Asianet Suvarna News Asianet Suvarna News

ಅಪ್ಪು ಅಣ್ಣನಂತಾ ಸ್ನೇಹಿತ, ರಿಷಬ್ ಶೆಟ್ಟಿ ದೇವರು ಕೊಟ್ಟ ಗೆಳೆಯ: ಜ್ಯೂ.ಎನ್​ಟಿಆರ್ ಹೇಳಿದ್ದೇನು?

ಟಾಲಿವುಡ್​​ನ ಯಂಗ್ ಟೈಗರ್​​ ಜ್ಯೂನಿಯರ್​ ಎನ್​ಟಿಆರ್​ಗೆ ಸ್ಯಾಂಡಲ್​​ವುಡ್​ನಲ್ಲಿ ಇಬ್ಬರು ಬೆಸ್ಟ್​ ಸ್ನೇಹಿತರನ್ನ ಸಂಪಾಧಿಸಿದ್ದಾರೆ. ಒಬ್ರು ಅಣ್ಣನ ಹಾಗೆ ಜೊತೆ ಇರೋ ಪವರ್ ಸ್ಟಾರ್ ಪುನೀತ್ ಆದ್ರೆ ಮತ್ತೊಬ್ರು ದೇವರು ಕೊಟ್ಟ ಸ್ನೇಹಿತ ರಿಷಬ್ ಶೆಟ್ಟಿ. 

First Published Sep 3, 2024, 12:21 PM IST | Last Updated Sep 3, 2024, 12:21 PM IST

ಟಾಲಿವುಡ್​​ನ ಯಂಗ್ ಟೈಗರ್​​ ಜ್ಯೂನಿಯರ್​ ಎನ್​ಟಿಆರ್​ಗೆ ಸ್ಯಾಂಡಲ್​​ವುಡ್​ನಲ್ಲಿ ಇಬ್ಬರು ಬೆಸ್ಟ್​ ಸ್ನೇಹಿತರನ್ನ ಸಂಪಾಧಿಸಿದ್ದಾರೆ. ಒಬ್ರು ಅಣ್ಣನ ಹಾಗೆ ಜೊತೆ ಇರೋ ಪವರ್ ಸ್ಟಾರ್ ಪುನೀತ್ ಆದ್ರೆ ಮತ್ತೊಬ್ರು ದೇವರು ಕೊಟ್ಟ ಸ್ನೇಹಿತ ರಿಷಬ್ ಶೆಟ್ಟಿ. ಹಾಗಾದ್ರೆ ಅಪ್ಪು ಹಾಗು ರಿಷಬ್ ಜೊತೆ ಜ್ಯೂನಿಯರ್ ಎನ್​ಟಿಆರ್ ಸ್ನೇಹಾ ಎಂಥಾದ್ದು..? ಇಲ್ಲಿದೆ ನೋಡಿ ಫುಲ್ ಡಿಟೈಲ್ಸ್. ಟಾಲಿವುಡ್​ನ ಯಂಗ್ ಟೈಗರ್​ ಜ್ಯೂನಿಯರ್ ಎನ್​ಟಿಆರ್​​ ಗೆ ಸ್ಯಾಂಡಲ್​ವುಡ್​​ನಲ್ಲಿ ಬೆಸ್ಟ್​ ಪ್ರೆಂಡ್ ಯಾರು ಅಂದ್ರೆ ಇನ್ ಯಾರ್ ಇರ್ತಾರೆ. ನಮ್ ಅಪ್ಪು ಪುನೀತ್ ಅಂತ ಎಲ್ಲರೂ ಹೇಳ್ತಾರೆ. ಅದು ನಿಜಾ ಕೂಡ. ಅಪ್ಪು ಜ್ಯೂನಿಯರ್ ಎನ್​ಟಿಆರ್​ದ್ದು ಅಣ್ಣ ತಮ್ಮಂದಿರ ಸ್ನೇಹ. ಹೀಗಾಗೆ ಜ್ಯೂನಿಯರ್​​ ಎನ್​ಟಿಆರ್ ಅಪ್ಪು ಸಿನಿಮಾದಲ್ಲಿ ಗೆಳೆಯಾ ಗೆಳೆಯಾ ಗೆಲುವೇ ನಿನದಯ್ಯ ಅಂತ ಹಾಡಿದ್ರು. 

