ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಒಟ್ಟು ಗಳಿಸಿದ್ದೆಷ್ಟು?
ಆಲ್ ಇಂಡಿಯಾ ಕಟೌಟ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಲ್ ಇಂಡಿಯಾ ರೆಕಾರ್ಡ್ ಬರೆದಿದ್ದಾರೆ. ಇಷ್ಟು ದಿನ ಕಿಚ್ಚನ ಸಿನಿಮಾಗಳ ಕಲೆಕ್ಷನ್ 50 ಕೋಟಿ ದಾಟಿದ್ದನ್ನ ನಾವು ನೀವೆಲ್ಲಾ ನೋಡಿದ್ದೇವೆ. ಇದೀಗ ಕಿಚ್ಚನ ನೇಮು ಫೇಮಿಗೆ ಕೈಗನ್ನಡಿಯಂತಿದೆ ವಿಕ್ರಾಂತ್ ರೋಣ ಸಿನಿಮಾ ಸಕ್ಸಸ್
ಆಲ್ ಇಂಡಿಯಾ ಕಟೌಟ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಲ್ ಇಂಡಿಯಾ ರೆಕಾರ್ಡ್ ಬರೆದಿದ್ದಾರೆ. ಇಷ್ಟು ದಿನ ಕಿಚ್ಚನ ಸಿನಿಮಾಗಳ ಕಲೆಕ್ಷನ್ 50 ಕೋಟಿ ದಾಟಿದ್ದನ್ನ ನಾವು ನೀವೆಲ್ಲಾ ನೋಡಿದ್ದೇವೆ. ಇದೀಗ ಕಿಚ್ಚನ ನೇಮು ಫೇಮಿಗೆ ಕೈಗನ್ನಡಿಯಂತಿದೆ ವಿಕ್ರಾಂತ್ ರೋಣ ಸಿನಿಮಾ ಸಕ್ಸಸ್. ಯಾಕಂದ್ರೆ ವಿಕ್ರಾಂತ್ ರೋಣನ ಗಲ್ಲಾಪೆಟ್ಟಿಗೆ ಕಲೆಕ್ಷನ್ ಈಗ್ಲೂ ಮುಂದುವರೆದಿದ್ದು, ಸುದೀಪ್ ಈಗ 210 ಕೋಟಿ ಸರದಾರನಾಗಿದ್ದಾರೆ. ಸುದೀಪ್ ಸಿನಿ ಖರಿಯರ್ನಲ್ಲಿ ವಿಕ್ರಾಂತ್ ರೋಣ ಬಿಗ್ ಸಕ್ಸಸ್ ಸಿನಿಮಾ.. ಮರ್ಡರ್ ಮಿಸ್ಟ್ರಿ ಕಥೆಯ ವಿಕ್ರಾಂತ್ ರೋಣನಿಗೆ ವರ್ಲ್ಡ್ ವೈಡ್ ಮಚ್ಚುಗೆ ಸಿಕ್ಕಿದೆ. ಇದರ ಫಲವೇ ಈ ಸಿನಿಮಾ 25 ದಿನ ಪೂರೈಸುತ್ತಿದ್ದು. ಕಲೆಕ್ಷನ್ನಲ್ಲಿ ಡಬಲ್ ಸೆಂಚುರಿ ಭಾರಿಸಿದೆ. ಕರ್ನಾಟಕ ಒಂದರಲ್ಲೇ ಸುದೀಪ್ ಸಿನಿಮಾ 130 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕನ್ನಡದಲ್ಲಿ ಕೆಜಿಎಫ್-2 ಬಿಟ್ರೆ 130 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಅಂದ್ರೆ ಅದು ವಿಕ್ರಾಂತ್ ರೋಣ ಅನ್ನೋ ಹೆಗ್ಗಳಿಕೆ ಈ ಚಿತ್ರಕ್ಕೆ ಸಿಕ್ಕಿದೆ.