ಜಗ್ಗೇಶ್ 'ತೋತಾಪುರಿ' ಟ್ರೇಲರ್‌ಗೆ ಭರ್ಜರಿ ರೆಸ್ಪಾನ್ಸ್

ಜಗ್ಗೇಶ್- ಅದಿತಿ ಪ್ರಭುದೇವ್ (Jaggesh Aditi Prabhudev) ನಟನೆಯ ತೋತಾಪುರಿ (Totapuri)  ಸಿನಿಮಾದ ಟ್ರೇಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾದ ಹಾಡು ಹಿಟ್ ಆಗಿದೆ. ‘ನೀರುದೋಸೆ’ ಬಳಿಕ ನಿರ್ದೇಶಕ ವಿಜಯ ಪ್ರಸಾದ್‌ ನಿರ್ದೇಶಿಸಿರುವ ರೊಮ್ಯಾಂಟಿಕ್‌ ಕಾಮಿಡಿ ಡ್ರಾಮಾ ‘ತೋತಾಪುರಿ’. ಜಗ್ಗೇಶ್‌, ಧನಂಜಯ್‌, ಅದಿತಿ ಪ್ರಭುದೇವ ನಟಿಸಿದ್ದಾರೆ. 

Share this Video
  • FB
  • Linkdin
  • Whatsapp

ಜಗ್ಗೇಶ್- ಅದಿತಿ ಪ್ರಭುದೇವ್ (Jaggesh Aditi Prabhudev) ನಟನೆಯ ತೋತಾಪುರಿ (Totapuri) ಸಿನಿಮಾದ ಟ್ರೇಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾದ ಹಾಡು ಹಿಟ್ ಆಗಿದೆ. ‘ನೀರುದೋಸೆ’ ಬಳಿಕ ನಿರ್ದೇಶಕ ವಿಜಯ ಪ್ರಸಾದ್‌ ನಿರ್ದೇಶಿಸಿರುವ ರೊಮ್ಯಾಂಟಿಕ್‌ ಕಾಮಿಡಿ ಡ್ರಾಮಾ ‘ತೋತಾಪುರಿ’. ಜಗ್ಗೇಶ್‌, ಧನಂಜಯ್‌, ಅದಿತಿ ಪ್ರಭುದೇವ ನಟಿಸಿದ್ದಾರೆ. 

ಅಜಯ್ ದೇವಗನ್-ಸುದೀಪ್ ಮಧ್ಯೆ ಹಿಂದಿ ವಿವಾದ ಉಂಟಾಗಿದ್ಹೇಗೆ.?

ತೋತಾಪುರಿ ಸಿನಿಮಾದಲ್ಲಿ ನಟಿ ಅಧಿತಿ ಪ್ರಭುದೇವ ಮುಸ್ಲಿಂ ಹುಡುಗಿ ರೋಲ್ ಮಾಡಿದ್ದಾರೆ. ಇನ್ನುಳಿದಂತೆ ದತ್ತಣ್ಣ, ವೀಣಾ ಸುಂದರ್ ಕೂಡ ನಟಿಸಿದ್ದಾರೆ. ನಟ ಡಾಲಿ ಧನಂಜಯ್ ರೋಲ್ ಸಿನಿಮಾದಲ್ಲಿ ಕುತೂಹಲ ಮೂಡಿಸಿದೆ. ಸೀರಿಯಸ್ ಪಾತ್ರಗಳಿಂದ ಫೇಮಸ್ ಆಗಿರೋ ಡಾಲಿ ಈ ಸಿನಿಮಾದಲ್ಲಿ ಪೋಲಿ ಡೈಲಾಗ್ ಹೊಡೆದಿದ್ದಾರೆ.

ನವರಸ ನಾಯಕನ ತೋತಾಪುರಿಯನ್ನು ಎರಡು ಹೋಳಾಗಿ ಮಾಡಿ ಸಿನಿ ರಸಿಕರಿಗೆ ಹಂಚಲು ಪೋಲಿ ಮಾತುಗಳ ಸರ್ದಾರ ನಿರ್ದೇಶಕ ವಿಜಯ್ ಪ್ರಸಾದ್ ಪಕ್ಕ ಪ್ಲಾನ್ ಮಾಡಿದ್ದಾರೆ. ಅಂದ್ರೆ ತೋತಾಪುರಿ ಸಿನಿಮಾ ಎರಡು ಭಾಗಗಳಲ್ಲಿ ತೆರೆ ಕಾಣುತ್ತಿದೆ. ನಿರ್ಮಾಪಕ ಕೆ.ಎ ಸುರೇಶ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅನೂಪ್ ಸಿಳಿನ್ ಮ್ಯೂಸಿಕ್ ಕೊಟ್ಟಿದ್ದಾರೆ. 

Related Video