ಆದ್ರೀಗ ಜ್ಯೂನಿಯರ್ ಎನ್​ಟಿಆರ್​ಗೆ ದೇವರು ಕೊಟ್ಟ ಗೆಳೆಯ ಸಿಕ್ಕಿದ್ದಾನೆ. ಅವರೇ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ. ಜ್ಯೂನಿಯರ್​​ ಎನ್​ಟಿಆರ್ ರನ್ನ ರಿಷಬ್ ಶೆಟ್ಟಿ ಫಸ್ಟ್ ಟೈಂ ಭೇಟಿ ಆಗಿದ್ದು, ಕಿರಿಕ್ ಪಾರ್ಟಿ ಚಿತ್ರಕ್ಕೆ ಸೈಮಾ ಪ್ರಶಸ್ತಿ ಬಂದಾಗ. ಈ ಸೈಮಾ ಅವಾರ್ಡ್​​ಅನ್ನ ಎನ್​ಟಿಆರ್ ಅವರೇ ರಿಷಬ್ ಶೆಟ್ಟಿಗೆ ಪ್ರಧಾನ ಮಾಡಿದ್ರು. ಅಷ್ಟೆ ಅಲ್ಲ ರಿಷಬ್ ಶೆಟ್ಟಿ ಹುಟ್ಟೂರು ಕುಂದಾಪುರ. ಜ್ಯೂ. ಎನ್​ಟಿಆರ್ ತಾಯಿಯ ತವರೂರು ಕುಂದಾಪುರ. ಹೀಗಾಗಿ ಇವರಿಬ್ಬ ಮಧ್ಯೆ ಒಂದೊಳ್ಳೆ ಸ್ನೇಹ ಬೆಸೆದುಕೊಂಡಿದೆ. ಇವರಿಬ್ಬರ ಸ್ನೇಹ ಈಗ ದೇವಸ್ಥಾನದಲ್ಲಿ  ಗೊತ್ತಾಗಿದೆ. ಯಾಕಂದ್ರೆ ಜ್ಯೂನಿಯರ್ ಎನ್​ಟಿಆರ್​​ ಕುಟುಂಬವನ್ನ ನಟ ರಿಷಬ್ ಶೆಟ್ಟಿ ಉಡುಪಿಯ ಶ್ರೀಕಷ್ಣ ಮಠ ಹಾಗು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ.  

ರಿಷಬ್ ದೇವರು ಕೊಟ್ಟ ಗೆಳೆಯ ಅಂತ ಜ್ಯೂನಿಯರ್ ಎನ್​ಟಿಆರ್​ ಹೇಳಿಕೊಂಡಿದ್ದಾರೆ. ತಾರಕ್ ಎಂದೇ ತೆಲುಗಿನವರು ಪ್ರೀತಿಯಿಂದ ಕರೆಯೋ ಜೂನಿಯರ್ ಎನ್​ಟಿಆರ್, ಉಡುಪಿ ಮತ್ತು ಕೊಲ್ಲೂರಿನಲ್ಲಿ ತೀರ್ಥಯಾತ್ರೆ ಮಾಡಿದ್ದಾರೆ. ಜ್ಯೂನಿಯರ್​ ಎನ್​ಟಿಆರ್ ಜೊತೆ ದೇವರು ಕೊಟ್ಟ ಗೆಳೆಯ ರಿಷಬ್ ಕೂಡ ಇದ್ರು. ಕುಂದಾಪುರದವರೇ ಆದ ಎನ್​ಟಿಆರ್ ತಾಯಿ ಶಾಲಿನಿ ಭಾಸ್ಕರ್ ರಾವ್ 40 ವರ್ಷದ ಹಿಂದೆ ಹರಕೆ ಕಟ್ಟಿಕೊಂಡಿದ್ರು. ಈಗ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಬಂದು ಹರಕೆ ತಿರಿಸಿದ್ದಾರೆ. ಎನ್ಟಿಆರ್ ಗೆ ತಾಯಿ ಶಾಲಿನಿ, ಹಾಗೂ ಪತ್ನಿ ಲಕ್ಷ್ಮಿ ಪ್ರಣತಿ ಜೊತೆಯಾಗಿದ್ದರೆ, ರಿಷಬ್ ಶೆಟ್ಟಿ ಜೊತೆ ಅವರ ಪತ್ನಿ ಪ್ರಗತಿಶೆಟ್ಟಿ ಜೊತೆಗಿದ್ರು.