James 2022: ಬಾಕ್ಸಾಫೀಸ್‌ನಲ್ಲಿ ನೂರು ಕೋಟಿ ಕ್ಲಬ್‌ಗೆ ಸೇರಲಿದೆಯಂತೆ ಪುನೀತ್ ಸಿನಿಮಾ!

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ನಟನೆಯ ಬಹು ನಿರೀಕ್ಷಿತ ‘ಜೇಮ್ಸ್‌’ ಚಿತ್ರ ಇದೇ ಮಾರ್ಚ್ 17ರಂದು ಪುನೀತ್ ಹುಟ್ಟುಹಬ್ಬದಂದು ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದು, ವಾರದೊಳಗೇ 'ನೂರು ಕೋಟಿ ಕ್ಲಬ್' ಸೇರಲಿದೆ ಎಂದು ಸಿನಿಪಂಡಿತರು ಲೆಕ್ಕಚಾರ ಹಾಕಿದ್ದಾರೆ. 

Share this Video
  • FB
  • Linkdin
  • Whatsapp

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ನಟನೆಯ ಬಹು ನಿರೀಕ್ಷಿತ ‘ಜೇಮ್ಸ್‌’ (James) ಚಿತ್ರ ಇದೇ ಮಾರ್ಚ್ 17ರಂದು ಪುನೀತ್ ಹುಟ್ಟುಹಬ್ಬದಂದು ಏಕಕಾಲಕ್ಕೆ ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆ ಆಗುತ್ತಿದೆ. ಹೊರ ದೇಶಗಳಲ್ಲೂ ‘ಜೇಮ್ಸ್‌’ ದರ್ಶನ ಆಗುತ್ತಿದೆ. ಪುನೀತ್ ನಟನೆಯ ಕೊನೆ ಸಿನಿಮಾ ಇದಾಗಿದ್ದರಿಂದ ಈ ಸಿನಿಮಾವನ್ನು ದಾಖಲೆಯ ರೀತಿಯಲ್ಲಿ ಪ್ರದರ್ಶಿಸಬೇಕು ಎನ್ನುವುದು ನಿರ್ದೇಶಕ ಚೇತನ್ ಕನಸು. ಹಾಗಾಗಿಯೇ ಜಗತ್ತಿನಾದ್ಯಂತ ನಾಲ್ಕು ಸಾವಿರ ಚಿತ್ರಮಂದಿರಗಳಲ್ಲಿ ಜೇಮ್ಸ್ ಪ್ರದರ್ಶನವಾಗಲಿದೆಯಂತೆ. 

James 2022: ಪುನೀತ್ ರಾಜ್‍ಕುಮಾರ್ ಕೊನೆ ಚಿತ್ರಕ್ಕೆ ಸಿಕ್ತು ಯು/ಎ ಸರ್ಟಿಫಿಕೇಟ್!

ಅಂದಾಜಿನ ಪ್ರಕಾರ ವಾರದೊಳಗೇ ಜೇಮ್ಸ್ 'ನೂರು ಕೋಟಿ ಕ್ಲಬ್' ಸೇರಲಿದೆ ಎಂದು ಸಿನಿಪಂಡಿತರು ಲೆಕ್ಕಚಾರ ಹಾಕಿದ್ದಾರೆ. ವಿಶೇಷವಾಗಿ ಮಾರ್ಚ್ 13ರಂದು ಮೈಸೂರಿನಲ್ಲಿ 'ಜೇಮ್ಸ್' ಪ್ರಿ-ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಅಂದು ಸಾವಿರಾರು ಅಪ್ಪು ಅಭಿಮಾನಿಗಳು ಕಾರ್ಯಕ್ರಮಕ್ಕೆ ಸೇರುವ ನಿರೀಕ್ಷೆಯಿದೆ. ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಪವರ್ ಆರ್ಮಿ ಆಫೀಸರ್ ಆಗಿ ಸಿನಿರಸಿಕರಿಗೆ ಕಿಕ್ ಕೊಟ್ಟಿದ್ದಾರೆ. ಪುನೀತ್‌ಗೆ ನಾಯಕಿಯಾಗಿ ಪ್ರಿಯಾ ಆನಂದ್ ಜೋಡಿಯಾಗಿದ್ದಾರೆ. ಚೇತನ್ ಕುಮಾರ್ (Chetan Kumar) ನಿರ್ದೇಶನದ ಈ ಚಿತ್ರಕ್ಕೆ ಕಿಶೋರ್ ಪತ್ತಿಕೊಂಡ (Kishore Pathikonda) ಬಂಡವಾಳ ಹೂಡಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video