ, ಅಮೂಲ್ಯ, ಮೇಘಾ ಶೆಟ್ಟಿ, ಧನ್ವೀರ್ ಗೌಡ, ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ, ರಕ್ಷಿತಾ ಪ್ರೇಮ್, ಕುಮಾರ್ ಗೋವಿಂದ್, ವಿಕ್ರಂ ರವಿಚಂದ್ರನ್, ಮನುರಂಜನ್ ರವಿಚಂದ್ರನ್, ನಿರ್ದೇಶಕರಾದ ಯೋಗರಾಜ್ ಭಟ್, ಚೇತನ್ ಕುಮಾರ್, ಕೃಷ್ಣ, ನಿಶ್ವಿಕಾ ನಾಯ್ಡು, ಎಸ್ ನಾರಾಯಣ್, ಮೇಘನಾ ಗಾಂವ್ಕರ್, ವಸಿಷ್ಠ ಸಿಂಹ, ಹರಿಪ್ರಿಯಾ, ಪ್ರಿಯಾಂಕಾ ಉಪೇಂದ್ರ, ಸುಮಲತಾ, ಅಭಿಷೇಕ್ ಅಂಬರೀಶ್, ಸಾಧುಕೋಕಿಲ, ದೊಡ್ಡಣ್ಣ ಸೇರಿ ಇನ್ನೂ ಸಾಕಷ್ಟು ಮಂದಿ ಕಾಟೇರ ಸೆಲೆಬ್ರಿಟಿ ಶೋಗೆ ಆಗಮಿಸಿದ್ದರು. ಕಾಟೇರನನ್ನು ನೋಡಿ ಬಾಯ್ತುಂಬ ಹೊಗಳಿದರು.

ಇದನ್ನೂ ವೀಕ್ಷಿಸಿ: Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಕಷ್ಟ ಪರಿಹಾರಕ್ಕೆ ಲಲಿತಾ ಸಹಸ್ರನಾಮ ಪಠಿಸಿ

Related Video